Tech Tips – ಇಂದಿನ ಕಾಲದಲ್ಲಿ ಬಹುತೇಕ ಎಲ್ಲರ ಬಳಿಯು ಸ್ಮಾರ್ಟ್ ಪೋನ್ ಇದ್ದೇ ಇರುತ್ತದೆ. ಎಷ್ಟೇ ಪವರ್ ಇರುವಂತಹ ಮೊಬೈಲ್ ಇದ್ದರೂ ಸಹ ಅದರಲ್ಲಿ ಬ್ಯಾಟರಿ ಬೇಗನೆ ಖಾಲಿಯಾಗುತ್ತಿರುತ್ತದೆ. ಮೊಬೈಲ್ ಫೋನ್ ಚಾರ್ಜಿಂಗ್ ಕುರಿತು ಸರಿಯಾದ ಅಭ್ಯಾಸಗಳನ್ನು ಅನುಸರಿಸುವುದು ಅದರ ಬ್ಯಾಟರಿಯ ದೀರ್ಘಾಯುಷ್ಯಕ್ಕಾಗಿ ಮುಖ್ಯವಾಗಿದೆ. ಸಾಮಾನ್ಯವಾಗಿ ತಮ್ಮ ಮೊಬೈಲ್ ನಲ್ಲಿ ಕಡಿಮೆ ಬ್ಯಾಟರಿ ಇದ್ದಾಗ ಪೋನ್ ಚಾರ್ಜ್ ಮಾಡುತ್ತಾರೆ. ಒಂದು ದಿನಕ್ಕೆ ಮೊಬೈಲ್ ಎಷ್ಟು ಬಾರಿ ಚಾರ್ಜ್ ಮಾಡಬೇಕೆಂಬ ಸಂಗ್ರಹ ಮಾಹಿತಿಯನ್ನು ಈ ಸುದ್ದಿಯ ಮೂಲಕ ಹಂಚಿಕೊಳ್ಳಲಾಗಿದೆ.
ಅನೇಕರು ತಮ್ಮ ಮೊಬೈಲ್ ನಲ್ಲಿ ಕೊಂಚ ಬ್ಯಾಟರಿ ಕಡಿಮೆಯಾದರೇ ಸಾಕು ಕೂಡಲೇ ಮೊಬೈಲ್ ಚಾರ್ಜ್‌ಗೆ ಹಾಕುತ್ತಾರೆ. ಕೆಲವರು ಪೋನ್ ಚಾರ್ಜ್‌ಗೆ ಹಾಕಿದ ಕೊಂಚ ಸಮಯದಲ್ಲೇ ಹೊರತೆಗೆಯುತ್ತಾರೆ. ಈ ರೀತಿಯ ಅಭ್ಯಾಸ ನಿಮಗೂ ಇದ್ದರೇ ನಿಮ್ಮ ಪೋನ್ ಬೇಗ ಕೆಟ್ಟು ಹೋಗಬಹುದಾಗಿದೆ. ತಮ್ಮ ಪೋನ್ ಚಾರ್ಜ್ ಮಾಡಲು ಸರಿಯಾದ ಮಾರ್ಗವಿದೆ. ಮೊಬೈಲ್ ಪೋನ್ ಅನ್ನು ದಿನಕ್ಕೆ ಎರಡು ಭಾರಿ ಚಾರ್ಜ್ ಮಾಡಬೇಕೆಂದು ಕೆಲ ತಂತ್ರಜ್ಞರು ಹೇಳುತ್ತಾರೆ. ಒಂದು ದಿನದಲ್ಲಿ ಹೆಚ್ಚಾಗಿ ಅಥವಾ ಆಗಾಗ ಚಾರ್ಜ್ ಮಾಡುವುದರಿಂದ ನಿಮ್ಮ ಪೋನ್ ಬ್ಯಾಟರಿಯ ಅವಧಿಯ ಮೇಲೆ ಪರಿಣಾಮ ಬೀರುತ್ತದೆ. ಈ ಲೇಖನದ ಮೂಲಕ ನಿಮ್ಮ ಪೋನ್ ಎಷ್ಟು ಬಾರಿ ಚಾರ್ಜ್ ಮಾಡಬೇಕು, ಯಾವಾಗ ಚಾರ್ಜ್ ಗೆ ಹಾಕಬೇಕು ಎಂಬ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
- 20%-80% ನ ದಾರಿಯಲ್ಲಿ ಚಾರ್ಜ್ ಮಾಡುವುದು ಉತ್ತಮ. ಫೋನ್ ಬ್ಯಾಟರಿಯ ದೀರ್ಘಾವಧಿ ದೃಷ್ಟಿಯಿಂದ, ಬ್ಯಾಟರಿ ಪೂರ್ಣವಾಗಿ ಶೂನ್ಯಗೊಳ್ಳುವ ಅಥವಾ 100% ತುಂಬುವಂತಾಗುವುದನ್ನು ತಪ್ಪಿಸಬೇಕು.
