ನೀವು ಬ್ಯಾಂಕ್ ವಹಿವಾಟುಗಳಿಗೆ ಇಂದಿಗೂ ಚೆಕ್ (Cheque Book) ಬಳಸುತ್ತಿದ್ದೀರಾ? ಹಾಗಿದ್ದರೆ ವಾಟ್ಸಾಪ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆ ಒಂದು ಸಂದೇಶ ನಿಮ್ಮ ಕಣ್ಣಿಗೂ ಬಿದ್ದಿರಬಹುದು. “ಡಿಸೆಂಬರ್ 31ರ ನಂತರ ನಿಮ್ಮ ಬಳಿ ಇರುವ ಹಳೆಯ ಚೆಕ್ ಬುಕ್ ಅಮಾನ್ಯವಾಗುತ್ತದೆ, ಜನವರಿ 1ರಿಂದ ಹೊಸ ಚೆಕ್ ಬಳಸದಿದ್ದರೆ 50,000 ರೂಪಾಯಿಗಿಂತ ಹೆಚ್ಚಿನ ಚೆಕ್ ಪಾಸ್ ಆಗುವುದಿಲ್ಲ” ಎಂಬ ಸುದ್ದಿ ಸದ್ಯ ಎಲ್ಲೆಡೆ ಭಾರಿ ಸಂಚಲನ ಮೂಡಿಸಿದೆ.
ಆದರೆ ಈ ಸುದ್ದಿಯಲ್ಲಿ ಎಷ್ಟು ಸತ್ಯವಿದೆ? ನಿಮ್ಮ ಬಳಿ ಇರುವ ಚೆಕ್ ಬುಕ್ ನಿಜವಾಗಿಯೂ ಕೆಲಸ ಮಾಡಲ್ವಾ? ಈ ಎಲ್ಲಾ ಗೊಂದಲಗಳಿಗೆ ಸ್ವತಃ ಭಾರತೀಯ ರಿಸರ್ವ್ ಬ್ಯಾಂಕ್ (RBI) ತೆರೆ ಎಳೆದಿದೆ.
Cheque Book – ವೈರಲ್ ಆಗುತ್ತಿರುವ ಆ ಆಘಾತಕಾರಿ ಸಂದೇಶದಲ್ಲಿ ಏನಿದೆ?
ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ನಿಯಮಗಳಿಗೆ ಸಂಬಂಧಿಸಿದಂತೆ ತರಹೇವಾರಿ ಪೋಸ್ಟ್ಗಳು ಕಾಣಸಿಗುತ್ತವೆ. ಅದೇ ರೀತಿ, ಈ ಬಾರಿ ಚೆಕ್ ಬುಕ್ ನಿಯಮಗಳ ಹೆಸರಿನಲ್ಲಿ ನಕಲಿ ಮಾಹಿತಿಯೊಂದು ಕಾಡ್ಗಿಚ್ಚಿನಂತೆ ಹರಡುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶದ ವಿವರ
ವೈರಲ್ ಆಗಿರುವ ಪೋಸ್ಟ್ ಪ್ರಕಾರ:
- ಡಿಸೆಂಬರ್ 31, 2026ರ ಒಳಗೆ ಪ್ರತಿಯೊಬ್ಬ ಗ್ರಾಹಕರು ತಮ್ಮ ಹಳೆಯ ಚೆಕ್ ಬುಕ್ ಅನ್ನು ಬದಲಾಯಿಸಿಕೊಳ್ಳಬೇಕು.
- ಜನವರಿ 1, 2027ರಿಂದ ಹಳೆಯ ಚೆಕ್ಗಳು ಸಂಪೂರ್ಣವಾಗಿ ಅಮಾನ್ಯವಾಗಲಿವೆ.
- ರೂ. 50,000ಕ್ಕಿಂತ ಹೆಚ್ಚಿನ ಮೊತ್ತದ ಹಳೆಯ ಚೆಕ್ಗಳನ್ನು ಬ್ಯಾಂಕ್ಗಳು ಸ್ವೀಕರಿಸುವುದಿಲ್ಲ.
- ಹೊಸ ಚೆಕ್ ಬುಕ್ಗಳಲ್ಲಿ ಆಲ್ಫಾ-ನ್ಯೂಮರಿಕ್ ಕೋಡ್, ಹೊಸ ಎಂಐಸಿಆರ್ (MICR) ಸಂಖ್ಯೆ, ಯುವಿ (UV) ಕೋಡ್ ಸೇರಿದಂತೆ ಹೊಸ ಭದ್ರತಾ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.
- ತಕ್ಷಣವೇ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಥವಾ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಮೂಲಕ ಹೊಸ ಚೆಕ್ ಬುಕ್ಗೆ ಅರ್ಜಿ ಸಲ್ಲಿಸಿ ಎಂದು ಗ್ರಾಹಕರನ್ನು ಆತಂಕಕ್ಕೆ ತಳ್ಳುವಂತೆ ಹೇಳಲಾಗಿತ್ತು. Read this also : ಚೆಕ್ ನಲ್ಲಿ ಅಮೌಂಟ್ ಬರೆದ ಮೇಲೆ ‘Only’ ಅಂತ ಏಕೆ ಬರೀತಾರೆ? ಇದರ ಹಿಂದಿರೋ ಸೀಕ್ರೆಟ್ ಗೊತ್ತಾದ್ರೆ ಶಾಕ್ ಆಗ್ತೀರಾ!
