ದೇಶದ ಸಿನಿರಂಗದಲ್ಲಿ ಸೂಪರ್ ಸ್ಟಾರ್ ಆಗಿ ಸಾಗುತ್ತಿರುವ ನಟ ರಜನಿಕಾಂತ್ ಬಸ್ ಕಂಡಕ್ಟರ್ ಆಗಿದ್ದು ಹಂತ ಹಂತವಾಗಿ ಕಠಿಣ ಪರಿಶ್ರಮದಿಂದ ಇದೀಗ ಸ್ಟಾರ್ ನಟರಾಗಿದ್ದಾರೆ. ಮರಾಠಿ ಕುಟುಂಬದಲ್ಲಿ ಜನಿಸಿದ ಈತ ಬೆಂಗಳೂರಿನ ಬಿಟಿಎಸ್ ಬಸ್ ಕಂಡಕ್ಟರ್ ಆಗಿ ಕೆಲಸ ಪ್ರಾರಂಭಿಸಿ ಇದೀಗ ಸಿನಿರಂಗದಲ್ಲಿ ಮೇರು ನಟನಾಗಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಪಡೆದುಕೊಂಡು ವಯಸ್ಸಾದರೂ ಸಹ ಅನೇಕ ಸಿನೆಮಾಗಳ ಮೂಲಕ ರಂಜಿಸುತ್ತಿದ್ದಾರೆ. ಇದೀಗ ಅವರ ಬಯೋಪಿಕ್ ಬಗ್ಗೆ ಸುದ್ದಿಯೊಂದು ಕೇಳಿಬರುತ್ತಿದ್ದು, ಅಭಿಮಾನಿಗಳು ಪುಲ್ ಖುಷಿಯಾಗಿದ್ದಾರೆ.
ಸೂಪರ್ ಸ್ಟಾರ್ ನಟ ರಜನಿಕಾಂತ್ ಈಗಾಗಲೇ 170 ಕ್ಕೂ ಅಧಿಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ಕೇವಲ ಕಾಲಿವುಡ್ ನಲ್ಲಿ ಮಾತ್ರವಲ್ಲದೇ ದೇಶ ವಿದೇಶಗಳಲ್ಲೂ ಅವರ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಕೊನೆಯದಾಗಿ ಅವರು ಜೈಲರ್ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಸಹ ಭಾರಿ ಸಕ್ಸಸ್ ಕಂಡಿದೆ. ಸೌತ್ ಅಂಡ್ ನಾರ್ತ್‌ನಲ್ಲಿ ಅನೇಕ ಸಿನೆಮಾಗಳನ್ನು ಮಾಡಿದ ರಜನಿಕಾಂತ್ ರವರ ಬಯೋಪಿಕ್ ಬಗ್ಗೆ ಸುದ್ದಿಗಳು ಕೇಳಿಬರುತ್ತಲೇ ಇದೆ. ಅವರ ಜೀವನ ಅನೇಕರಿಗೆ ಸ್ಪೂರ್ಥಿಯಾಗಿದ್ದು, ಅವರ ಜೀವನದ ಕಥೆಯನ್ನು ಸಿನೆಮಾ ರೂಪದಲ್ಲಿ ತರಲು ಪ್ರಯತ್ನಗಳು ನಡೆಯುತ್ತಿವೆ. ಈ ಸುದ್ದಿ ತಿಳಿದ ತಲೈವಾ ಫ್ಯಾನ್ಸ್ ಪುಲ್ ಖುಷಿಯಾಗಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ರವರ ಬಯೋಪಿಕ್ ಸಿನೆಮಾಗಾಗಿ ಸಿದ್ದತೆಗಳು ಭಾರಿ ಸದ್ದು ಮಾಡುತ್ತಿದೆ. ರಜನಿಕಾಂತ್ ರವರ ಬಯೋಪಿಕ್ ನಿರ್ಮಾಣ ಮಾಡೋಕೆ ಬಾಲಿವುಡ್ ನಿರ್ಮಾಪಕ ಸಾಜಿದ್ ನಾಡಿಯಾದ್ವಾಲ ಎಂಬುವವರು ಮುಂದಾಗಿದ್ದಾರೆ. ಬಾಲಿವುಡ್ ನಲ್ಲಿ ಅನೇಕ ಬಿಗ್ ಬಜೆಟ್ ಸಿನೆಮಾಗಳನ್ನು ಮಾಡಿ ಸೂಪರ್ ಹಿಟ್ ಸಿನೆಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಇದೀಗ ರಜನಿಕಾಂತ್ ರವರ ಬಯೋಪಿಕ್ ಗೆ ಬಂಡವಾಳ ಹೂಡುತ್ತಿದ್ದಾರೆ. ಈ ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಿದ್ದು, ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನೆಮಾ ಸಹ ಶೀಘ್ರದಲ್ಲೇ ಆರಂಭವಾಗಲಿದೆ ಎನ್ನಲಾಗಿದೆ.
ಇನ್ನೂ ಈ ಸಿನೆಮಾದಲ್ಲಿ ಯಾರು ನಾಯಕನಾಗಿ ನಟಿಸಲಿದ್ದಾರೆ. ಯಾರು ನಿರ್ದೇಶನ ಮಾಡಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಕೆಲವೊಂದು ಮೂಲಗಳ ಪ್ರಕಾರ ರಜನಿಕಾಂತ್ ರವರ ಅಳಿಯ ಧನುಷ್ ಈ ಸಿನೆಮಾದಲ್ಲಿ ನಾಯಕನಾಗಿ ನಟಿಸಲಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿದೆ. ಇನ್ನೂ ರಜನಿಕಾಂತ್ ರವರ ಬಯೋಪಿಕ್ ಮಾಡಲು ಅಷ್ಟೊಂದು ಸುಲಭದ ಮಾತಲ್ಲ ಎಂದೇ ಹೇಳಬಹುದು. ಅವರೊಂದಿಗೆ ಚರ್ಚೆ ನಡೆಸಿ ಹಳೇಯ ಘಟನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಇದಾದ ಬಳಿಕ ಸ್ಕ್ರಿಪ್ಟ್ ಕೆಲಸ ಮಾಡಬೇಕು. ಈ ಎಲ್ಲಾ ಕಾರಣಗಳಿಂದ ಈ ಸಿನೆಮಾ 2025 ರ ವೇಳೆಗೆ ಸೆಟ್ಟೇರಬಹುದು ಎಂಬ ಮಾತುಗಳು ಸಹ ಬಲವಾಗಿ ಕೇಳಿಬರುತ್ತಿದೆ.