ಬ್ಯಾಂಕಿಂಗ್, ಹಣಕಾಸು ಸೇವೆಗಳಿಗಾಗಿ PAN Card ತುಂಬಾನೆ ಅವಶ್ಯಕವಾಗಿದೆ. ಯಾವುದೇ ಹಣಕಾಸಿನ ಲೇವಾದೇವಿ ನಡೆಸಲು PAN Card ಬೇಕಾಗುತ್ತದೆ. ವಸ್ತುಗಳನ್ನು ಮಾರಾಟ ಮಾಡಲು, ಖರೀದಿಸಿ, ವಿಸಾಗೆ ಅಪ್ಲೇ ಮಾಡೋಕೆ, ಆದಾಯ ತೆರಿಗೆ ರಿಟರ್ನ್ಸ್ ದಾಖಲೆ ಮಾಡಲು ಪಾನ್ ಕಾರ್ಡ್ ಕಡ್ಡಾಯವಾಗಿ ಬೇಕಿದೆ. ಜೊತೆಗೆ ಹೆಚ್ಚು ಮೊತ್ತ ಡಿಪಾಸಿಟ್ ಮಾಡಬೇಕಾದರೂ ಪಾನ್ ಕಾರ್ಡ್ ಕಡ್ಡಾಯ. ಈಗಾಗಲೇ ಬಹಳಷ್ಟು ಮಂದಿ ಪಾನ್ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಈ ಸುದ್ದಿಯ ಮೂಲಕ ತಮ್ಮ ಪಾನ್ ಕಾರ್ಡ್ ಅನ್ನು ಪಾವತಿಸಿ ಹೊಸ ಪ್ಯಾನ್ ಕಾರ್ಡ್ ಹೇಗೆ ಪಡೆದುಕೊಳ್ಳಬೇಕೆಂಬುದನ್ನು ತಿಳಿಸಿದೆ.
PAN Card ಅಂದರೇ Permanent Account Number. ಇದನ್ನು ಆದಾಯ ತೆರಿಗೆ ಇಲಾಖೆ (Income Tax Departmment) ನೀಡುತ್ತದೆ. ಟ್ಯಾಕ್ಸ್ ಪೇಯರ್ಸ್ ಜೊತೆಗೆ 50 ಸಾವಿರಕ್ಕೂ ಅಧಿಕ ಹಣಕಾಸಿನ ವ್ಯವಹಾರ ನಡೆಸುವಂತಹವರು ಪಾನ್ ಕಾರ್ಡ್ ತೋರಿಸುವುದು ಕಡ್ಡಾಯವಾಗಿರುತ್ತದೆ. ಇತ್ತೀಚಿಗಷ್ಟೆ ಕೇಂದ್ರ ಸರ್ಕಾರ ಪಾನ್ ಕಾರ್ಡ್ 2.0 ಪ್ರಾಜೆಕ್ಟ್ ಅನ್ನು ಪ್ರಕಟಿಸಿತ್ತು. ಈ ಪ್ರಾಜೆಕ್ಟ್ ಭಾಗವಾಗಿ ಕ್ಯೂರ್ ಕೋಡ್ ಇರುವಂತಹ ಪ್ಯಾನ್ ಕಾರ್ಡ್ ಪ್ರಿಂಟಿಂಗ್ ಶುರು ಮಾಡಿದ್ದು, ಈ ಪಾನ್ ಕಾರ್ಡ್ ರೀಪ್ರಿಂಟ್ ಪಡೆಯಲು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಕೇವಲ 50 ರೂಪಾಯಿ ಪಾವತಿಸಿ ಹೊಸ ಪಾನ್ ಕಾರ್ಡ್ ಪೋಸ್ಟ್ ಮೂಲಕ ನಿಮ್ಮ ಮನೆಗೆ ತರಿಸಿಕೊಳ್ಳಬಹುದು.
ಪ್ಯಾನ್ ಕಾರ್ಡ್ 2.0 ಅನ್ನು ಆನ್‌ಲೈನ್‌ನಲ್ಲಿ ಪಡೆಯಲು, ನೀವು ಅಧಿಕೃತ ವೆಬ್‌ಸೈಟ್‌ಗಳಾದ NSDL ಅಥವಾ UTIITSL ಮೂಲಕ ಅರ್ಜಿ ಸಲ್ಲಿಸಬಹುದು. ಈ ಕೆಳಗಿನ ವಿಧಾನಗಳನ್ನು ಅನುಸರಿಸಿ
NSDL ಮೂಲಕ ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ NSDL ಪೋರ್ಟಲ್‌ಗೆ ಭೇಟಿ ನೀಡಿ: https://www.onlineservices.nsdl.com/paam/ReprintEPan.html
- ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
- ಶುಲ್ಕವನ್ನು ಪಾವತಿಸಿ (ಭಾರತೀಯ ವಿಳಾಸಗಳಿಗೆ ₹50).
- ಅರ್ಜಿಯನ್ನು ಸಲ್ಲಿಸಿ ಮತ್ತು ಆನ್‌ಲೈನ್ ಮೂಲಕ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಪಡೆಯಿರಿ.
UTIITSL ಮೂಲಕ ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ UTIITSL ಪೋರ್ಟಲ್‌ಗೆ ಭೇಟಿ ನೀಡಿ: https://www.pan.utiitsl.com/PAN_ONLINE/homereprint
- ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
- ಶುಲ್ಕವನ್ನು ಪಾವತಿಸಿ (ಭಾರತೀಯ ವಿಳಾಸಗಳಿಗೆ ₹50).
- ಅರ್ಜಿಯನ್ನು ಸಲ್ಲಿಸಿ ಮತ್ತು ಆನ್‌ಲೈನ್ ಮೂಲಕ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಪಡೆಯಿರಿ.