Snake Video: ಇಂದಿನ ಸೋಷಿಯಲ್ ಮಿಡಿಯಾ ಯುಗದಲ್ಲಿ ಹಾವುಗಳಿಗೆ ಸಂಬಂಧಿಸಿದ ವಿಡಿಯೋಗಳು ಕ್ಷಣದಲ್ಲೆ ವೈರಲ್ ಆಗುತ್ತಿರುತ್ತವೆ. ಹಾವುಗಳನ್ನು ಹಿಡಿಯುವಂತಹ ವಿಡಿಯೋಗಳು, ಹಾವುಗಳು ಮನೆಯಲ್ಲಿ ಅಡಗಿರುವಂತಹ ವಿಡಿಯೋಗಳು, ಹಾವುಗಳು ಆಹಾರ ನುಂಗುವಂತಹ ವಿಡಿಯೋಗಳು ಸಹ ವೈರಲ್ ಆಗುತ್ತಿರುತ್ತವೆ. ಅದೇ ರೀತಿಯ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಸದ್ದು ಮಾಡುತ್ತಿದೆ. ಈ ವಿಡಿಯೋ ನೋಡಿದರೇ ನೀವು ಸಹ ಅರೆ ಹಾವು ಸಹ ಡ್ರಾಮಾ ಆಡುತ್ತಾ ಅಂದುಕೊಳ್ಳುತ್ತೀರಾ.
ಇಂದಿನ ಡಿಜಿಟಲ್ ಯುಗದಲ್ಲಿ ಬಹುತೇಕರು ಸೋಷಿಯಲ್ ಮಿಡಿಯಾ ಬಳಸುತ್ತಾರೆ. ನೂರರಲ್ಲಿ ಕೇವಲ ನಾಲ್ಕೈದು ಮಂದಿ ಮಾತ್ರ ಸೋಷಿಯಲ್ ಮಿಡಿಯಾ ಬಳಸದೇ ಇರುವಂತಹವರು ಎಂದು ಹೇಳಬಹುದು. ಈ ಕಾರಣದಿಂದ ವಿಡಿಯೋಗಳು ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿರುತ್ತದೆ. ಅದರಲ್ಲೂ ಹಾವುಗಳ ವಿಡಿಯೋಗಳು ಮಾತ್ರ ಕಡಿಮೆ ಸಮಯದಲ್ಲಿ ವೈರಲ್ ಆಗುತ್ತವೆ. ಇಲ್ಲೊಂದು ಹಾವಿನ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಹಾವೊಂದು ತುಂಬಾ ಚೆನ್ನಾಗಿ ಡ್ರಾಮಾ ಆಡಿದೆ. ಈ ಹಾವನ್ನು ಮನುಷ್ಯ ಮುಟ್ಟಿದರೇ ಸಾಕು ಸತ್ತಂತೆ ಆಡುತ್ತದೆ. ಈ ವಿಡಿಯೋ ತುಂಬಾನೆ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಹಾವೊಂದು ನಾಟಕ ಮಾಡುವುದನ್ನು ಕಾಣಬಹುದಾಗಿದೆ. ಈ ಹಾವು ಸಾಕು ಹಾವಾಗಿದೆ ಎನ್ನಲಾಗಿದೆ. ಆ ಹಾವು ತನ್ನ ಯಜಮಾನನ ಜೊತೆಗೆ ಚೆನ್ನಾಗಿ ಆಟವಾಡಿದೆ. ನೆಲದ ಮೇಲಿದ್ದ ಹಾವು ತಲೆಯನ್ನು ಕೊಂಚ ಮೇಲಕ್ಕೆತ್ತಿ ಇರುತ್ತದೆ. ಅಲ್ಲಿಗೆ ಬಂದ ಯಜಮಾನ ತನ್ನ ಬೆರಳಿನಿಂದ ನಿಧಾನವಾಗಿ ಹಾವನ್ನು ಮುಟ್ಟಿದ್ದಾನೆ. ಆಗ ಅದು ಒಂದು ಕಡೆಗೆ ತಿರುಗುತ್ತದೆ. ನೋಡಿದರೇ ಆ ಹಾವು ಸತ್ತಂತೆ ಭಾವನೆಯಾಗುತ್ತದೆ. ಆದರೆ ಆ ಹಾವು ನಾಟಕ ಆಡುತ್ತಿರುತ್ತದೆ. ಈ ವಿಡಿಯೋ ಇದೀಗ ಇಂಟರ್ ನೆಟ್ ನಲ್ಲಿ ಸಖತ್ ವೈರಲ್ ಆಗುತ್ತಿದೆ.
ಇನ್ನೂ ಈ ವಿಡಿಯೋವನ್ನು ಪಬ್ಲಿಟಿ ಖಾತಾ ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ವಿಡಿಯೋ ಬಿರುಗಾಳಿಯಂತೆ ಹರಿದಾಡುತ್ತಿದೆ. ನನ್ನ ಹಾವು ಸತ್ತಂತೆ ಆಕ್ಟಿಂಗ್ ಮಾಡುವುದನ್ನು ಕಲಿಯುತ್ತಿದೆ, ತುಂಬಾ ಚೆನ್ನಾಗಿ ಆಕ್ಟಿಂಗ್ ಮಾಡುತ್ತಿದೆ ಎಂಬ ಟೈಟಲ್ ನಡಿ ವಿಡಿಯೋ ಹಂಚಿಕೊಳ್ಳಲಾಗಿದೆ. ಇನ್ನೂ ವಿಡಿಯೋ ನೋಡಿದ ಅನೇಕರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಜೊತೆಗೆ ಅನೇಕರು ವಿಡಿಯೋ ನೋಡಿ ಆಶ್ಚರ್ಯಚಕಿತರಾಗಿದ್ದಾರೆ.