Ustad Zakir Hussain – ಸಂಗೀತ ಲೋಕದಲ್ಲಿ ಅಪಾರ ಹೆಸರು ಮಾಡಿದ ತಬಲಾ ಮಾಂತ್ರಿಕ ಉಸ್ತಾದ್ ಜಾಕೀರ್ ಹುಸೇನ್ ಅನಾರೋಗ್ಯದ ಕಾರಣ ಡಿ.15 ಅಮೆರಿಕದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇದೀಗ ತಬಲಾ ಲೋಕದ ಮಾತ್ರಿಕ ಉಸ್ತಾದ್ ಜಾಕೀರ್ ಹುಸೇನ್ (Ustad Zakir Hussain) (73) ಕೊನೆಯುಸಿರೆಳೆದಿದ್ದಾರೆ. ಅವರ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ.

ಖ್ಯಾತ ತಬಲ ವಾದಕ ಜಾಕೀರ್ ಹುಸೇನ್ (Ustad Zakir Hussain) ಅವರಿಗೆ ರಕ್ತದೊತ್ತಡ ಸಮಸ್ಯೆಗಳಿದ್ದು, ಕಳೆದ ವಾರದಿಂದ ಹೃದಯ ಸಂಬಂಧಿ ಸಮಸ್ಯೆಗೆ ಅವರನ್ನು ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾರತದ ಅತ್ಯಂತ ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರಲ್ಲಿ ಒಬ್ಬರಾಗಿರುವ (Ustad Zakir Hussain)ಜಾಕೀರ್ ಹುಸೇನ್, ಪ್ರಸಿದ್ಧ ತಬಲಾ ವಾದಕ ಅಲ್ಲಾ ರಖಾರವರ ಹಿರಿಯ ಪುತ್ರ ಜಾಕೀರ್ ಹುಸೇನ್ ತಮ್ಮ ತಂದೆಯಂತೆ ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರ ನಿಧನ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ ಎಂದೇ ಹೇಳಲಾಗುತ್ತಿದೆ.

ತಬಲಾ ಮಾಂತ್ರಿಕಾ ಉಸ್ತಾದ್ ಜಾಕೀರ್ ಹುಸೇನ್ (Ustad Zakir Hussain) 1951 ರಲ್ಲಿ ಮುಂಬೈನಲ್ಲಿ ಜನಿಸಿದರು. ಅವರನ್ನು ವಿಶ್ವದ ಶ್ರೇಷ್ಠ ತಬಲಾ ವಾದಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಜಾಕೀರ್ ಹುಸೇನ್ ಕೊಡುಗೆ ಅಪಾರವಾದುದು ಎನ್ನಬಹುದಾಗಿದೆ. ಅಸಾಧಾರಣ ಪ್ರತಿಭೆಯಿಂದಾಗಿ ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಭಾರತ ಸರ್ಕಾರದಿಂದ (Ustad Zakir Hussain)ಕೊಡುವ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳನ್ನು ಪಡೆದಿದ್ದಾರೆ.. ಜಾಕೀರ್ ಹುಸೇನ್ ಅವರಿಗೆ 1999 ರಲ್ಲಿ US ನ್ಯಾಷನಲ್ ಎಂಡೋಮೆಂಟ್ ಫಾರ್ ದಿ ಆರ್ಟ್ಸ್‌ನಿಂದ ನ್ಯಾಷನಲ್ ಹೆರಿಟೇಜ್ ಫೆಲೋಶಿಪ್ ಅವಾರ್ಡ್ ನೀಡಲಾಗಿದೆ. (Ustad Zakir Hussain)ಭಾರತೀಯ ಶಾಸ್ತ್ರೀಯ ಸಂಗೀತದ ಜಾಗತಿಕ ರಾಯಭಾರಿಯಾಗಿಯೂ ಜಾಕೀರ್ ಹುಸೇನ್ ಗುರುತಿಸಿಕೊಂಡಿದ್ದರು.