Anant Ambani wedding: ಅನಂತ್ ಅಂಬಾನಿ ರಾಧಿಕಾ ಪ್ರೀ-ವೆಡ್ಡಿಂಗ್ ಕಾರ್ಯಕ್ರಮದ ಊಟದಲ್ಲಿ ಸಿಕ್ಕ ಕೂದಲಿನ ಬಗ್ಗೆ ವಿಡಿಯೋ ಮಾಡಿದ ಒರಿ (Orry)….!

ಭಾರತ ಮಾತ್ರವಲ್ಲದೇ ವಿಶ್ವದಾದ್ಯಂತ ಉದ್ಯಮಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮದುವೆಯ ಸುದ್ದಿ ಭಾರಿ ಸದ್ದು ಮಾಡುತ್ತಿದೆ. ಈಗಾಗಲೇ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ (Anant Ambani wedding) ರವರ ಪ್ರೀ ವೆಡ್ಡಿಂಗ್ ಕಾರ್ಯಕ್ರಮ ಜೋರಾಗಿ ನಡೆಯುತ್ತಿದೆ. ತಿಂಗಳ ಕಾಲ ನಡೆಯುತ್ತಿರುವ ಈ ಸಮಾರಂಭಕ್ಕೆ ಅನೇಕ ಸೆಲೆಬ್ರೆಟಿಗಳು ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಈ ಜೋಡಿಯ ಪ್ರೀ ವೆಡ್ಡಿಂಗ್ (Anant Ambani wedding) ಸಮಾರಂಭ ನಡೆದಿದ್ದು, ಈ ವೇಳೆ ಆಹಾರದಲ್ಲಿ ಕೂದಲು ಸಿಕ್ಕಿದೆ. ಇದನ್ನು ಸೋಷಿಯಲ್ ಮಿಡಿಯಾ ಸೆನ್ಷೇಷನ್ ಎಂದೇ ಕರೆಯಲಾಗುವ ಒರಿ (Orry)ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ.

Orry find hair in ambanis pre wedding 1

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಒಬ್ಬರಾಗಿರುವ ಉದ್ಯಮಿ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ದಂಪತಿಯ ಪುತ್ರ ಅನಂತ್ ಅಂಬಾನಿ ಮದುವೆ ಸಂಭ್ರಮ (Anant Ambani wedding)  ಈಗಾಗಲೇ ಶುರುವಾಗಿದೆ. ಪ್ರತಿನಿತ್ಯ ಅವರ ಮದುವೆಯ ಬಗ್ಗೆ ಒಂದಲ್ಲ ಒಂದು ಸುದ್ದಿ ಕೇಳಿಬರುತ್ತಿದೆ. ಕೆಲವು ವಾರಗಳ ಹಿಂದೆಯಷ್ಟೆ ಇಟಲಿಯಲ್ಲಿ ಅನಂತ್ ಅಂಬಾನಿ – ರಾಧಿಕಾ ಮರ್ಚೆಂಟ್ ರವರ ಮದುವೆಯ ಪ್ರೀ ವೆಡ್ಡಿಂಗ್ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತ್ತು. ಈ ಸಮಯದಲ್ಲಿ ತಯಾರಿಸುತ್ತಿದ್ದ ಆಹಾರದಲ್ಲಿ ಕೂದಲು ಸಿಕ್ಕಿದೆಯಂತೆ. ಈ ಸಂಬಂಧ ಬಾಲಿವುಡ್ ಸೆಲಬ್ರೆಟಿಗಳ ಆಪ್ತ ಎಂದೇ ಫೇಮಸ್ ಆಗಿರುವ ಒರಿ ಅಲಿಯಾಸ್ ಒರ್ಹಾನ್ ಆವತ್ರಮಣಿ ತಮ್ಮ ಯೂಟ್ಯೂಬ್ ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

to watch this video open this link: https://www.youtube.com/watch?v=C6YvLdc5RWw&t=342s

