ಹಾವಿನ ದ್ವೇಷ 12 ವರುಷ ಎಂಬ ಮಾತನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಆದರೆ ಕೆಲವರು ಇದನ್ನು ಸುಳ್ಳು ಎಂದು ಹೇಳುತ್ತಿರುತ್ತಾರೆ. ಈ ಘಟನೆಯ ಬಗ್ಗೆ ಕೇಳಿದರೇ ಹಾವಿಗೂ ದ್ವೇಷ ಇರುತ್ತದೆ ಎಂದು ಹೇಳಬಹುದಾಗಿದೆ. ವ್ಯಕ್ತಿಯೊಬ್ಬರಿಗೆ ಹಾವೊಂದು 45 ದಿನದಲ್ಲಿ 5 ಬಾರಿ ಕಚ್ಚಿದೆ. ಆದರೂ ಸಹ ಆ ವ್ಯಕ್ತಿ ಬದುಕಿದ್ದಾನೆ. ಪದೇ ಪದೇ ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿಯನ್ನು ಕಂಡು ವೈದ್ಯರು ಶಾಕ್ ಆಗಿದ್ದಾರೆ. ಅಂದಹಾಗೆ ಈ ಘಟನೆ ಏನು ಎಂಬ ವಿಚಾರಕ್ಕೆ ಬಂದರೇ,
ಅಂದಹಾಗೆ ಈ ಘಟನೆ ನಡೆದಿರೋದು ಉತ್ತರ ಪ್ರದೇಶದ ಫತ್ಹೇಪುರದಲ್ಲಿ. ವಿಕಾಸ್ ದುಬೆ ಎಂಬುವವರಿಗೆ ಹಾವು 5 ಬಾರಿ ಕಚ್ಚಿರೋದು. 45 ದಿನದಲ್ಲಿ ಹಾವು 5 ಬಾರಿ ವಿಕಾಸ್ ದುಬೆ ಗೆ ಕಚ್ಚಿದೆ. ಕಳೆದ ಜೂನ್ 2 ರಂದು ಮೊದಲ ಬಾರಿಗೆ ವಿಕಾಸ್ ದುಬೆ ತಮ್ಮ ಮನೆಯಲ್ಲಿ ಮಲಗಿದ್ದಾಗ ಹಾವು ಕಚ್ಚಿತ್ತು. ಕೂಡಲೇ ಆತನ ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಆತ ಗುಣಮುಖರಾಗಿ ಮನೆಗೆ ವಾಪಸ್ಸಾಗಿದ್ದರು. ಬಳಿಕ ಜೂನ್ 10 ರಂದು ಎರಡನೇ ಬಾರಿ ಹಾವು ಕಚ್ಚಿದೆ. ಕೂಡಲೇ ಪೋಷಕರು ಮತ್ತೆ ಅದೇ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆ ಬಳಿಕ ಗುಣಮುಖರಾದ ವಿಕಾಸ್ ದುಬೆ ಭಯದಿಂದ ರಾತ್ರಿ ಸಮಯದಲ್ಲಿ ಒಬ್ಬರೇ ಹೊರಗೆ ಹೋಗುವುದನ್ನು ನಿಲ್ಲಿಸಿದ್ದರು.
ಎರಡು ಬಾರಿ ಹಾವು ಕಚ್ಚಿದ ಕಾರಣದಿಂದ ವಿಕಾಸ್ ಸದಾ ಜನರೊಡನೆ ಇರಿಸಲು ಕುಟುಂಬಸ್ಥರು ಆರಂಭಿಸಿದರು. ರಾತ್ರಿ ಮಲಗುವ ಸ್ಥಳದಲ್ಲಿ ಎಲ್ಲಾ ಎಚ್ಚರಿಕೆಗಳನ್ನು ತೆಗೆದುಕೊಂಡು ಹಾವು ಬರದಂತೆ ಸಿದ್ದತೆ ಮಾಡಿದ್ದರು. ಎಷ್ಟೆ ವ್ಯವಸ್ಥೆ ಮಾಡಿದರೂ ಜೂನ್ 17 ರಂದು ಮನೆಯಲ್ಲಿಯೇ ಮೂರನೇ ಬಾರಿ ಹಾವು ಕಚ್ಚಿದೆ. ಬಳಿಕ ಚಿಕಿತ್ಸೆ ಕೊಡಿಸಲಾಗಿತ್ತು. ಮನೆಗೆ ಮತ್ತೆ ಬರುತ್ತಿದ್ದಂತೆ ನಾಲ್ಕನೇ ಬಾರಿಯೂ ಹಾವು ವಿಕಾಸ್ ದುಬೆ ಗೆ ಕಚ್ಚಿದೆ. ಪುನಃ ಆತನಿಗೆ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಗ್ರಾಮದ ಹಿರಿಯರ ಸಲಹೆಯಂತೆ ವಿಕಾಸ್ ದುಬೆ ತಮ್ಮ ಚಿಕ್ಕಮ್ಮನ ಮನೆಗೆ ಕಳುಹಿಸಲಾಗಿತ್ತು. ಆಂಟಿ ಮನೆಗೆ ಹೋದರೂ ಬಿಡದ ಹಾವು ಐದನೇ ಬಾರಿ ಕಚ್ಚಿದೆ. ಈ ಕುರಿತು ಆತನಿಗೆ ಚಿಕಿತ್ಸೆ ನೀಡಿದ ವೈದ್ಯ ಇದೊಂದು ವಿಚಿತ್ರ ಘಟನೆಯಾಗಿದೆ. ಮೂರನೇ ಬಾರಿ ಹಾವು ಕಚ್ಚಿದಾಗ ಊರು ತೊರೆಯುವಂತೆ ಸಲಹೆ ನೀಡಿದ್ದೆ. ಆದರೂ ಮತ್ತೆ ಹಾವು ಕಚ್ಚಿದೆ. ಇದೀಗ ವಿಕಾಸ್ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಇನ್ನೂ ವಿಕಾಸ್ ದುಬೆಗೆ ಪದೇ ಪದೇ ಹಾವು ಕಚ್ಚುತ್ತಿರುವುದಾದರೂ ಏಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಈ ಕುರಿತು ಅಧಿಕೃತ ಮಾಹಿತಿ ಸಿಗಬೇಕಿದೆ.