Thursday, November 21, 2024

Snake Bite : ಹಾವುಕಚ್ಚಿದ ಮಗನ ಶವವನ್ನು ಸಗಣಿಯಲ್ಲಿ ಮುಚ್ಚಿದ ಅಪ್ಪ, ಮಗ ಮತ್ತೆ ಬದುಕುತ್ತಾನೆ ಅಂದುಕೊಂಡಿದ್ದ ತಂದೆಗೆ ನಿರಾಸೆ…!

ಹಾವೊಂದು ಕಚ್ಚಿ ಸತ್ತ ಮಗನನ್ನು (Snake Bite) ಮತ್ತೆ ಬದುಕಿಸಲು ಇಲ್ಲೊಬ್ಬ ತಂದೆ ಪ್ರಯತ್ನವೊಂದನ್ನು ಮಾಡಿ, ಆತನ ಪ್ರಯತ್ನ ಫಲಿಸದೇ ನಿರಾಸೆಗೊಂಡ ಘಟನೆಯೊಂದು ನಡೆದಿದೆ. ಬಾಲನೊಬ್ಬನಿಗೆ ಹಾವು ಕಚ್ಚಿ ತೀವ್ರ ಅಸ್ವಸ್ಥನಾಗಿ ಮೃತಪಟ್ಟಿದ್ದ. ಹಾವು ಕಚ್ಚಿದ ಕೂಡಲೇ ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮಾರ್ಗ ಮಧ್ಯೆಯೇ ಬಾಲಕ ಮೃತಪಟ್ಟಿದ್ದ. ಇದನ್ನು ಪೋಷಕರು ಒಪ್ಪಲು ಸಿದ್ದವಿರಲಿಲ್ಲ. ಬಳಿಕ ಸ್ಥಳೀಯ ಮಂತ್ರವಾದಿ ಮಗನನ್ನು ಬದುಕಿಸೋದಾಗಿ ಹೇಳಿದ್ದ. ಅದರಂತೆ ಚಿಕಿತ್ಸೆಯ ನೆಪದಲ್ಲಿ ಬಾಲಕ ಮೃತ ದೇಹವನ್ನು ಸಗಣಿಯಲ್ಲಿ ಇಟ್ಟಿದ್ದಾನೆ. ಆದರೆ ಕೊನೆಗೆ ಬಾಲಕ ಮಾತ್ರ ಬದುಕಲಿಲ್ಲ.

ಉತ್ತರ ಪ್ರದೇಶದ ನೌಹಾಜಿಲ್ ಎಂಬಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಈ ಭಾಗದ ಬಾಲಕನೊಬ್ಬನಿಗೆ ಹಾವು ಕಚ್ಚಿದ್ದು, ತೀವ್ರವಾಗಿ ಅಸ್ವಸ್ಥಗೊಂಡಿದ್ದಾನೆ. ಬಳಿಕ ಪೋಷಕರು ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮಾರ್ಗಮಧ್ಯೆಯೇ ಬಾಲಕನ ಜೀವ ಹೋಗಿದೆ. ಆದರೆ ಬಾಲಕನ ಪೋಷಕರು ಮಾತ್ರ ಮಗನ ಸಾವನ್ನು ಒಪ್ಪಿಕೊಳ್ಳಲು ಸಿದ್ದವಾಗಿರಲಿಲ್ಲ. ಬಳಿಕ ಪೋಷಕರು ಸ್ಥಳಿಯ ಮಂತ್ರವಾದಿಯೊಬ್ಬನ್ನು ಕರೆಸಿದ್ದಾರೆ. ಅಲ್ಲಿಗೆ ಬಂದ ಮಂತ್ರವಾದಿ ಮೃತಪಟ್ಟ ಮಗನನ್ನು ಬದುಕಿಸುವುದಾಗಿ ಹೇಳಿದ್ದಾನೆ. ಅದರಂತೆ ಚಿಕಿತ್ಸೆ ಕೊಡುವ ನೆಪದಲ್ಲಿ ಬಾಲಕನ ಮೃತದೇಹವನ್ನು ಸಗಣಿಯಲ್ಲಿ ಮುಚ್ಚಿದ್ದಾನೆ. ಆದರೂ ಸಹ ಮಗ ಮಾತ್ರ ಬದುಕಿ ಬರಲಿಲ್ಲ.

