Pregnant Woman – ರಾಜ್ಯದಲ್ಲಿ ಇತ್ತೀಚಿಗೆ ಬಾಣಂತಿಯರ ಸಾವುಗಳು ಹೆಚ್ಚಾಗುತ್ತಿವೆ. ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಕೇವಲ ಒಂದು ವಾರದ ಅಂತರದಲ್ಲಿ 5 ಬಾಣಂತಿಯರು ಸಾವನ್ನಪಿದ್ದರು. ಇಷ್ಟಾದರೂ ಇನ್ನೂ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿಲ್ಲ ಎಂದೇ ಹೇಳಲಾಗುತ್ತಿದೆ. ಇದೀಗ ಮತ್ತೋರ್ವ ಬಾಣಂತಿ ಮೃತಪಟ್ಟಿದ್ದಾರೆ. ಶಿವಮೊಗ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯೊಬ್ಬರು ಮಗು ಜನಿಸಿದ 2 ದಿನದ ಬಳಿಕ ಸಾವಿಗೀಡಾಗಿದ್ದಾರೆ. ಮೃತ ದುರ್ದೈವಿಯನ್ನು ಅಶ್ವಿನಿ ಎಂದು ಗುರ್ತಿಸಲಾಗಿದೆ. ಇನ್ನೂ ಅಶ್ವಿನಿ ಮದುವೆಯಾಗಿ ಒಂದೂವರೆ ವರ್ಷ ಆಗಿದೆ ಅಷ್ಟೆ. ನೂರಾರು ಕನಸುಗಳನ್ನು ಕಂಡಿದ್ದ ಅಶ್ವಿನಿ ಇದೀಗ ಮೃತಪಟ್ಟಿದ್ದು, ಅವರ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.
ಮೃತ ದುರ್ದೈವಿ ಅಶ್ವಿನಿ, ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನವರಾಗಿದ್ದು, MCA ಸ್ನಾತಕೋತ್ತರ ಪದವಿಯಲ್ಲಿ ಗೋಲ್ಡ್ ಮೆಡಲಿಸ್ಟ್ ಆಗಿದ್ದರು. ಮೃತ ಅಶ್ವಿನಿ ಒಂದೂವರೆ ವರ್ಷದ ಹಿಂದೆ ಅಷ್ಟೇ ಮದುವೆಯಾಗಿದ್ದಾರೆ. ಆದರೆ ದುರದೃಷ್ಟವಶಾತ್ ಮದುವೆಯಾದ ಒಂದೂವರೆ ವರ್ಷದಲ್ಲೇ ದುರಂತ ಅಂತ್ಯಕಂಡಿದ್ದಾಳೆ. ಕಳೆದ ಎರಡು ದಿನಗಳ ಹಿಂದೆ ಸಾಗರದ ಉಪ ವಿಭಾಗೀಯ ಸರ್ಕಾರಿ ಆಸ್ಪತ್ರೆಗೆ ಬಾಣಂತಿ ಅಶ್ವಿನಿ ಅವರನ್ನು ದಾಖಲಿಸಲಾಗಿತ್ತು. ಆಗ ವೈದ್ಯರು ಭ್ರೂಣದ ಸಮಸ್ಯೆ ಇದೆ ಎಂದು ಚಿಕಿತ್ಸೆ ನೀಡಿದ್ದರು. ಆದರೆ, ವೈದ್ಯರು ಚಿಕಿತ್ಸೆ ನೀಡಿದ ಬಳಿಕ ಮಹಿಲೆಗೆ ತೀವ್ರ ರಕಸ್ತ್ರಾವ ಶುರುವಾಗಿದೆ. ಎಪಿಟಿಟಿ ಎಂಬ ರಕ್ತ ಹೆಪ್ಪುಗಟ್ಟುವಿಕೆ ವಿಳಂಬವಾಗುವ ಸಮಸ್ಯೆಯಿಂದ ನಿರಂತರ ರಕ್ತಸ್ರಾವ ಆಗಿ ಮಹಿಳೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇನ್ನೂ ಅಶ್ವಿನಿ ಒಂದೂವರೆ ತಿಂಗಳ ಗರ್ಭಿಣಿಯಾಗಿದ್ದಳು. ಆಕೆಯ ಆರೋಗ್ಯದಲ್ಲಿ ಏರುಪೇರು ಕಂಡ ಹಿನ್ನೆಲೆಯಲ್ಲಿ ಆಕೆಯನ್ನು ಜ.27 ರಂದು ಸಾಗರದ ತಾಲೂಕು ಆಸ್ಪತ್ರೆಗೆ ಹೋಗಿದ್ದಳು. ಈ ವೇಳೆ ವೈದ್ಯರು ಮಗು ಸರಿಯಾಗಿ ಬೆಳೆದಿರಲಿಲ್ಲ ಎಂದು ಅಶ್ವಿನಿಗೆ ವೈದ್ಯರು ಗರ್ಭಪಾತ ಮಾಡಿದ್ದಾರೆ ಎನ್ನಲಾಗಿದ್ದು, ಗರ್ಭಪಾತದ ಬಳಿಕ ಅಶ್ವಿನಿಗೆ ನಿರಂತರವಾಗಿ ರಕ್ತಸ್ರಾವವಾಗಿದೆ. ಆಕೆಯ ಆರೋಗ್ಯ ಹಂತ ಹಂತವಾಗಿ ಹದೆಗೆಡುತ್ತಾ ಹೋಗಿದೆ. ಇದನ್ನು ಗಮನಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ಕರೆದುಕೊಂಉ ಹೋಗಲು ಸೂಚನೆ ನೀಡಿದ್ದರಂತೆ.
ಅದರಂತೆ ಅಶ್ವಿನಿ ಕುಟುಂಬಸ್ಥರು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಕೆಲವೇ ಕ್ಷಣದಲ್ಲಿ ಅಶ್ವಿನಿ ಮೃತಪಟ್ಟಿದ್ದಾಳೆ. ಆರೋಗ್ಯವಾಗಿದ್ದ 28 ವಯಸ್ಸಿನ ಒಂದೂವರೆ ತಿಂಗಳ ಗರ್ಭೀಣಿಯು ಸಾವಿಗೆ ಸಾಗರ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಮೃತಳ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಈ ಘಟನೆಯ ಸಂಬಂಧ ಸೂಕ್ತ ತನಿಖೆಯಾಗಬೇಕೆಂದು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.