Sad Story – ಮದುವೆ ಎಂಬುದು ಪವಿತ್ರವಾದ ಸಂಬಂಧ ಎಂದೇ ಹೇಳಲಾಗುತ್ತದೆ. ಆದರೆ ಕೆಲವೊಂದು ಕಡೆ ಈ ಪವಿತ್ರವಾದ ಸಂಬಂಧಕ್ಕೆ ಕಳಂಕ ತರುವಂತಹ ಘಟನೆಗಳೂ ಸಹ ನಡೆಯುತ್ತಿರುತ್ತವೆ. ಕೆಲವೊಂದು ಘಟನೆಗಳಲ್ಲಿ ಪತ್ನಿ ಪತಿಯನ್ನು ಮೋಸ ಮಾಡಿದರೇ, ಹಲವು ಘಟನೆಗಳಲ್ಲಿ ಪತಿ ಪತ್ನಿಯನ್ನು ಮೋಸ ಮಾಡುತ್ತಿರುತ್ತಾನೆ. ಇದೀಗ ಪತಿಯೋರ್ವ ಪತ್ನಿಯನ್ನು ಹನಿಮೂನ್ ಗೆಂದು ಕರೆದುಕೊಂಡು ಹೋಗಿ ದುಬೈ ಶೇಕ್ ಗೆ 10 ಲಕ್ಷಕ್ಕೆ ಪತ್ನಿಯನ್ನು (ad Story) ಮಾರಾಟ ಮಾಡಿದ್ದಾನೆ. ಬಳಿಕ ಆಕೆಗೆ ಅಂಚೆ ಮೂಲಕ ತ್ರಿವಳಿ ತಲಾಖ್ ಸಹ ಕಳುಹಿಸಿದ ಘಟನೆಯೊಂದು ನಡೆದಿದೆ.
ಅಂದಹಾಗೆ ಈ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ ಎನ್ನಲಾಗಿದೆ. ಪಾಟ್ನಾದ ಶಹಬಾಜ್ ಹಸನ್ ಎಂಬ ಆಸಾಮಿಯ ಜೊತೆ 2021 ರಲ್ಲಿ ವಂಚನೆಗೆ ಒಳಗಾದ ಯುವತಿಯ ಮದುವೆಯಾಗಿದೆ. ಮದುವೆ ಸಂದರ್ಭದಲ್ಲಿ ವಿದ್ಯುತ್ ಇಲಾಖೆಯಲ್ಲಿ ಸರ್ಕಾರಿ ನೌಕರ ಎಂದು ಸುಳ್ಳು ಬೇರೆ ಹೇಳಿದ್ದ. ಮದುವೆಯಾದ ಮೇಲೆ ಯುವತಿಗೆ ಸತ್ಯ ತಿಳಿದಿದೆ. ಆತ ಹೆಸರು ಹೇಳದ ಒಂದು ಎನ್.ಜಿ.ಒ ದಲ್ಲಿ ಕೆಲಸ ಮಾಡುತ್ತಿದ್ದನಂತೆ. ಆದರೆ ಅದು ಯಾವ ರೀತಿಯ ಸ್ವಯಂ ಸೇವಾ ಸಂಘ ಎನ್ನುವುದೂ ಪತ್ನಿಗೆ ತಿಳಿದಿಲ್ಲ. 2021 ರ ಅಕ್ಟೋಬರ್ 29 ರಂದು ಪ್ರವಾಸದ ನೆಪದಲ್ಲಿ, ಕತಾರ್‍ಗೆ ಕರೆದುಕೊಂಡು ಹೋಗಿದ್ದಾನೆ. ಆದರೆ ಹನಿಮೂನ್ ಗೆಂದು ಪತಿಯ ಜೊತೆ ಹೋಗಿದ ಪತ್ನಿಗೆ ಅಲ್ಲೊಂದು ಶಾಕ್ ಆಗಿದೆ. ಪತಿ ಕತಾರ್ ಗೆ ಕರೆದುಕೊಂಡು ಹೋಗಿದ್ದ ಉದ್ದೇಶವೇ ಬೇರೆಯಾಗಿತ್ತು.
ಪಾಪಿ ಪತಿ ತನ್ನ ಪತ್ನಿಯನ್ನು ಶೇಖ್ ಒಬ್ಬನಿಗೆ ಹತ್ತು ಲಕ್ಷ ರೂಪಾಯಿಗೆ ವ್ಯಾಪಾರ ಕುದುರಿಸಿ, ಆತನಿಗೆ ಮಾರಾಟ ಮಾಡಿದ್ದ. ಆದರೆ ಭಯಪಡದ ಯುವತಿ, ಶೇಖ್‌ನಿಂದ ತಪ್ಪಿಸಿಕೊಂಡು ಭದ್ರತಾ ಸಿಬ್ಬಂದಿಯ ಸಹಾಯದಿಂದ ಕತಾರ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ವಿಷಯ ತಲುಪಿಸಿದ್ದಾರೆ. ರಾಯಭಾರ ಕಚೇರಿಯ ಮುಂದಾಳತ್ವದಲ್ಲಿ ಭಾರತಕ್ಕೆ ಮರಳಿದ್ದಾರೆ. ಭಾರತಕ್ಕೆ ಮರಳಿದ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತಮಗಾಗಿರುವ ನೋವನ್ನು ತೋಡಿಕೊಂಡಿದ್ದಾರೆ. ಈ ಕುರಿತು ಮಹಿಳೆ ದಿಘಾ ಪೊಲೀಸ್ ಠಾಣೆಯಲ್ಲಿ ತನ್ನ ಪತಿ ಹಾಗೂ ಅತ್ತೆಯ ವಿರುದ್ದ ವಂಚನೆ ಪ್ರಕರಣವನ್ನು ದಾಖಲು ಮಾಡಿದ್ದು, ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಅತ್ತೆ ಹಾಗೂ ಮಾವ ನಿಗೆ ನೊಟೀಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.