- ಊಕೇಸನಲ್ ಟಾಪ್-ಅಪ್ ಚಾರ್ಜ್ ಮಾಡಬಹುದು. ಬ್ಯಾಟರಿ ಕಡಿಮೆ ಆಗುವ ಪ್ರತಿ ತಕ್ಷಣವೂ ಚಾರ್ಜ್ ಮಾಡುವ ಅಗತ್ಯವಿಲ್ಲ. ಆದರೆ 20%-30% ಕ್ಕಿಂತ ಕಡಿಮೆ ಹೋದಾಗ ಚಾರ್ಜ್ ಮಾಡಬಹುದಾಗಿದೆ.
- ರಾತ್ರಿ ಪೂರ್ತಿ ಚಾರ್ಜ್ ಮಾಡಬೇಡಿ. ಫೋನ್ ಅನ್ನು ರಾತ್ರಿ ಪೂರ್ತಿ ಚಾರ್ಜ್ ಮಾಡುವುದು ಬ್ಯಾಟರಿಯ ದೀರ್ಘಾವಧಿ ಮೇಲೆ ಹಾನಿಕಾರಕವಾಗಬಹುದು.
- ಹೀಟ್ ಅನ್ನು ತಪ್ಪಿಸಿ ಚಾರ್ಜಿಂಗ್ ಸಮಯದಲ್ಲಿ ಫೋನ್ ತಾಪಮಾನ ಹೆಚ್ಚು ಆಗುವುದಾದರೆ, ಅದನ್ನು ಗಮನಿಸಿ. ಹೀಟಿಂಗ್ ಬ್ಯಾಟರಿಯನ್ನು ಹಾಳುಮಾಡಬಹುದು.
- ಬ್ಯಾಟರಿ ಮಟ್ಟವು ಶೇ. 80 ಇದ್ದಾಗ ಮಾತ್ರ ಫೋನ್ ಅನ್ನು ಚಾರ್ಜರ್‌ನಿಂದ ಅನ್ ಪ್ಲಗ್ ಮಾಡಿ. ನೀವು 45-75 ನಿಯಮವನ್ನು ಸಹ ಅನುಸರಿಸಬಹುದು. ಅಂದರೆ, ಫೋನ್‌ನ ಬ್ಯಾಟರಿ ಶೇ. 45 ಅಥವಾ ಅದಕ್ಕಿಂತ ಕಡಿಮೆ ಇದ್ದಾಗ, ನೀವು ಚಾರ್ಜ್ ಹಾಕಬಹುದು ಮತ್ತು ಅದು ಶೇ. 75 ರಷ್ಟು ತಲುಪಿದಾಗ ಚಾರ್ಜಿಂಗ್ ಅನ್ನು ತೆಗೆದುಹಾಕಬಹುದು. ಈ ವಿಧಾನವು ಫೋನ್‌ನ ಬ್ಯಾಟರಿಯನ್ನು ದೀರ್ಘಕಾಲದವರೆಗೆ ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
ಇನ್ನೂ ನಿಮ್ಮ ಸ್ಮಾರ್ಟ್ ಪೋನ್ ಚಾರ್ಜರ್ ಬದಲಿಗೆ ಬೇರೆ ಪೋನ್ ಚಾರ್ಜರ್ ಬಳಸಿ ಚಾರ್ಜ್ ಮಾಡುವಾಗ ನಿಧಾನವಾಗಿ ಚಾರ್ಜ್ ಆಗಬಹುದು. ಆದ್ದರಿಂದ ನಿಮ್ಮ ಸ್ಮಾರ್ಟ್ ಪೋನ್ ಗೆ ನೀಡಲಾಗುವ ಚಾರ್ಜರ್ ನಿಂದಲೇ ಮೊಬೈಲ್ ಚಾರ್ಜ್ ಮಾಡಬೇಕು. ಒಂದು ವೇಳೆ ನಿಮ್ಮ ಪೋನ್ 20w ಚಾರ್ಜಿಂಗ್ ಬೆಂಬಲಿಸುತ್ತದೆ ಎಂದುಕೊಳ್ಳಿ, ಆಗ ನೀವು 120w ಅಥವಾ 65w ಚಾರ್ಜರ್ ಬಳಸಿದರೇ ನಿಮ್ಮ ಪೋನ್ ಬಿಸಿಯಾಗಿ ಸ್ಪೋಟಗೊಳ್ಳುವಂತಹ ಅವಕಾಶ ಹೆಚ್ಚಾಗಿರುತ್ತದೆ. ಆದ್ದರಿಂದ ಈ ಬಗ್ಗೆ ಎಚ್ಚರ ವಹಿಸುವುದು ತುಂಬಾನೆ ಮುಖ್ಯ. ಈ ಮಾಹಿತಿ ಸಂಗ್ರಹಿಸಿದ ಮಾಹಿತಿಯಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಬಳಕೆದಾರರು ಸಂಬಂಧಪಟ್ಟ ತಂತ್ರಜ್ಞರ ಸಹಾಯ ಪಡೆಯಬಹುದು.