Snake bite body coverd by cow dung 0
Snake bite body coverd by cow dung 0

ಕೆಲವೊಂದು ವರದಿಗಳ ಪ್ರಕಾರ ಕಳೆದ ಭಾನುವಾರ ಉತ್ತರಪ್ರದೇಶದ ನೌಹಾಜಿಲ್ ವ್ಯಾಪ್ತಿಯ ಮಿಟ್ಟೋಲಿ ಎಂಬ ಗ್ರಾಮದಲ್ಲಿ ಬಾಲಕನೋರ್ವನಿಗೆ ಹಾವು ಕಚ್ಚಿತ್ತು. ಗ್ರಾಮದ ನಿವಾಸಿ ಪ್ರಮೋದ್ ಕುಮಾರ್‍ ಎಂಬುವವರ ಮಗ ಕಿಶೋರ್‍ ಮಯಾಂಕ್ (11)ಗೆ ಹಾವು ಕಚ್ಚಿದೆ. ಗಾಡ ನಿದ್ದೆಯಲ್ಲಿದ್ದ ಕಾರಣ ಕಿಶೋರ್‍ ಗೆ ಹಾವು ಕಚ್ಚಿರುವುದು ತಿಳಿದೇ ಇಲ್ಲ. ಬೆಳಗಾಗುತ್ತಿದ್ದಂತೆ ಕಿಶೋರ್‍ ಆರೋಗ್ಯದಲ್ಲಿ ಏರುಪೇರಾಗಿದೆ. ಮೊದಲಿಗೆ ಮನೆಯಲ್ಲಿಯೇ ಕಿಶೋರ್‍ ಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಆದರೂ ಸಹ ಆರೋಗ್ಯ ಸುಧಾರಿಸದ ಕಾರಣ ಸ್ಥಳೀಯ ವೈದ್ಯರ ಬಳಿಕೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ನಗರ ಪ್ರದೇಶದ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಅಲ್ಲಿನ ವೈದ್ಯರು ಸೂಚನೆ ನೀಡಿದ್ದಾರೆ.

ಅದರಂತೆ ಅಲಿಘರ್‍ ನ ವೈದ್ಯಕೀಯ ಆಸ್ಪತ್ರೆಗೆ ಬಾಲಕನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿನ ವೈದ್ಯರು ಹಾವು ಕಚ್ಚಿದ ಹಿನ್ನೆಲೆಯಲ್ಲಿ ಬಾಲಕ ಮೃತಪಟ್ಟಿದ್ದಾಘಿ ಖಚಿತಪಡಿಸಿದ್ದಾರೆ. ಇನ್ನೂ ಕಿಶೋರ್‍ ಮಲಗಿದ್ದ ಕೋಣೆಯಲ್ಲಿ ಹುಡುಕಾಟ ನಡೆಸಿದಾಗ ಹಾವು ಸಿಕ್ಕಿದೆ. ಬಳಿಕ ನೀಮ್ ಗಾಂವ್ ಎಂಬ ಗ್ರಾಮದಲ್ಲಿರುವ ಮಂತ್ರವಾದಿ ಹಾವುಕಚ್ಚಿದ ವ್ಯಕ್ತಿಗಳನ್ನು ಬದುಕಿಸುವುದಾಗಿ ಮಾಹಿತಿ ಸಿಕ್ಕಿದೆ. ಕೂಡಲೇ ಈ ಮೂಡನಂಬಿಕೆಯನ್ನು ನಂಬಿ ಪೋಷಕರು ಮಗನ ಶವವನ್ನು ಮಂತ್ರವಾದಿ ಬಳಿ ತೆಗೆದುಕೊಂಡು ಹೋಗಿದ್ದಾರೆ. ಮಂತ್ರವಾದಿ ಬಾಲಕನ ಶವವನ್ನು ಹಸುವಿನ ಸಗಣಿಯಲ್ಲಿಯೇ ಪೂರ್ಣವಾಗಿ ಮುಚ್ಚಿದ್ದಾನೆ.

ಬಾಲಕನ ಶವವನ್ನು ಸುಮಾರು ಎರಡು ಮೂರು ಗಂಟೆ ಹಸುವಿನ ಸಗಣಿಯಲ್ಲಿ ಇಡಲಾಗಿದೆ. ಇನ್ನೂ ಬಾಲಕನ ಪೋಷಕರು ಮಾತ್ರವಲ್ಲದೇ ಇಡೀ ಗ್ರಾಮದ ಜನತೆ ಮೃತಪಟ್ಟ ಬಾಲಕ ಮತ್ತೆ ಬದುಕಿ ಬರುತ್ತಾನಾ ಎಂದು ಕಾತುರದಿಂದ ಕಾದಿದ್ದಾರೆ. ಮೂರು ಗಂಟೆಗಳ ಬಳಿಕ ಬಾಲಕನ ಶವವನ್ನು ಪೋಷಕರು ತಮ್ಮೂರಿಗೆ ತೆಗೆದುಕೊಂಡು ಹೋಗಿದ್ದಾರೆ. ಮಗ ಮತ್ತೆ ಬದುಕುತ್ತಾನೆ ಎಂಬ ಆಸೆಯಿಂದ ಇದ್ದಂತಹ ತಂದೆಗೆ ನಿರಾಸೆ ಸಿಕ್ಕಿದೆ.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!