ಸೋಷಿಯಲ್ ಮಿಡಿಯಾದಲ್ಲಿ ಸೆನ್ಷೇಷನ್ ಎಂದೇ ಕರೆಯಲಾಗುವ ಒರಿ ಅಲಿಯಾಸ್ ಒರ್ಹಾನ್​ ಅವತ್ರಮಣಿ ಅವರು ತಮ್ಮದೇ ಯೂಟ್ಯೂಬ್​ ಚಾನೆಲ್​ ಹೊಂದಿದ್ದು, ಈ ಚಾನಲ್ ನಲ್ಲಿ ಅನಂತ್ ಅಂಬಾನಿ – ರಾಧಿಕಾ ಮರ್ಚೆಂಟ್ ಪ್ರೀ ವೆಡ್ಡಿಂಗ್ (Anant Ambani wedding) ಸಮಾರಂಭದ ಕೆಲವೊಂದು ದೃಶ್ಯಗಳನ್ನು ಸೆರೆಹಿಡಿದು ಹಂಚಿಕೊಂಡಿದ್ದಾರೆ. ಅತಿಥಿಗಳಿಗಾಗಿ ತಯಾರಿಸಿದ್ದಂತಹ ಬಗೆ ಬಗೆಯ ಆಹಾರದ ಬಗ್ಗೆ ವಿಡಿಯೋ ಮಾಡಿದ್ದಾರೆ. ಜೊತೆಗೆ ಒರಿ ಹಾಗೂ ಅವರ ಸ್ನೇಹಿತೆ ತಾನಿ ಶ್ರಾಫ್ ಜೊತೆಗೆ ಹಲವು ಬಗೆಯ ಆಹಾರವನ್ನು ಸಹ ಸವಿದಿದ್ದಾರೆ. ಅದರ ನಡುವೆ ಅವರು ವಡಾ ಪಾವ್ ಸವಿದಿದ್ದಾರೆ. ತಿನ್ನೊದಕ್ಕೂ ಮುಂಚೆ ಇದು ಅತ್ಯುತ್ತಮ ವಡಾ ಪಾವ್ ಎಂದು ಹೇಳಿದ್ದಾರೆ. ಆದರೆ ತಾನಿಯಾ ಶ್ರಾಫ್ ತಿನ್ನುವ ವಡಾ ಫಾವ್ ನಲ್ಲಿ ಕೂದಲು ಸಿಕ್ಕಿದೆ. ನನಗೆ ಇನ್ನೊಂದು ಬೇಕಿತ್ತು, ಆದರೆ ಅದರಲ್ಲಿ ಕೂದಲು ಇತ್ತು ಎಂದು ಹೇಳಿದ್ದಾರೆ. ಇದು ವಿಡಿಯೋದಲ್ಲಿ ಕೇಳಿಸಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Leave a Reply

Your email address will not be published. Required fields are marked *

Next Post

Crime news: ಹಾಸನದಲ್ಲಿ 12 ವರ್ಷದ ಬಾಲಕನ ಬರ್ಬರ ಕೊಲೆ, ರೈಲ್ವೆ ಹಳಿ ಪಕ್ಕದಲ್ಲಿ ಶವ ಎಸೆದ ಪಾಪಿಗಳು….!

Wed Jul 10 , 2024
ಸಮಾಜದಲ್ಲಿ ಕೆಲವು ಪಾಪಿಗಳು ಕೊಲೆಗಳು, ಹಲ್ಲೆಗಳನ್ನು ಮಾಡುತ್ತಿರುತ್ತಾರೆ. ಇದೀಗ 12 ವರ್ಷದ ಬಾಲಕನೋರ್ವವನ್ನು ಬರ್ಬರವಾಗಿ ಹತ್ಯೆ ಮಾಡಿ (Crime News)ರೈಲ್ವೆ ಹಳ್ಳಿ ಪಕ್ಕದಲ್ಲಿ ಎಸೆದ ಘಟನೆ ನಡೆದಿದೆ. ಈ ಘಟನೆ ಹಾಸನದ ಹೊರವಲಯದ ಬಸವನಹಳ್ಳಿ ಬಳಿ ನಡೆದಿದೆ ಎಂದು ತಿಳಿದುಬಂದಿದೆ. 12 ವರ್ಷದ ಬಾಲಕನೊರ್ವವನ್ನು ಬರ್ಬರವಾಗಿ ಕೊಲೆ ಮಾಡಿ ರೈಲ್ವೆ ಹಳಿ ಪಕ್ಕದಲ್ಲಿ ಶವ ಎಸೆದ ಘಟನೆ ನಡೆದಿದೆ. ಮೃತ ದುರ್ದೈವಿಯನ್ನು ಕುಶಾಲ್ ಗೌಡ (12). ಮೃತ ಬಾಲಕ ಕುಶಾಲ್ […]
12 Years boy murdered
error: Content is protected !!