ಆರ್ಬಿಐ (RBI) ಸ್ಪಷ್ಟನೆ: ವೈರಲ್ ಸುದ್ದಿಯ ಅಸಲಿ ಸತ್ಯ ಇಲ್ಲಿದೆ
ಈ ಸುದ್ದಿ ಜನಸಾಮಾನ್ಯರಲ್ಲಿ ಮತ್ತು ಬ್ಯಾಂಕ್ ಗ್ರಾಹಕರಲ್ಲಿ ದೊಡ್ಡ ಗೊಂದಲಕ್ಕೆ ಕಾರಣವಾಗುತ್ತಿದ್ದಂತೆಯೇ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೇರವಾಗಿ ರಂಗಕ್ಕಿಳಿದಿದೆ.

ತನ್ನ ಅಧಿಕೃತ ‘X’ (ಹಿಂದಿನ ಟ್ವಿಟರ್) ಖಾತೆಯ ಮೂಲಕ ಸ್ಪಷ್ಟನೆ ನೀಡಿರುವ ಕೇಂದ್ರ ಬ್ಯಾಂಕ್, ಈ ವೈರಲ್ ಪೋಸ್ಟ್ (Related Post Link Here) ಅನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದು, ಇದೊಂದು ‘ಫೇಕ್ ನ್ಯೂಸ್’ (ನಕಲಿ ಸುದ್ದಿ) ಎಂದು ಸ್ಪಷ್ಟಪಡಿಸಿದೆ. ಪ್ರಸ್ತುತ ಹಳೆಯ ಚೆಕ್ ಬುಕ್ಗಳನ್ನು ರದ್ದುಗೊಳಿಸುವ ಅಥವಾ ಅಂತಹ ಯಾವುದೇ ಹೊಸ ನಿರ್ಬಂಧಗಳನ್ನು ವಿಧಿಸುವ ನಿಯಮವನ್ನು ಜಾರಿಗೆ ತಂದಿಲ್ಲ ಎಂದು ಆರ್ಬಿಐ ಖಚಿತಪಡಿಸಿದೆ.
ಹಳೆಯ ಚೆಕ್ ಬುಕ್ ಹೊಂದಿರುವವರು ಗಾಬರಿಯಾಗಬೇಕಿಲ್ಲ
ಕೇಂದ್ರ ಬ್ಯಾಂಕ್ ನೀಡಿರುವ ಸ್ಪಷ್ಟನೆಯ ಪ್ರಕಾರ, ನಿಮ್ಮ ಬಳಿ ಇರುವ ಚೆಕ್ ಬುಕ್ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. 50,000 ರೂಪಾಯಿಯ ಮಿತಿ ಅಥವಾ ಡಿಸೆಂಬರ್ 31ರ ಗಡುವು ಎಂಬುದೆಲ್ಲಾ ಕೇವಲ ಕಿಡಿಗೇಡಿಗಳು ಹಬ್ಬಿಸಿರುವ ವದಂತಿಗಳಷ್ಟೇ. ಆದ್ದರಿಂದ ಬ್ಯಾಂಕ್ ಶಾಖೆಗಳಿಗೆ ದೌಡಾಯಿಸಿ ಹೊಸ ಚೆಕ್ ಬುಕ್ಗಾಗಿ ಕ್ಯೂ ನಿಲ್ಲುವ ಯಾವುದೇ ಅಗತ್ಯವಿಲ್ಲ.

ಇಂತಹ ವದಂತಿಗಳನ್ನು ನಂಬುವ ಮುನ್ನ ಈ ಸರಳ ಎಚ್ಚರಿಕೆ ವಹಿಸಿ
- ಅಧಿಕೃತ ಮೂಲಗಳನ್ನು ಪರಿಶೀಲಿಸಿ: ಯಾವುದೇ ಹಣಕಾಸು ನಿಯಮ ಬದಲಾವಣೆಯಾದರೆ ರಿಸರ್ವ್ ಬ್ಯಾಂಕ್ ತನ್ನ ಅಧಿಕೃತ ವೆಬ್ಸೈಟ್ (rbi.org.in) ಅಥವಾ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಸಾರ್ವಜನಿಕ ಪ್ರಕಟಣೆ ಹೊರಡಿಸುತ್ತದೆ.
- ಮುಂದೆ ಫಾರ್ವರ್ಡ್ ಮಾಡಬೇಡಿ: ಯಾವುದೇ ಬ್ಯಾಂಕಿಂಗ್ ಎಚ್ಚರಿಕೆ ಅಥವಾ ಸುದ್ದಿ ವಾಟ್ಸಾಪ್ನಲ್ಲಿ ಬಂದ ತಕ್ಷಣ ಅದನ್ನು ಇತರರಿಗೆ ಫಾರ್ವರ್ಡ್ ಮಾಡುವುದನ್ನು ನಿಲ್ಲಿಸಿ.
- ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ: ಸಂದೇಹವಿದ್ದಲ್ಲಿ ನಿಮ್ಮ ಖಾತೆ ಇರುವ ಅಧಿಕೃತ ಬ್ಯಾಂಕ್ ಗ್ರಾಹಕ ಸೇವಾ ಕೇಂದ್ರ ಅಥವಾ ಶಾಖೆಯನ್ನು ಸಂಪರ್ಕಿಸಿ ಮಾಹಿತಿ ಖಚಿತಪಡಿಸಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ತಕ್ಷಣ ಯಾವುದೇ ಸುದ್ದಿ ನಿಜವಾಗುವುದಿಲ್ಲ. ಸತ್ಯಾಸತ್ಯತೆ ತಿಳಿಯದೆ ಇಂತಹ ವದಂತಿಗಳಿಗೆ ಕಿವಿಗೊಡಬೇಡಿ ಮತ್ತು ಆತಂಕಕ್ಕೆ ಒಳಗಾಗಬೇಡಿ.


