Shocking News: ಪತಿ ಕಪ್ಪಾಗಿದ್ದಾನೆ ಎಂದು ಆತ್ಮಹತ್ಯೆ ಶರಣಾದ ಪತ್ನಿ…!

Shocking News -ಇತ್ತೀಚಿಗೆ ಕ್ಷುಲ್ಲಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುವಂತಹ ಘಟನೆಗಳು ಹೆಚ್ಚಾಗುತ್ತಿವೆ. ಗಂಡ-ಹೆಂಡತಿ ನಡುವಣ ಗಲಾಟೆಯಿಂದ ಬೇಸತ್ತ ಪತಿ ಅಥವಾ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಕ್ಷುಲ್ಲಕ ಕಾರಣಕ್ಕಾಗಿ ಆತ್ಮಹತ್ಯೆಗೆ (Shocking News) ಶರಣಾಗಿದ್ದಾಳೆ. ಆಕೆಯ ಆತ್ಮಹತ್ಯೆ ಕಾರಣ ಬೇರೇನೂ ಅಲ್ಲಾ ಗಂಡ ಕಪ್ಪಾಗಿರುವುದು ಎಂದು ಹೇಳಲಾಗಿದೆ.

ಉತ್ತರಪ್ರದೇಶದ ಹತ್ರಾಸ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೆ ಜೋಡಿಯ ಮದುವೆ ನಡೆದಿತ್ತು. ತನ್ನ ಗಂಡ ಕಪ್ಪಾಗಿದ್ದಾನೆ ಎಂಬ ಕಾರಣದಿಂದ ಹೆಂಡತಿ (Shocking News) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಮಹಿಳೆಗೆ ತನ್ನ ಪತಿ ಇನ್ನೂ ಸುಂದರವಾಗಿರಬೇಕಾಗಿತ್ತು ಎಂಬ ಕೊರಗು ಆಕೆಗೆ ಕಾಡುತ್ತಿತ್ತಂತೆ. ಮಹಿಳೆ ಮದುವೆಯಾದಾಗಿನಿಂದ ತನ್ನ ವೈವಾಹಿಕ ಜೀವನದಲ್ಲಿ ಖುಷಿಯಾಗಿರಲಿಲ್ಲವಂತೆ. ಪತಿ ಕಪ್ಪಾಗಿರುವುದೇ ಆಕೆಯ ಬೇಸರ ಹಾಗೂ ದುಃಖಕ್ಕೆ ಕಾರಣವಾಗಿತ್ತಂತೆ. ಹತ್ರಾಸ್ ನ ಸಿಯಾಲ್ ಖೇಡಾ ಮೊಹಲ್ಲಾದ ನಿವಾಸಿಯಾದ ತೌಫಿಕ್ (Shocking News)  ಎಂಬಾತ ಪೈಂಟರ್‍ ಕೆಲಸ ಮಾಡುತ್ತಿದ್ದ. ಕಳೆದ ನಾಲ್ಕು ತಿಂಗಳ ಹಿಂದೆ ತೌಫಿಕ್ 25 ವರ್ಷದ ಬರೌಲಾದ ಆಲಿಗಢದ ಜಫರಾಬಾದ್ ನಿವಾಸಿಯಾದ ಸಿಮ್ರಾನ್ ಎಂಬಾಕೆಯೊಂದಿಗೆ ಮದುವೆಯಾಗಿದ್ದ. ತೌಫಿಕ್ ಕೆಲಸಕ್ಕೆ ಹೋದಾಗ ಪತ್ನಿ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.

Friend cheated by friend 0

ಇನ್ನೂ ಸಿಮ್ರಾನ್ ಮನೆಯ (Shocking News) ಕೊಠಡಿಯಲ್ಲಿ ನೇಣು ಬಿಗಿದುಕೊಂಡಿರುವುದನ್ನು ನೋಡಿದ ಅಕ್ಕಪಕ್ಕದ ಕೆಲವರು ತೌಫಿಕ್ ಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಕುರಿತು ಸಿಮ್ರಾನ್ ಸಹೋದರ ಫಕೃದ್ದೀನ್ (Shocking News) ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ತನ್ನ ಸಹೋದರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಗೆ ನಾಲ್ಕು ತಿಂಗಳ ಹಿಂದೆಯಷ್ಟೆ ತೌಫಿಕ್ ಎಂಬಾತನೊಂದಿಗೆ ಮದುವೆ ಮಾಡಿಸಿದ್ದೆ. ಆದರೆ (Shocking News) ನನ್ನ ತಂಗಿಗೆ ಹುಡುಗ ಇಷ್ಟವಿರಲಿಲ್ಲ. ಆದ್ದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನವಿದೆ ಎಂದು ಪೊಲೀಸರಿಗೆ ಮೃತಳ ಸಹೋದರ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.

Leave a Reply

Your email address will not be published. Required fields are marked *

Next Post

Crime News: ಆಪ್ತ ಗೆಳೆಯ ಫಸ್ಟ್ ನೈಟ್ ವಿಡಿಯೋ ರೆಕಾರ್ಡ್ ಮಾಡು ಅಂತಾ ಹೇಳ್ದಾ, ಮಧುಮಗ ಸಹ ಒಪ್ಪಿದ, ಬಳಿಕ ಆಗಿದ್ದೇ ಬೇರೆ….!

Sat Oct 26 , 2024
Crime News – ಇತ್ತೀಚಿಗೆ ನಂಬಿದ ಸ್ನೇಹಿತರೇ ಮೋಸ ಮಾಡುವಂತಹ ಘಟನೆಗಳು ಹೆಚ್ಚಾಗುತ್ತಿವೆ. ಇಲ್ಲೊಬ್ಬ ವ್ಯಕ್ತಿ ಆಪ್ತ ಸ್ನೇಹಿತನ ಮಾತಿನಂತೆ ತನ್ನ ಮೊದಲ ರಾತ್ರಿಯ ವಿಡಿಯೋ ರೆಕಾಡ್‌ ಮಾಡಿದ್ದಾನೆ. ಅದೂ ತನ್ನ ಪತ್ನಿಗೆ ಗೊತ್ತಿಲ್ಲದಂತೆ ಆ ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ವರನ ಸ್ನೇಹಿತ ಫಸ್ಟ್ ನೈಟ್ ವಿಡಿಯೋ ರೆಕಾರ್ಡ್ ಮಾಡಿ ಕಳುಹಿಸಿ (Crime News) ಎಂದು ಹೇಳಿದ್ದಾನೆ. ಅದರಂತೆ ವರ ಸಹ ಮೊದಲ ರಾತ್ರಿ ವಿಡಿಯೋ ರೆಕಾರ್ಡ್ ಮಾಡಿ ಕಳುಹಿಸಿದ್ದಾನೆ. […]
Friend cheated by friend
error: Content is protected !!