ದೇಶದಲ್ಲಿ ಭಯೋತ್ಪಾದನಾ ಕೃತ್ಯಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಕೆಲವೊಂದು ಕ್ರಮಗಳನ್ನು ಕೈಗೊಂಡಿದೆ. ಇದರ ಭಾಗವಾಗಿ ಕೆಲವೊಂದು ಉಗ್ರ ಸಂಘಟನೆಗಳನ್ನು ನಿಷೇಧಿಸಿದೆ. ಈ ಹಿಂದೆ ಭಾರತ ಸರ್ಕಾರ ಸಿಖ್ ಫಾರ್ ಜಸ್ಟೀಸ್ ಉಗ್ರ Sikhs for Justice ಸಂಘಟನೆಯನ್ನು ನಿಷೇಧಿಸಿತ್ತು. ಇದೀಗ ಮತ್ತೊಮ್ಮೆ 5 ವರ್ಷ ಈ ಉಗ್ರ ಸಂಘಟನೆಗೆ ನಿಷೇಧ ಏರಿದೆ. ಗುರುಪತ್ವಂತ್ ಸಿಂಗ್ ಪನ್ನೂನ್ ನೇತೃತ್ವದ ಈ ಸಂಘಟನೆ ಭಾರತದಲ್ಲಿ ನಿಷೇಧಗೊಂಡಿದೆ.
ಭಾರತದಲ್ಲಿ ಖಲಿಸ್ತಾನಿ ಉಗ್ರ ನೀತಿ ಹಾಗೂ ಸಂಘಟನೆಯನ್ನು ಬೆಂಬಲಿಸುವ ಸಿಖ್ ಫಾರ್ ಜಸ್ಟೀಸ್ (Sikhs for Justice) ಸಂಘಟನೆಯನ್ನು ಗುರುತ್ವಂತ್ ಸಿಂಗ್ ಪನ್ನೂನ್ ನಾಯಕನಾಗಿ ಮುನ್ನೆಡೆಸುತ್ತಿದ್ದಾನೆ. ಈಗಾಗಲೇ ಭಾರತದ ವಿರುದ್ದ ಹಲವು ಭಯೋತ್ಪಾದನಾ ಕೃತ್ಯಗಳನ್ನು, ಬೆದರಿಕೆಗಳನ್ನು ನೀಡಿರುವ ಈ ಉಗ್ರ ಸಂಘಟನೆಯನ್ನು 2019ರಲ್ಲಿ ಕೇಂದ್ರ ಸರ್ಕಾರ ನಿಷೇಧಿಸಿತ್ತು. ದೇಶದ ಐಕ್ಯತೆ, ಸಾರ್ವಭೌಮತ್ವ, ಶಾಂತಿ ಸುವ್ಯಸ್ಥೆಯನ್ನು ಕದಡುತ್ತಿರುವ Sikhs for Justice ಸಂಘಟನೆಯನ್ನು ನಿಷೇಧಿಸಿತ್ತು. ಅಂದರೇ 2019 ರಿಂದ ಜುಲೈ 10, 2024 ರವರೆಗೆ ನಿಷೇಧ ಮಾಡಲಾಗಿತ್ತು. ಇದೀಗ ಮತ್ತೆ 5 ವರ್ಷಗಳ ಕಾಲ ಕೇಂದ್ರ ಸರ್ಕಾರ ನಿಷೇಧಿಸಿದೆ.
ಇನ್ನೂ ಈ ಸಂಘಟನೆ ಖಲಿಸ್ತಾನಿ ಪರ ಭಾರತೀಯ ಭೂಪ್ರದೇಶದ ಒಂದು ಭಾಗವನ್ನು ಭಾರತ ಒಕ್ಕೂಟದಿಂದ ಬೇರ್ಪಡಿಸುವ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿದೆ ಮತ್ತು ಸಹಾಯ ಮಾಡುತ್ತಿದೆ ಮತ್ತು ಭಾರತ ಮತ್ತು ಇತರೆಡೆ ಈ ಉದ್ದೇಶಕ್ಕಾಗಿ ಹೋರಾಡುತ್ತಿರುವ ಪ್ರತ್ಯೇಕತಾವಾದಿ ಗುಂಪುಗಳನ್ನು ಬೆಂಬಲಿಸುತ್ತಿದೆ ಎಂದು ಸಚಿವಾಲಯ ಆರೋಪಿಸಿದೆ. Sikhs for Justice ಕಾನೂನುಬಾಹಿರ ಚಟುವಟಿಕೆಗಳನ್ನು ತಕ್ಷಣವೇ ನಿಯಂತ್ರಿಸದಿದ್ದರೆ, ಖಲಿಸ್ತಾನಿ ಪರ ಸಂಘಟನೆಯು ತನ್ನ “ಸರ್ಕಾರವನ್ನು ಅಸ್ಥಿರಗೊಳಿಸುವ ಮೂಲಕ ಭಾರತದ ಒಕ್ಕೂಟದ ಪ್ರದೇಶದಿಂದ ಖಲಿಸ್ತಾನ್ ರಾಷ್ಟ್ರವನ್ನು ಕೆತ್ತುವ ಪ್ರಯತ್ನಗಳನ್ನು ಒಳಗೊಂಡಂತೆ ವಿಧ್ವಂಸಕ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ ಎಂದು ಕೇಂದ್ರವು ಅಭಿಪ್ರಾಯಪಟ್ಟಿದೆ. ಜೊತೆಗೆ ಪಂಜಾಬ್ ಸೇರಿದಂತೆ ಭಾರತದಲ್ಲಿನ ಭಯೋತ್ಪಾದಕರ ಜೊತೆ ಈ Sikhs for Justice ಸಂಘಟನೆ ಸಂಪರ್ಕದಲ್ಲಿದೆ. ಉಗ್ರರ ಜೊತೆಗೆ ಸೇರಿ ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದೆ. ಅಯೋಧ್ಯೆ ರಾಮ ಮಂದಿರ ಪ್ರತಿಷ್ಟಾಪನೆಯ ವೇಳೆ ಸಹ ಪ್ರಧಾನಿ ನರೇಂದ್ರ ಮೋದಿ ರಾಲಿಯನ್ನು ಗುರಿಯಾಗಿಸಿ ದಾಳಿ ಮಾಡುವಂತೆ ಪನ್ನೂನ್ ಕರೆ ನೀಡಿದ್ದರು.