ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. (Karnataka State Politics) ಸದ್ಯ ಮುಡಾ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಒಂದು ವೇಳೆ ನ್ಯಾಯಾಲಯದಲ್ಲಿ ತೀರ್ಪು ಸಿಎಂ ಸಿದ್ದರಾಮಯ್ಯನವರ ವಿರುದ್ದ ಬಂದರೇ ಸಿಎಂ ಬದಲಾಗುತ್ತಾರೆ (Karnataka State Politics) ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ. ಈ ನಡುವೆ ಸಚಿವ ಸತೀಶ್ ಜಾರಕಿಹೊಳಿ ದೆಹಲಿಯಲ್ಲಿ (Karnataka State Politics) ನಿನ್ನೆ ರಾಹುಲ್ ಗಾಂಧಿಯವರನ್ನು ಭೇಟಿ ನೀಡಿದ್ದಾರೆ. ಈ ಭೇಟಿ ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕಾ ಅಥವಾ ಸಿಎಂ ಸ್ಥಾನಕ್ಕಾ ಎಂಬ ಅನುಮಾನಗಳು ಮೂಡತೊಡಗಿದೆ.

ಸಿಎಂ ಸಿದ್ದರಾಮಯ್ಯನವರ ವಿರುದ್ದ ಮುಡಾ ನಿವೇಶನ (MUDA SCAM) ಹಂಚಿಕೆ ಅಕ್ರಮದ ಆರೋಪದ ಹಿನ್ನೆಲೆಯಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿದ್ದರು. ಈ ಸಂಬಂಧ ರಾಜ್ಯಪಾಲರ ಆದೇಶವನ್ನು ವಜಾಗೊಳಿಸುವಂತೆ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ಇದೇ ಸೆ.9 ಕ್ಕೆ ಮುಂದೂಡಲಾಗಿದೆ. ಈ ಹಗರಣದ ಸಂಬಂಧ ಪ್ರಾಸಿಕ್ಯೂಷನ್ ಗೆ ಕೊಟ್ಟಾಗಿನಿಂದಲೂ ಸಿಎಂ ಬದಲಾವಣೆಯ (Karnataka State Politics) ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಹೈಕೋರ್ಟ್‌ನಲ್ಲಿ ಸಿಎಂ ವಿರುದ್ದ ತೀರ್ಪು ಬಂದರೇ ಸಿಎಂ ಬದಲಾವಣೆಯಾಗಲಿದೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಈಗಾಗಲೇ ಕೆಲವು ನಾಯಕರು ರಾಜಕೀಯ ಬೆಳವಣಿಗೆಗಳನ್ನು ಸದ್ಬಳಕೆ ಮಾಡಿಕೊಳ್ಳಲು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಸದ್ಯ (CM Siddaramaiah)ಸಿಎಂ ಸಿದ್ದರಾಮಯ್ಯ ಮುಡಾ ಹಗರಣದ ಪ್ರಕರಣದಲ್ಲಿ ರಾಜಿನಾಮೆ ಕೊಟ್ಟರೇ ಡಿ.ಕೆ.ಶಿವಕುಮಾರ್ (D K Shivakumar) , ಮಲ್ಲಿಕಾರ್ಜುನ್ ಖರ್ಗೆ (Mallikarjun Kharge), ಜಿ.ಪರಮೇಶ್ವರ್ (G Parameshwar) ಹಾಗೂ ಸತೀಶ್ ಜಾರಕೀಹೊಳಿ (Satish Jarakiholi) ರವರುಗಳು ಹೆಸರುಗಳು ಬಲವಾಗಿ ಕೇಳಿಬರುತ್ತಿದೆ.

ಇನ್ನೂ ಸಿದ್ದರಾಮಯ್ಯನವರ ವಿರುದ್ದ ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್ ಸರಿಯಿದೆ ಎಂಬ ತೀರ್ಪು ಬಂದರೇ ರಾಜ್ಯದ ನಾಯಕತ್ವ ಬದಲಾಗೋದು ಖಚಿತ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ. ಈ ನಡುವೆ ಕೆಲ ಕಾಂಗ್ರೇಸ್ ನಾಯಕರ ಹೇಳಿಕೆಗಳು ಸಿಎಂ ಬದಲಾವಣೆಯಾದರೇ ನಮಗೆ (Karnataka State Politics) ಅವಕಾಶ ಕೊಡಿ ಎಂಬುದಾಗಿ ಪರೋಕ್ಷ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಹೇಳುತ್ತಿದ್ದಾರೆ. ಈ ನಡುವೆ ನಾಯಕರ ಚಲನವಲನಗಳು ಮಾತ್ರ ಅನುಮಾನ ಮೂಡಿಸುವಂತಿದೆ ಎನ್ನಲಾಗುತ್ತಿದೆ. ಇದೀಗ ಸಚಿವ ಸತೀಶ್ ಜಾರಕಿಹೊಳಿ ನಡೆ ಕುತೂಹಲ ಮೂಡಿಸಿದೆ. ಸಿಎಂ ಗಾದಿಗಾಗಿ (Karnataka State Politics) ಸತೀಶ್ ಜಾರಕಿಹೊಳಿ ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ಹಾಗೂ ಕೆ.ಸಿ.ವೇಣುಗೋಪಾಲ್ ರವರನ್ನು (Karnataka State Politics) ಸತೀಶ್ ಜಾರಕಿಹೊಳಿ ಭೇಟಿ ನೀಡಿದ್ದಾರೆ. ನಿನ್ನೆ ಮದ್ಯಾಹ್ನ ಉಭಯ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿ ತಡರಾತ್ರಿ ವಾಪಸ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಹೈಕೋರ್ಟ್ ನಲ್ಲಿ ಸಿಎಂ ವಿರುದ್ದ ತೀರ್ಪು ಬಂದರೇ ಸಿಎಂ ಬದಲಾವಣೆಯಾಗುವ ಸಾಧ್ಯತೆಯಿದೆ. ಅಂತಹ ಸನ್ನಿವೇಶ ಎದುರಾದರೇ ಹೈಕಮಾಂಡ್ ಪ್ಲಾನ್ ಬಿ ಮಾಡಿಕೊಂಡಿದೆ. (Karnataka State Politics) ಸಿಎಂ ಸ್ಥಾನಕ್ಕಾಗಿ ಸತೀಶ್ ಜಾರಕಿಹೊಳಿ ತೆರೆಮರೆಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಹ ಸಿಎಂ ಸ್ಥಾನಕ್ಕಾಗಿ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಒಂದು ವಾರದ ಹಿಂದೆಯೇ ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿಯವರನ್ನು (Karnataka State Politics) ಭೇಟಿಯಾಗಿ ಮಾತುಕತೆ ನಡೆಸಿದ್ದರು. ತಾನೂ ಸಹ ಸಿಎಂ ಸ್ಥಾನದ ಆಕಾಂಕ್ಷಿ ಎಂದು ಹೈಕಮಾಂಡ್ ಜೊತೆಗೆ ಮಾತನಾಡಿದ್ದಾರೆ ಎನ್ನಲಾಗಿದೆ.

ಆದರೆ ಸಿಎಂ ಸಿದ್ದರಾಮಯ್ಯನವರು ರಾಜಿನಾಮೆ ಕೊಡುವ ಸನ್ನಿವೇಶ (Karnataka State Politics) ಎದುರಾದರೇ ದಲಿತ ಸಿಎಂ ಎಂಬ ಕೂಗಿನಂತೆ ದಲಿತ ಸಿಎಂ ಆಗುತ್ತಾರಾ ಎಂಬ ಅನುಮಾನ ಸಹ ಕಾಡಿದೆ. ಜೊತೆಗೆ ಸಿಎಂ ಸಿದ್ದರಾಮಯ್ಯ ಸೂಚಿಸುವ ನಾಯಕನೇ ಸಿಎಂ ಆಗಬಹುದು ಎಂದೂ ಸಹ ಹೇಳಲಾಗುತ್ತಿದೆ. (Karnataka State Politics) ಈ ನಡುವೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಹ ಸಿಎಂ ಆಕಾಂಕ್ಷಿಯಾಗಿದ್ದಾರೆ. ಆದರೆ ಎಲ್ಲೂ ಸಹ ತಾನು ಸಿಎಂ ಸ್ಥಾನದ ಆಕಾಂಕ್ಷಿ ಅಂತಾ ಹೇಳಿಲ್ಲ. ಆದರೂ ಸಹ ತಾನೂ ಸಿಎಂ ಆಂಕಾಕ್ಷಿ ಎಂದೇ ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.