Sad News – ಅನುಮಾನದ ಭೂತ ಎಂಬುದು ತುಂಬಾನೆ ಬೆಲೆ ತರುತ್ತದೆ ಎಂದು ಹೇಳಬಹುದು. ಇದೀಗ ಅಂತಹುದೇ ಅನುಮಾನದ ಭೂತ ಒಂದು ಪ್ರಾಣವನ್ನು ಬಲಿ ಪಡೆದುಕೊಂಡಿದೆ. ಪ್ರೀತಿಸಿ ಮದುವೆಯಾದ ಪತಿಯ ಮೇಲೆ ಅನುಮಾನ ಹುಟ್ಟಿದ್ದು, ಇದರಿಂದ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ದುರ್ದೈವಿಯನ್ನು ಐಶ್ವರ್ಯಾ (26) ಎಂದು ಗುರ್ತಿಸಲಾಗಿದೆ. ಈ ಘಟನೆ ಬೆಂಗಳೂರಿನ ಬಾಗಲಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಾಲಾಗಿದೆ.
ಬೆಂಗಳೂರಿನ ಬಾಗಲಕುಂಟೆಯಲ್ಲಿ ವಾಸಮಾಡುತ್ತಿದ್ದ ನವೀನ್ ಹಾಗೂ ಐಶ್ವರ್ಯ ಎಂಬ ಜೋಡಿ ಕಳೆದ 9 ವರ್ಷಗಳ ಹಿಂದೆಯಷ್ಟೆ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರ ಸಂಸಾರ ಚೆನ್ನಾಗಿಯೇ ನಡೆಯುತ್ತಿತ್ತು. ಐಶ್ವರ್ಯಾ ಬಾಗಲಕುಂಟೆಯಲ್ಲಿ ಎಸ್.ಕೆ.ವೈ ಸಲೂನ್ ನಡೆಸುತ್ತಾ ರೀಲ್ಸ್ ಮಾಡಿಕೊಂಡು ಖುಷಿಯಾಗಿದ್ದಳು. ಆದರೆ ಕೆಲವು ದಿನಗಳಿಂದ ಐಶ್ವರ್ಯ ಗೆ ಗಂಡ ಬೇರೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ ಎಂಬ ಅನುಮಾನ ಹುಟ್ಟಿದೆ. ಈ ವಿಚಾರದಿಂದಲೇ ನವೀನ್ ಹಾಗೂ ಐಶ್ವರ್ಯ ನಡುವೆ ಒಂದು ವಾರದಿಂದಲೂ ಗಲಾಟೆ ನಡೆದಿದೆ. ಈ ನಡುವೆ ನವೀನ್ ತನ್ನ ಪತ್ನಿ ಐಶ್ವರ್ಯಗೆ ತಿಳಿಸದೇ ಧರ್ಮಸ್ಥಳಕ್ಕೆ ಪ್ರವಾಸ ಹೊಗಿದ್ದಾನೆ.
ಈ ಕಾರಣದಿಂದ ಐಶ್ವರ್ಯಗಿದ್ದ ಅನುಮಾನ ಮತಷ್ಟು ಹೆಚ್ಚಾಗಿದೆ. ನವೀನ್ ಧರ್ಮಸ್ಥಳದಿಂದ ಮನೆಗೆ ವಾಪಸ್ ಬಂದಾಗ ಮತ್ತೆ ಐಶ್ವರ್ಯ ಗಲಾಟೆ ಮಾಡಿದ್ದಾಳೆ. ನಂತರ ವಿಶ್ರಾಂತಿ ಪಡೆಯೋಕೆ ನವೀನ್ ಕೋಣೆಗೆ ಹೋಗಿದ್ದಾನೆ. ಇತ್ತ ಐಶ್ವರ್ಯ ಕೋಪದಿಂದ ಮತ್ತೊಂದು ಕೋಣೆಯೊಳಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇನ್ನೂ ಈ ಸಂಬಂಧ ನವೀನ್ ಪ್ರತಿಕ್ರಿಯೆ ನೀಡಿದ್ದು, ನನ್ನ ಪತ್ನಿಗೆ ನನ್ನ ಮೇಲೆ ತುಂಬಾ ಅನುಮಾನವಿತ್ತು. ಇದರಿಂದ ಕೆಲವು ದಿನಗಳಿಂದ ಗಲಾಟೆ ನಡೆಯುತ್ತಿತ್ತು. ಈ ಕೋಪದಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿಕೆ ನೀಡಿದ್ದಾರೆ. ಈ ಕುರಿತು ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.