Renukaswamy : ನನ್ನ ಮಗ ಮತ್ತೆ ಹುಟ್ಟಿ ಬಂದಿದ್ದಾನೆ ಎಂದು ಭಾವುಕರಾದ ರೇಣುಕಾಸ್ವಾಮಿ ತಂದೆ….!

ಕರ್ನಾಟಕದಲ್ಲಿ ಭಾರಿ ಸದ್ದು ಮಾಡಿದ ರೇಣುಕಾಸ್ವಾಮಿ ಕೊಲೆ ಪ್ರಕರಣದಡಿ ಇನ್ನೂ ದರ್ಶನ್ ಹಾಗೂ ಪವಿತ್ರಾ ಗೌಡ ರಿಗೆ ಜಾಮೀನು ಸಿಗದೇ ಜೈಲಿನಲ್ಲೇ ಕಾಲ ಕಳೆಯುವಂತಾಗಿದೆ. ದರ್ಶನ್ ಮತ್ತು ಗ್ಯಾಂಗ್ ನಿಂದ ಕೊಲೆಗೀಡಾದ ರೇಣುಕಾಸ್ವಾಮಿ ಪತ್ನಿ ಸಹನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಗರದ ಕೀರ್ತಿ ಆಸ್ಪತ್ರೆಯಲ್ಲಿ ಸಹನಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗನಿಗೆ ಗಂಡು ಮಗು ಹುಟ್ಟಿದ ಹಿನ್ನೆಲೆಯಲ್ಲಿ ಸ್ವಾಮಿ ತಂದೆ ಶಿವನಗೌಡ್ರು ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಅವರು ಭಾವುಕರಾಗಿದ್ದಾರೆ.

Renukaswamy wife birth to a baby boy 0

ಮಗನ ನೆನಪಿನಲ್ಲೇ ಕಳೆಯುತ್ತಿದ್ದ ರೇಣುಕಾಸ್ವಾಮಿ ತಂದೆ ಕಾಶೀನಾಥ ಶಿವನಗೌಡ್ರ ಮೊಮ್ಮಗ ಬಂದ ಬಳಿಕ ಮಾಧ್ಯಮಗಳ ಮುಂದೆ ಮೊದಲ ಬಾರಿಗೆ ನಗು ಬೀರಿ ಮಾತನಾಡಿದ್ದಾರೆ. ನಮ್ಮ ಮಗನೇ ಹುಟ್ಟಿ ಬಂದಷ್ಟು ಸಂತೋಷವಾಗಿದೆ ಎಂದಿದ್ದಾರೆ. ನಮ್ಮ ಸೊಸೆ ಸಹನಾ ಗಂಡು‌ಮಗುವಿಗೆ ಜನ್ಮ ನೀಡಿದ್ದಾರೆ. ನಮ್ಮ ಮಗನೇ ಹುಟ್ಟಿ ಬಂದಷ್ಟೇ ಖುಷಿ‌ ನಮಗಾಗಿದೆ. ನಾರ್ಮಲ್ ಡೆಲೆವರಿ ಆಗಿದ್ದು, ತಾಯಿ ಮಗು ಸುರಕ್ಷಿತವಾಗಿದ್ದಾರೆ. ಕೀರ್ತಿ ಆಸ್ಪತ್ರೆಯಿಂದ ಉಚಿತ ಚಿಕಿತ್ಸೆ ನೀಡಿದ್ದಾರೆ. ಇದಕ್ಕಾಗಿ, ಡಾ.ಮಲ್ಲಿಕಾರ್ಜುನ ಹಾಗೂ ಇತರ ವೈದ್ಯರಿಗೆ ಧನ್ಯವಾದ ಅರ್ಪಿಸುತ್ತೇವೆ ಎಂದು ಕಾಶಿನಾಥ ತಿಳಿಸಿದರು.

darshan case 14 days judicial custody 1

ರೇಣುಕಾಸ್ವಾಮಿ ಹೆಂಡತಿ ಸಹನಾ ಇಂದು ಬೆಳಗಿನ ಜಾವ 7 ಗಂಟೆ 1 ನಿಮಿಷಕ್ಕೆ ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾರೆ. ಸಹನಾ ನಗರದ  ಜೆಸಿಆರ್ ಬಡಾವಣೆಯಲ್ಲಿರುವ ಕೀರ್ತಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ನಿಗದಿತ ದಿನಾಂಕಕ್ಕಿಂತ ಒಂದು ವಾರ ಮೊದಲೇ ಮಗುವನ್ನ ಹೆತ್ತಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಸಮಯದಲ್ಲಿ ಪತ್ನಿ ಸಹನಾ ಗರ್ಭಿಣಿಯಾಗಿದ್ದು, ಮನೆಯಲ್ಲಿಯೇ ವಿಶ್ರಾಂತಿಯಲ್ಲಿದ್ದರು. ಇದೇ ಸಮಯದಲ್ಲಿ ದರ್ಶನ್​​ ಮತ್ತು ಗ್ಯಾಂಗ್​ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆಸಿ ಕೊಲೆ ಮಾಡಿದ್ದರು. ಜೂನ್​ 9ರಂದು ರೇಣುಕಾಸ್ವಾಮಿ ಮೃತದೇಹ ಬೆಂಗಳೂರಿನ ಸುಮ್ಮನಹಳ್ಳಿ ಬ್ರಿಡ್ಜ್ ಬಳಿಯ ಚರಂಡಿ ಪಕ್ಕದಲ್ಲಿ ಪತ್ತೆಯಾಗಿತ್ತು. ಈ ಕೊಲೆ ಪ್ರಕರಣದಲ್ಲಿ ನಟ ದರ್ಶನ್​, ಪವಿತ್ರಾ ಗೌಡ ಇತರರನ್ನು ಬಂಧಿಸಿದ್ದು, ಆರೋಪಿಗಳು ಸದ್ಯ ಜೈಲಿನಲ್ಲಿದ್ದಾರೆ.

Leave a Comment

Your email address will not be published. Required fields are marked *

Scroll to Top