HomeTechnologyPersonal Loan vs Credit Card : ತುರ್ತು ಪರಿಸ್ಥಿತಿಯಲ್ಲಿ ದುಡ್ಡಿಗೆ ಎಲ್ಲಿ ಹೋಗೋದು? ಪರ್ಸನಲ್...

Personal Loan vs Credit Card : ತುರ್ತು ಪರಿಸ್ಥಿತಿಯಲ್ಲಿ ದುಡ್ಡಿಗೆ ಎಲ್ಲಿ ಹೋಗೋದು? ಪರ್ಸನಲ್ ಲೋನ್ ಅಥವಾ ಕ್ರೆಡಿಟ್ ಕಾರ್ಡ್?

ಕಷ್ಟದ ಸಮಯ ಹೇಳಿ ಕೇಳಿ ಬರುವುದಿಲ್ಲ ಅಲ್ವಾ? ಇದ್ದಕ್ಕಿದ್ದಂತೆ ಆಸ್ಪತ್ರೆ ಖರ್ಚು ಅಥವಾ ಬೇರೆ ಯಾವುದೋ ತುರ್ತು ಪರಿಸ್ಥಿತಿ ಎದುರಾದಾಗ, ನಮಗೆ ಮೊದಲು ನೆನಪಾಗುವುದೇ ಪರ್ಸನಲ್ ಲೋನ್ ಅಥವಾ ಜೇಬಿನಲ್ಲಿರುವ ಕ್ರೆಡಿಟ್ ಕಾರ್ಡ್. ಆದರೆ, ಟೆನ್ಷನ್‌ನಲ್ಲಿ ಯಾವುದೋ ಒಂದನ್ನು ಆರಿಸಿಕೊಳ್ಳುವ (Personal Loan vs Credit Card) ಮುನ್ನ ಸ್ವಲ್ಪ ಯೋಚಿಸಬೇಕು. ಯಾಕೆಂದರೆ, ಸರಿಯಾದ ನಿರ್ಧಾರ ತೆಗೆದುಕೊಳ್ಳದಿದ್ದರೆ, ಮುಂದೆ ಸಾಲದ ಸುಳಿಯಲ್ಲಿ ಸಿಕ್ಕಿಕೊಳ್ಳುವ ಅಪಾಯವಿದೆ. ಹಾಗಾದರೆ, ಇವೆರಡರಲ್ಲಿ ಯಾವುದು ಬೆಸ್ಟ್? ಬನ್ನಿ, ನಿಮ್ಮ ಗೊಂದಲ ಬಗೆಹರಿಸೋಣ.

Personal Loan vs Credit Card comparison showing EMI, interest rates, and emergency borrowing options

Personal Loan vs Credit Card – ಲೆಕ್ಕಾಚಾರ ಹೇಗೆ ನಡೆಯುತ್ತೆ?

ಈ ಎರಡೂ ಸಾಲಗಳು ಕೆಲಸ ಮಾಡುವ ರೀತಿಯೇ ಬೇರೆ. ಅದನ್ನು ಮೊದಲು ಅರ್ಥಮಾಡಿಕೊಳ್ಳೋಣ:

  • ಪರ್ಸನಲ್ ಲೋನ್ (Personal Loan): ಇದೊಂದು ರೀತಿ ನೀಟಾಗಿ ಪ್ಲಾನ್ ಮಾಡಿದ ಹಾಗೆ. ನೀವು ಒಂದು ನಿರ್ದಿಷ್ಟ ಮೊತ್ತವನ್ನು ಸಾಲವಾಗಿ ಪಡೆಯುತ್ತೀರಿ, ಅದಕ್ಕೆ ಫಿಕ್ಸ್ಡ್ ಬಡ್ಡಿ ಇರುತ್ತದೆ. ಪ್ರತಿ ತಿಂಗಳೂ ಇಷ್ಟೇ EMI ಕಟ್ಟಬೇಕು ಅಂತ ಮೊದಲೇ ಗೊತ್ತಿರುತ್ತದೆ. ಹಾಗಾಗಿ, ಬಜೆಟ್ ಮಾಡಿಕೊಳ್ಳುವುದು ಸುಲಭ.
  • ಕ್ರೆಡಿಟ್ ಕಾರ್ಡ್ ಲೋನ್ (Credit Card Loan): ಇದು ನಿಮ್ಮ ಕೈಯಲ್ಲಿರುವ ರೆಡಿ ಕ್ಯಾಶ್ ಇದ್ದ ಹಾಗೆ. ನಿಮಗೆ ಕೊಟ್ಟಿರುವ ಲಿಮಿಟ್ ಒಳಗೆ ಎಷ್ಟು ಬೇಕಾದರೂ, ಯಾವಾಗ ಬೇಕಾದರೂ ಖರ್ಚು ಮಾಡಬಹುದು (ಇದನ್ನ ರಿವಾಲ್ವಿಂಗ್ ಕ್ರೆಡಿಟ್ ಅಂತಾರೆ). ಆದರೆ, ಇಲ್ಲಿರೋ ಅತಿ ದೊಡ್ಡ ಟ್ವಿಸ್ಟ್ ಎಂದರೆ, ತಿಂಗಳ ಕೊನೆಯಲ್ಲಿ ಪೂರ್ತಿ ಬಿಲ್ ಕಟ್ಟದಿದ್ದರೆ, ಉಳಿದ ಹಣದ ಮೇಲೆ ವಿಪರೀತ ಬಡ್ಡಿ ಬೀಳುತ್ತದೆ! ಕೆಲವು ಬ್ಯಾಂಕ್‌ಗಳಲ್ಲಿ ಇದು ತಿಂಗಳಿಗೆ99% ರಿಂದ 3.75% ವರೆಗೂ ಇರುತ್ತದೆ. ನೋಡಲು ಸಣ್ಣದು ಅನ್ನಿಸಿದರೂ, ವರ್ಷಕ್ಕೆ ಲೆಕ್ಕ ಹಾಕಿದರೆ ಬರೋಬ್ಬರಿ 55% ವರೆಗೂ ಮುಟ್ಟಬಹುದು!

ಕಣ್ಣಿಗೆ ಕಾಣದ ಶುಲ್ಕಗಳು ಮತ್ತು ರಿಸ್ಕ್!

ಸಾಲ ತಗೊಳ್ಳುವ ಮುನ್ನ ಕೇವಲ ಹಣವನ್ನಷ್ಟೇ ನೋಡಿದರೆ ಸಾಲದು, ಅದರ ಹಿಂದಿರುವ ಗುಪ್ತ ಶುಲ್ಕಗಳನ್ನೂ ಗಮನಿಸಬೇಕು.

  • ಪರ್ಸನಲ್ ಲೋನ್ ಕಥೆ: ಇಲ್ಲಿ ಪ್ರೊಸೆಸಿಂಗ್ ಫೀ (Processing fee) ಅಂತ ಸ್ವಲ್ಪ ಹಣ ಕಟ್ ಮಾಡುತ್ತಾರೆ. ಉದಾಹರಣೆಗೆ, HDFC, ICICI, Axis ನಂತಹ ದೊಡ್ಡ ಬ್ಯಾಂಕ್‌ಗಳು ಸಾಲದ ಮೊತ್ತದ ಮೇಲೆ 1% ರಿಂದ 5% ರಷ್ಟು ಫೀಸ್ ಕೇಳುತ್ತವೆ. ಜೊತೆಗೆ, ಅವಧಿಗೂ ಮುನ್ನವೇ ಸಾಲ ತೀರಿಸುತ್ತೇನೆ ಎಂದರೆ ಅದಕ್ಕೂ ದಂಡ (Pre-payment penalty) ಇರಬಹುದು. ಆದರೆ, ಏನೇ ಆದರೂ ನಿಮ್ಮ EMI ಮಾತ್ರ ಬದಲಾಗುವುದಿಲ್ಲ ಎಂಬ ನೆಮ್ಮದಿ ಇರುತ್ತದೆ.
  • ಕ್ರೆಡಿಟ್ ಕಾರ್ಡ್ ರಿಸ್ಕ್: ಕ್ರೆಡಿಟ್ ಕಾರ್ಡ್‌ನಲ್ಲಿ ನೀವು ಟೈಮ್‌ಗೆ ಸರಿಯಾಗಿ ದುಡ್ಡು ಕಟ್ಟದಿದ್ದರೆ, ಬಡ್ಡಿಯ ಮೇಲೆ ಬಡ್ಡಿ (ಚಕ್ರಬಡ್ಡಿ) ಏರುತ್ತಲೇ ಹೋಗುತ್ತದೆ. ಜೊತೆಗೆ ಲೇಟ್ ಪೇಮೆಂಟ್ ಫೈನ್ ಬೇರೆ! ಸಣ್ಣದಾಗಿ ಶುರುವಾದ ಸಾಲ, ಕೆಲವೇ ತಿಂಗಳುಗಳಲ್ಲಿ ನಿಮ್ಮ ನಿದ್ದೆಗೆಡಿಸುವಷ್ಟು ದೊಡ್ಡದಾಗಬಹುದು. Read this also : PMJJBY ಮತ್ತು PMSBY ಎಂದರೇನು? ₹456 ವಾರ್ಷಿಕ ಪ್ರೀಮಿಯಂನಲ್ಲಿ ₹4 ಲಕ್ಷ ವಿಮೆ ಪಡೆಯುವ ಸರಳ ವಿಧಾನ ಇಲ್ಲಿದೆ..!

Personal Loan vs Credit Card comparison showing EMI, interest rates, and emergency borrowing options

ಫೈನಲ್ ಆಗಿ, ನೀವು ಏನು ಮಾಡಬೇಕು?

ಇತ್ತೀಚೆಗೆ RBI ಬಡ್ಡಿ ದರಗಳ ಬಗ್ಗೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದರಿಂದ, ಪರ್ಸನಲ್ ಲೋನ್‌ಗಳು ಸ್ವಲ್ಪ ಸುಲಭವಾಗಿ ಸಿಗಬಹುದು. ಆದರೆ ಮನೆ ಸಾಲದಂತಹ ಬೇರೆ ಕಮಿಟ್‌ಮೆಂಟ್‌ಗಳಿದ್ದರೆ ಎಚ್ಚರದಿಂದ ಹೆಜ್ಜೆ ಇಡಿ ಎನ್ನುತ್ತಾರೆ ಆರ್ಥಿಕ ತಜ್ಞರು.

ನಿಮ್ಮ ಪರಿಸ್ಥಿತಿಗೆ ತಕ್ಕಂತೆ ಈ ಕೆಳಗಿನ ಸೂತ್ರ ಬಳಸಿ:

  • ದೊಡ್ಡ ಖರ್ಚುಗಳಿಗೆ ಪರ್ಸನಲ್ ಲೋನ್: ವೈದ್ಯಕೀಯ ತುರ್ತು ಪರಿಸ್ಥಿತಿ, ಮದುವೆ ಅಥವಾ ದೊಡ್ಡ ಮೊತ್ತದ ಅಗತ್ಯವಿದ್ದರೆ ಕಣ್ಣು ಮುಚ್ಚಿಕೊಂಡು ಪರ್ಸನಲ್ ಲೋನ್ ಮೊರೆ ಹೋಗಿ. ಕಡಿಮೆ ಬಡ್ಡಿ, ಫಿಕ್ಸ್ಡ್ EMI ಇರುವುದರಿಂದ ಟೆನ್ಷನ್ ಇರಲ್ಲ.
  • ಅಲ್ಪಾವಧಿ ಖರ್ಚಿಗೆ ಮಾತ್ರ ಕ್ರೆಡಿಟ್ ಕಾರ್ಡ್: ನಿಮಗೆ ತಕ್ಷಣಕ್ಕೆ ಸ್ವಲ್ಪ ಹಣ ಬೇಕು, ಆದರೆ ಮುಂದಿನ ಬಿಲ್ ಬರುವಷ್ಟರಲ್ಲಿ ಪೂರ್ತಿ ಸಾಲ ತೀರಿಸುತ್ತೇನೆ ಎಂಬ ಪಕ್ಕಾ ನಂಬಿಕೆ ಇದ್ದರೆ ಮಾತ್ರ ಕ್ರೆಡಿಟ್ ಕಾರ್ಡ್ ಬಳಸಿ.

ಗಮನಿಸಿ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಕೇವಲ ಸಾಮಾನ್ಯ ತಿಳುವಳಿಕೆ ಮತ್ತು ಮಾಹಿತಿಗಾಗಿ ಮಾತ್ರ. ಇದು ಯಾವುದೇ ರೀತಿಯ ವೃತ್ತಿಪರ ಆರ್ಥಿಕ ಸಲಹೆಯಲ್ಲ. ಬಡ್ಡಿ ದರಗಳು, ಶುಲ್ಕಗಳು ಮತ್ತು ನಿಯಮಗಳು ಆಯಾ ಬ್ಯಾಂಕ್, ಹಣಕಾಸು ಸಂಸ್ಥೆಗಳು ಹಾಗೂ ಕಾಲಕಾಲಕ್ಕೆ ಬದಲಾಗುವ ಆರ್‌ಬಿಐ (RBI) ಮಾರ್ಗಸೂಚಿಗಳಿಗೆ ಅನುಗುಣವಾಗಿ ಬದಲಾಗುತ್ತವೆ. ಯಾವುದೇ ಪರ್ಸನಲ್ ಲೋನ್ ಅಥವಾ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುವ ಮುನ್ನ, ದಯವಿಟ್ಟು ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳನ್ನು ಅಥವಾ ನುರಿತ ಆರ್ಥಿಕ ಸಲಹೆಗಾರರನ್ನು ಸಂಪರ್ಕಿಸಿ, ಸಂಪೂರ್ಣ ಮಾಹಿತಿ ತಿಳಿದುಕೊಂಡ ನಂತರವೇ ನಿಮ್ಮ ಸ್ವಂತ ಜವಾಬ್ದಾರಿಯ ಮೇಲೆ ನಿರ್ಧಾರ ತೆಗೆದುಕೊಳ್ಳಿ.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular