ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ (Social Media) ಅನ್ನೋದು ಎಷ್ಟರ ಮಟ್ಟಿಗೆ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ ಅಂದ್ರೆ, ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಜನ ಫೋನ್‌ನಲ್ಲೇ ಮುಳುಗಿರುತ್ತಾರೆ. ಸ್ಟೇಟಸ್, ರೀಲ್ಸ್ ಅಂತ ಲೈಫ್‌ನ ಪ್ರತಿಯೊಂದು ಅಪ್‌ಡೇಟ್ ಅಲ್ಲಿ ಇರಲೇಬೇಕು. ಆದರೆ, ಇದೇ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗುವ ಅಪರಿಚಿತರು ನಮ್ಮ ಬದುಕನ್ನೇ ಹಾಳು ಮಾಡಬಹುದು ಅನ್ನೋದಕ್ಕೆ ಬೆಂಗಳೂರಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿ.

ಹೌದು, ಕಷ್ಟ ಅಂತ ಕೇಳಿಕೊಂಡು ಬಂದ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ಹತ್ತಿರವಾದ ಕಾಮುಕನೊಬ್ಬ, ಕೊನೆಗೆ ಆಕೆಯನ್ನೇ ಮಂಚಕ್ಕೆ ಕರೆಯುವ ಮೂಲಕ ವಿಕೃತಿ ಮೆರೆದಿದ್ದಾನೆ. ಈ ಘಟನೆ ನಡೆದಿರೋದು ಬೆಂಗಳೂರಿನ (Bengaluru) ರಾಜಗೋಪಾಲ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ.
Bengaluru – ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?
ಸಂತ್ರಸ್ತ ಮಹಿಳೆಗೆ ಸೋಶಿಯಲ್ ಮೀಡಿಯಾ ಮೂಲಕ ಪರಿತೋಷ್ ಯಾದವ್ ಎಂಬಾತ ಪರಿಚಯವಾಗಿದ್ದ. ಆರಂಭದಲ್ಲಿ ಬಣ್ಣ ಬಣ್ಣದ ಮಾತುಗಳನ್ನಾಡಿ ಆಕೆಯ ವಿಶ್ವಾಸ ಗಳಿಸಿದ್ದ. ಇತ್ತೀಚೆಗೆ ಮಹಿಳೆಯ ಮಗಳು ಗ್ಯಾಸ್ ಸಿಲಿಂಡರ್ ಸ್ಫೋಟದಿಂದ (Cylinder Blast) ಗಾಯಗೊಂಡಿದ್ದಳು. ಮಗಳ ಚಿಕಿತ್ಸೆಗಾಗಿ ಹಣದ ಅವಶ್ಯಕತೆ ಇದ್ದಾಗ, ಈ “ಆನ್ಲೈನ್ ಫ್ರೆಂಡ್” ಪರಿತೋಷ್ 30 ಸಾವಿರ ರೂಪಾಯಿ ಸಾಲ ನೀಡಿದ್ದ.
Bengaluru – ಸಾಲ ಕೊಟ್ಟು ಅಸಲಿ ಬುದ್ಧಿ ತೋರಿಸಿದ!
ಹಣ ಕೊಟ್ಟ ಮೇಲೆ ಪರಿತೋಷ್ ತನ್ನ ನೈಜ ವರಸೆ ಶುರು ಮಾಡಿದ್ದಾನೆ. ಹಣದ ಸಹಾಯ ಮಾಡಿದ್ದನ್ನೇ ಬಂಡವಾಳ ಮಾಡಿಕೊಂಡ ಈತ, ದೈಹಿಕವಾಗಿ ಸಹಕರಿಸುವಂತೆ ಮಹಿಳೆಯನ್ನು ಪೀಡಿಸಲು ಆರಂಭಿಸಿದ್ದಾನೆ. “ನಾನು ಶ್ರೀಮಂತ, ನನ್ನದೇ ಆದ ಕಂಪನಿ ಇದೆ. ನಿನಗೆ ಅಲ್ಲಿ ಒಳ್ಳೆ ಕೆಲ್ಸ ಕೊಡ್ತೀನಿ, ನಿನ್ನ ಲೈಫ್ ಚೇಂಜ್ ಮಾಡ್ತೀನಿ, ಒಂದೇ ಒಂದು ಅವಕಾಶ ಕೊಡು” ಎಂದು ನಂಬಿಸಲು ಯತ್ನಿಸಿದ್ದಾನೆ. ಅಷ್ಟೇ ಅಲ್ಲದೆ, ಪದೇ ಪದೇ ಮೆಸೇಜ್ ಮಾಡಿ, ಅಶ್ಲೀಲ ವಿಡಿಯೋಗಳನ್ನು ಕಳಿಸಿ ತನ್ನ ಫ್ಲ್ಯಾಟ್‌ಗೆ ಬರುವಂತೆ ಬಲವಂತ ಮಾಡಿದ್ದಾನೆ.
Bengaluru – ಬೆದರಿಕೆಗೆ ಹೆದರಿ ಆತ್ಮಹತ್ಯೆಗೆ ಯತ್ನ ಮಹಿಳೆ
ಈತನ ಕುತಂತ್ರಕ್ಕೆ ಬಲಿಯಾಗದೆ ಇದ್ದಾಗ, ರೊಚ್ಚಿಗೆದ್ದ ಪರಿತೋಷ್ ಬ್ಲ್ಯಾಕ್‌ಮೇಲ್ ತಂತ್ರಕ್ಕೆ ಇಳಿದಿದ್ದಾನೆ. “ನೀನು ಸಹಕರಿಸದಿದ್ದರೆ ನಿನ್ನ ಮೊಬೈಲ್ ನಂಬರ್ ಅನ್ನು ಪೋರ್ನ್ ವೆಬ್‌ಸೈಟ್‌ಗಳಲ್ಲಿ (Porn Websites) ಮತ್ತು ಪಬ್ಲಿಕ್ ಟಾಯ್ಲೆಟ್‌ಗಳಲ್ಲಿ ‘ವೇಶ್ಯಾವಾಟಿಕೆಗೆ ಸಂಪರ್ಕಿಸಿ’ ಎಂದು ಬರೆದು ಹಾಕುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ. Read this also : 40ರ ಅಂಕಲ್, 19ರ ಯುವತಿ ಲವ್ ಸ್ಟೋರಿ: ಪ್ರೇಮಲೋಕದಲ್ಲಿ ತೇಲಾಡುವಾಗಲೇ ನಡೆಯಿತು ಘನಘೋರ!
ಈ ವಿಚಾರ ಸಂತ್ರಸ್ತೆಯ ಪತಿಗೆ ಗೊತ್ತಾಗಿ, ಗಂಡ-ಹೆಂಡತಿಯ ನಡುವೆ ದೊಡ್ಡ ಜಗಳವೇ ನಡೆದಿದೆ. ಇದರಿಂದ ಮನನೊಂದ ಮಹಿಳೆ, ಗಂಡನ ಮನೆ ಬಿಟ್ಟು ಸ್ನೇಹಿತೆಯ ಮನೆಗೆ ಹೋಗಿ, ಅಲ್ಲಿ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿರುವ ಮಹಿಳೆ ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಎಫ್‌ಐಆರ್ (FIR) ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ನಾಗರಿಕರಿಗೊಂದು ಎಚ್ಚರಿಕೆ
ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗುವ ಪ್ರತಿಯೊಬ್ಬರೂ ಒಳ್ಳೆಯವರಾಗಿರುವುದಿಲ್ಲ. ಕಷ್ಟದಲ್ಲಿದ್ದಾಗ ಸಹಾಯ ಹಸ್ತ ಚಾಚುವವರ ಹಿಂದೆ ಕೆಟ್ಟ ಉದ್ದೇಶವೂ ಇರಬಹುದು. ಅದರಲ್ಲೂ ಮಹಿಳೆಯರು ಅಪರಿಚಿತರ ಜೊತೆ ವ್ಯವಹರಿಸುವಾಗ ತುಂಬಾನೇ ಎಚ್ಚರಿಕೆಯಿಂದ ಇರಬೇಕು. ಇಲ್ಲವಾದರೆ ಇಂತಹ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳೇ ಹೆಚ್ಚು.
