Saturday, August 30, 2025
HomeSpecialViral Reels: ಮಿತಿ ಮೀರಿದ ರೀಲ್ಸ್ ಹುಚ್ಚು, ಫಸ್ಟ್ ನೈಟ್ ವಿಡಿಯೋ ಹಂಚಿಕೊಂಡ ನವದಂಪತಿ, ವೈರಲ್...

Viral Reels: ಮಿತಿ ಮೀರಿದ ರೀಲ್ಸ್ ಹುಚ್ಚು, ಫಸ್ಟ್ ನೈಟ್ ವಿಡಿಯೋ ಹಂಚಿಕೊಂಡ ನವದಂಪತಿ, ವೈರಲ್ ಆದ ವಿಡಿಯೋ…..!

ಇತ್ತೀಚಿಗೆ ರೀಲ್ಸ್ ಹುಚ್ಚು ಬಹಳಷ್ಟು ಮಂದಿಯಲ್ಲಿ ಹಬ್ಬಿದೆ ಎನ್ನಬಹುದಾಗಿದೆ. ಜೊತೆಗೆ ವ್ಲಾಗ್ ಮಾಡುವಂತಹ ಹುಚ್ಚು ಸಹ ಹೆಚ್ಚಾಗಿದೆ. ಸಿಂಗಲ್ಸ್ ಸೇರಿದಂತೆ ದಂಪತಿಗಳೂ ಸಹ ಅನೇಕ ವ್ಲಾಗ್ ಗಳನ್ನು ಮಾಡುತ್ತಾರೆ. ಆದರೆ ಕೆಲವರು ವ್ಲಾಗ್ ಮಾಡುತ್ತಾ ಮಿತಿ ಮೀರಿ ವರ್ತನೆ ಮಾಡುತ್ತಾರೆ. ಅಸಭ್ಯಕರವಾದ ವಿಡಿಯೋಗಳನ್ನು ಸಹ ಹಂಚಿಕೊಂಡು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತಾರೆ. ಇದೀಗ ಹೊಸದಾಗಿ ಮದುವೆಯಾದ ಜೋಡಿ ತಮ್ಮ ಮೊದಲ ರಾತ್ರಿ (First Night Video) ಗೆ ಸಂಬಂಧಿಸಿದ ರೀಲ್ ಮಾಡಿ ಹಂಚಿಕೊಂಡಿದ್ದು, ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋಗೆ ಅನೇಕರ ಆಕ್ರೋಷ ಸಹ ಹೊರಹಾಕುತ್ತಿದ್ದಾರೆ.

first night reel goes viral 1

ಇಂದಿನ ಸ್ಮಾರ್ಟ್ ಪೋನ್ ಯುಗದಲ್ಲಿ ಬಹುತೇಕ ಎಲ್ಲರೂ ಸೋಷಿಯಲ್ ಮಿಡಿಯಾ ಬಳಸುತ್ತಾರೆ. ಕೆಲವರು ಕಂಟೆಂಟ್ ಕ್ರಿಯೇಟರ್‍ ಆಗಿ ರಿಲ್ಸ್ ಮಾಡುತ್ತಾ ಹಣ ಸಂಪಾದನೆ ಮಾಡುತ್ತಿರುತ್ತಾರೆ. ಅದರಲ್ಲೂ ವ್ಲಾಗ್ ಮಾಡುವವರ ಸಂಖ್ಯೆ ಸಹ ಹೆಚ್ಚಾಗಿದೆ. ಕಡಿಮೆ ಸಮಯದಲ್ಲಿ ವೈರಲ್ ಆಗಲು ನಾನಾ ರೀತಿಯಲ್ಲಿ ಪರದಾಡುತ್ತಿರುತ್ತಾರೆ. ಇದೀಗ ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡ್ ಆಗಲು ಹೊಸದಾಗಿ ಮದುವೆಯಾದ ಜೋಡಿ ತಮ್ಮ ಮೊದಲ ರಾತ್ರಿಯ (First Night Video) ಗೆ ಸಂಬಂಧಿಸಿದ ರೀಲ್ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ನವದಂಪತಿಯನ್ನು ಸೋಷಿಯಲ್ ಮಿಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ.

https://x.com/Sanvi6845148/status/1808878185603293484

ಇನ್ನೂ ವಿಡಿಯೋದಲ್ಲಿ ಕಾಣಿಸುವಂತೆ ಈ ಜೋಡಿ ಹೊಸದಾಗಿ ಮದುವೆಯಾಗಿದ್ದು, ವರ ವಧುವನ್ನು ಕೇಳುತ್ತಿದ್ದಾನೆ, ನಮ್ಮ ಮದುವೆಯ ಮೊದಲ ರಾತ್ರಿ ಹೇಗಿತ್ತು ಎಂದು, ಅದಕ್ಕೆ ವಧು ನೀನು ಈಗ ಎಲ್ಲಿದ್ದೀಯಾ ಅಂತಾ ಪ್ರಶ್ನೆ ಮಾಡುತ್ತಾಳೆ. ಕೂಡಲೇ ಇಬ್ಬರೂ ಹಾಸಿಗೆಯ ಕಡೆಯ ಹೋಗುತ್ತಾರೆ. ಬಳಿಕ ಇಬ್ಬರೂ ಮೊದಲ ರಾತ್ರಿಗಾಗಿ ಸಿದ್ದಪಡಿಸಿದ್ದ ಹಾಸಿಗೆಯ ಅಲಂಕಾರಗಳನ್ನು ತೋರಿಸುತ್ತಾರೆ. ಇದೀಗ ನವದಂಪತಿಯ ಬೆಡ್ ರೂಂ ವಿಡಿಯೋ ವೈರಲ್ ಆಗುತ್ತಿದ್ದು, ಇಬ್ಬರನ್ನೂ ಟ್ರೋಲ್ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಸುನಂದಾ ರಾಯ್ ಎಂಬ ಮಹಿಳೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅವರ ವಿರುದ್ದ ಅನೇಕರು ಕಿಡಿಕಾರುತ್ತಿದ್ದಾರೆ.

ವೈರಲ್ ಆಗುತ್ತಿರುವ ವಿಡಿಯೋಗೆ ಅನೇಕ ನೆಟ್ಟಿಗರು ಕಾಮೆಂಟ್ ಗಳನ್ನು ಮಾಡಿದ್ದಾರೆ. ಅದರಲ್ಲೊಬ್ಬರು ನಮ್ಮ ಸಮಾಜ ಎತ್ತ ಸಾಗುತ್ತಿದೆ, ನಾವು ಎಲ್ಲಿಗೆ ಹೋಗುತ್ತಿದ್ದೇವೆ, ಮೊದಲ ರಾತ್ರಿ ವಿಡಿಯೋಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ ಎಂದರೇ, ಮತ್ತೋರ್ವ ಇತ್ತೀಚಿಗೆ ಜನರು ತಮ್ಮ ಖಾಸಗಿ ಜೀವನವನ್ನು ಹಣಕ್ಕಾಗಿ ಮಾರಾಟ ಮಾಡಲು ಹೊರಟಿದ್ದಾರೆ ಎಂತಲೂ, ಮತ್ತೋರ್ವ ಫೇಮಸ್ ಆಗೋಕೆ ಏನಾದರೂ ಮಾಡೊಕೆ ಸಿದ್ದ ಎಂದು ಕಾಮೆಂಟ್ ಗಳ ಮೂಲಕ ವಿಮರ್ಶೆ ಮಾಡುತ್ತಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular