Saturday, July 12, 2025
HomeStatetrekking- ಬೆಳ್ಳಂ ಬೆಳಿಗ್ಗೆ ಗುಡಿಬಂಡೆ ಬೆಟ್ಟಕ್ಕೆ ಟ್ರಕಿಂಗ್ ಗೆ ಬಂದ ಜಿಲ್ಲಾ ಮಟ್ಟದ ಕಂದಾಯ ಇಲಾಖೆಯ...

trekking- ಬೆಳ್ಳಂ ಬೆಳಿಗ್ಗೆ ಗುಡಿಬಂಡೆ ಬೆಟ್ಟಕ್ಕೆ ಟ್ರಕಿಂಗ್ ಗೆ ಬಂದ ಜಿಲ್ಲಾ ಮಟ್ಟದ ಕಂದಾಯ ಇಲಾಖೆಯ ಅಧಿಕಾರಿಗಳು

ಚಿಕ್ಕಬಳ್ಳಾಪುರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಭಾಸ್ಕರ್, ಚಿಕ್ಕಬಳ್ಳಾಪುರ ಜಿಲ್ಲಾ ಉಪ ವಿಭಾಗಾಧಿಕಾರಿ ಅಶ್ವಿನ್, ಚಿಕ್ಕಬಳ್ಳಾಪುರ ತಹಶೀಲ್ದಾರ್ ಅನಿಲ್ ಕುಮಾರ್ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿ ಕೆಲಸದ ಒತ್ತಡದಿಂದ ಹೊರಬರಲು (trekking) ಬೆಳ್ಳಂ ಬೆಳಿಗ್ಗೆ ಗುಡಿಬಂಡೆ ಸುರಸದ್ಮಗಿರಿ ಬೆಟ್ಟಕ್ಕೆ ಟ್ರೆಕ್ಕಿಂಗ್ ಬಂದಿದ್ದರು.

ಈ ವೇಳೆ ಅಪರ ಜಿಲ್ಲಾಧಿಕಾರಿ ಭಾಸ್ಕರ್ ಮಾತನಾಡಿ, ಕಂದಾಯ ಇಲಾಖೆಯ ನೌಕರರು ಸದಾ ಒತ್ತಡದಲ್ಲಿ  ಪ್ರತಿ ದಿನ ಕೆಲಸ ಮಾಡುತ್ತಿರುತ್ತಾರೆ. ವಾಯು ವಿಕಾರ ಬೆಳಿಗ್ಗೆ ಆಗಲಿ, ಶರೀರಕ್ಕೆ ವ್ಯಾಯಾಮ ಆಗಬೇಕು ಎಂದು ಒಂದು ಟ್ರೆಕ್ಕಿಂಗ್ ತಂಡವನ್ನು ರಚನೆ ಮಾಡಿಕೊಂಡಿದ್ದೇವೆ. ಎಲ್ಲಾ ಸೇರಿ ಗುಡಿಬಂಡೆ ಸುರಸದ್ಮಗಿರಿ ಬೆಟ್ಟವನ್ನು ಆಯ್ಕೆ ಮಾಡಿಕೊಂಡು ಇಂದು ಗುಡಿಬಂಡೆ ಬೆಟ್ಟ ಸುಮಾರು25-30 ಜನ ಕಂದಾಯ ಇಲಾಖೆಯ ನೌಕರರ ಬಂದಿದ್ದೇವೆ. ಗುಡಿಬಂಡೆ ಬೆಟ್ಟದಲ್ಲಿ ಗಿಡಗಳು ಪೊದೆಗಳು ಇದೆ ಬೆಟ್ಟ ನಿರ್ವಹಣೆ ಆಗಬೇಕು. ಗುಡಿಬಂಡೆ ಬೆಟ್ಟದ ಮೇಲೆ ಹೋದಾಗ ಸುಂದರವಾದ ವಾತಾವರಣ ಇದೆ. ಬೆಟ್ಟದಿಂದ ಗುಡಿಬಂಡೆ ಅಮಾನಿ ಬೈರಸಾಗರ ಕೆರೆ ನೋಡಿದಾಗ ಭಾರತ ಭೂಪಟ ದಂತೆ ಕಾಣುತ್ತದೆ. ಇದೇ ತರ ಜಿಲ್ಲೆಯ ಪ್ರವಾಸಿತಾಣಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳು ಪಟ್ಟಿ ಮಾಡಿ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.

Revenue department officials trekking 1

ಬಳಿಕ ಚಿಕ್ಕಬಳ್ಳಾಪುರ ಜಿಲ್ಲಾ ಉಪ ವಿಭಾಗಾಧಿಕಾರಿ ಅಶ್ವಿನ್ ಮಾತನಾಡಿ, ಬೆಟ್ಟದಲ್ಲಿ ತಾಜ್ಯ ಗಿಡಗಳು ಬೆಳೆದಿದೆ ಅವುಗಳ ಕಟಾವು ಮಾಡಲು ಹಾಗೂ ನಿರ್ವಹಣೆ ಮಾಡಲು ಯಾರಿಗಾದರೂ ಇಲಾಖೆಯ ವಹಿಸಿ ಸ್ವಚ್ಛ ಗೆ ಪ್ರಮುಖ ಆದ್ಯತೆ ನೀಡಬೇಕು. ಒಂದು ಕಡೆ ತಂಗಾಳಿ ಇನ್ನೊಂದು ಕಡೆ ಕೆರೆ ನೀರು ಗುಡಿಬಂಡೆ ಪರಿಸರ ಬಹಳ ಚೆನ್ನಾಗಿ ಇದೆ. ಪ್ರವಾಸಿ ತಾಣ ಚೆನ್ನಾಗಿ ಇದೆ. ಪ್ರವಾಸಿಗರು ಹೆಚ್ಚು ಬರಬೇಕು. ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರವಾಸಿ ತಾಣಗಳು ಹೆಚ್ಚು ಇದ್ದು ಗುಡಿಬಂಡೆ ಸಹ ಪ್ರವಾಸಿಗರ ಆಕರ್ಷಣೆಯ ತಾಣವಾಗಿದೆ. ಅಭಿವೃದ್ಧಿ ಪಡಿಸಲು ಜಿಲ್ಲಾಡಳಿತ ಚರ್ಚೆ ಮಾಡಿ ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳು ಗುರುತಿಸಿ ಅಭಿವೃದ್ಧಿ ಪಡಿಸಲು ಈ ರೀತಿಯ ಪ್ರವಾಸ ಕೈಕೊಂಡು ಇದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ತಹಶೀಲ್ದಾರ್ ಅನಿಲ್ ಕುಮಾರ್, ಗುಡಿಬಂಡೆ ತಹಶೀಲ್ದಾರ್ ಸಿಗ್ಬತುಲ್ಲ ಸೇರಿದಂತೆ ಚಿಕ್ಕಬಳ್ಳಾಪುರ ತಾಲ್ಲೂಕು ಹಾಗೂ ಜಿಲ್ಲೆಯ ಕಂದಾಯ ಇಲಾಖೆಯ ನೌಕರರು ಹಾಜರಿದ್ದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular