Moradabad Murder Case : ಅನೈತಿಕ ಸಂಬಂಧ ಶಂಖೆ, ಪ್ರಿಯಕರನೊಂದಿಗೆ ಸೇರಿ ಪತಿಗೆ 3 ಗಂಟೆಗಳ ಕಾಲ ಎಲೆಕ್ಟ್ರಿಕ್ ಶಾಕ್, ವಿಷ ಕೊಟ್ಟು ಕೊಂದ ಪತ್ನಿ!

ನಂಬಿ ಕೈ ಹಿಡಿದ ಪತ್ನಿಯೇ ಗಂಡನ ಪಾಲಿಗೆ ಯಮಸ್ವರೂಪಿಯಾದರೆ ಹೇಗಿರುತ್ತದೆ ಊಹಿಸಿ? ಕ್ರೈಂ ಥ್ರಿಲ್ಲರ್ ಸಿನಿಮಾಗಳನ್ನು ಮೀರಿಸುವಂತಹ, ಎಂಥವರ ಬೆನ್ನಲ್ಲೂ ಚಳಿ ಹುಟ್ಟಿಸುವ ಭೀಕರ ಘಟನೆಯೊಂದು ಉತ್ತರ ಪ್ರದೇಶದ (Moradabad Murder Case) ಮೊರಾದಾಬಾದ್‌ನಲ್ಲಿ ನಡೆದಿದೆ. ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾದನೆಂಬ ಒಂದೇ ಕಾರಣಕ್ಕೆ, ಪತಿಯನ್ನೇ ಪ್ರಿಯಕರ ಹಾಗೂ ತಂಗಿಯ ಜೊತೆ ಸೇರಿ ಅತ್ಯಂತ ಕ್ರೂರವಾಗಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾಳೆ ಓರ್ವ ಕಟುಕ ಪತ್ನಿ.

Moradabad murder case where wife and lover allegedly tortured and killed husband in Uttar Pradesh

Moradabad Murder Case – ಅನೈತಿಕ ಸಂಬಂಧಕ್ಕೆ ಬಲಿಯಾದ ಅಮಾಯಕ ಜೀವ

ಕೊಲೆಯಾದ ದುರ್ದೈವಿಯನ್ನು ಪವನ್ ಎಂದು ಗುರುತಿಸಲಾಗಿದೆ. ಪವನ್ ಹಾಗೂ ಆಂಚಲ್ (24) ದಂಪತಿಗೆ ಆರು ವರ್ಷಗಳ ಹಿಂದಷ್ಟೇ ವಿವಾಹವಾಗಿತ್ತು. ಈ ದಂಪತಿಗೆ 3 ವರ್ಷದ ಮುದ್ದಾದ ಹೆಣ್ಣು ಮಗಳಿದ್ದಾಳೆ. ಆದರೆ, ಪತ್ನಿ ಆಂಚಲ್‌ಗೆ ತನ್ನ ಸ್ವಂತ ಸೋದರಳಿಯನಾದ ಅಂಕಿತ್ (21) ಎಂಬಾತನೊಂದಿಗೆ ವಿವಾಹೇತರ ಸಂಬಂಧವಿತ್ತು. ಈ ವಿಚಾರ ಪವನ್‌ಗೆ ತಿಳಿದಿದ್ದರಿಂದ ಮನೆಯಲ್ಲಿ ಪ್ರತಿದಿನ ತೀವ್ರ ಕೌಟುಂಬಿಕ ಜಗಳಗಳು ನಡೆಯುತ್ತಿದ್ದವು. ತನ್ನ ದಾರಿಗೆ ಅಡ್ಡಿಯಾಗಿದ್ದ ಪತಿಯನ್ನು ಶಾಶ್ವತವಾಗಿ ಮುಗಿಸಲು ಆಂಚಲ್ ತನ್ನ ಪ್ರಿಯಕರನೊಂದಿಗೆ ಸೇರಿ ಸಂಚು ರೂಪಿಸಿದ್ದಳು.

ಪಕ್ಕಾ ಸ್ಕೆಚ್: 3 ಗಂಟೆಗಳ ಕಾಲ ನರಕಯಾತನೆ!

ಈ ಭೀಕರ ಕೊಲೆಗೆ ಸಹಾಯ ಮಾಡಲು ಆಂಚಲ್ ತಂಗಿ ಶಿಖಾ (18) ನಾಲ್ಕು ದಿನಗಳ ಮೊದಲೇ ಇವರ ಮನೆಗೆ ಬಂದಿದ್ದಳು. ಅಷ್ಟೇ ಅಲ್ಲದೆ, ಶಿಖಾ ತನ್ನ ಗೆಳೆಯ ಅಜಯ್ (19) ಎಂಬಾತನನ್ನು (Moradabad Murder Case) ಕೂಡ ಈ ಅಪರಾಧ ಕೃತ್ಯಕ್ಕೆ ಬಳಸಿಕೊಂಡಿದ್ದಳು.

ಕೊಲೆಯ ದಿನದಂದು ಈ ನಾಲ್ವರ ಗ್ಯಾಂಗ್ ಪವನ್‌ಗೆ ಬಲವಂತವಾಗಿ ವಿಷ ಕುಡಿಸಲು ಯತ್ನಿಸಿದೆ. ಪವನ್ ತೀವ್ರವಾಗಿ ಪ್ರತಿರೋಧ ಒಡ್ಡಿದಾಗ, ಆತನನ್ನು ಹಗ್ಗದಿಂದ ಕಟ್ಟಿಹಾಕಿ ಬರ್ಬರವಾಗಿ ಥಳಿಸಿದ್ದಾರೆ. ಅಷ್ಟಕ್ಕೇ ಸುಮ್ಮನಾಗದ ಪಾಪಿಗಳು, ಸತತ ಮೂರು ಗಂಟೆಗಳ ಕಾಲ ಪವನ್‌ನನ್ನು ಒತ್ತೆಯಾಳಾಗಿ ಇರಿಸಿಕೊಂಡು, ಆತನಿಗೆ ವಿದ್ಯುತ್ ಆಘಾತಗಳನ್ನು (Electric Shocks) ನೀಡಿದ್ದಾರೆ. ಪವನ್ ತೀವ್ರವಾಗಿ ಜರ್ಜರಿತನಾದಾಗ, ಕೊನೆಗೆ ಆತನಿಗೆ ಬಲವಂತವಾಗಿ ವಿಷ ಕುಡಿಸಿ ಕೊಂದೇ ಬಿಟ್ಟಿದ್ದಾರೆ.

Moradabad murder case where wife and lover allegedly tortured and killed husband in Uttar Pradesh

ಆತ್ಮಹತ್ಯೆ ಎಂದು ಬಿಂಬಿಸಲು ಯತ್ನ

ಪವನ್ ಮೃತಪಟ್ಟ ನಂತರ ಕೊಲೆಯನ್ನು ಮುಚ್ಚಿಹಾಕಲು ಆರೋಪಿಗಳು ಹೊಸ ನಾಟಕವಾಡಿದ್ದಾರೆ. ಶವವನ್ನು ಮೆಟ್ಟಿಲುಗಳ ಮೇಲಿಂದ ತಳ್ಳಿ ಹಾಕಿ, ನೆರೆಹೊರೆಯವರ ಬಳಿ ‘ಪವನ್ ತಾನಾಗಿಯೇ (Moradabad Murder Case) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ನಂಬಿಸಲು ಕಥೆ ಕಟ್ಟಿದ್ದಾರೆ. Read this also : ಪ್ರೀತಿಸಿ ಮದುವೆಯಾದ ಮೂರೇ ದಿನಕ್ಕೆ ಭೀಕರ ದಾಳಿ: ಪತ್ನಿಯ ಮೊಬೈಲ್‌ನಿಂದ ಬಂದ ಆ ಒಂದು ಮೆಸೇಜ್ ಮಾಡಿದ್ದೇನು?

ಮುಂಚೆಯೇ ಇತ್ತು ಜೀವ ಬೆದರಿಕೆ

ಪವನ್ ಕುಟುಂಬಸ್ಥರು ನೀಡಿದ ಮಾಹಿತಿಯ ಪ್ರಕಾರ, ಆತನಿಗೆ ಮೊದಲೇ ಜೀವ ಬೆದರಿಕೆ ಇತ್ತು. ಮೂರು ತಿಂಗಳ ಹಿಂದೆಯೇ ಪವನ್ ತನ್ನ ಸಹೋದರಿಗೆ ಕರೆ ಮಾಡಿ “ನನಗೆ ಇವರಿಂದ ಏನಾದರೂ ಅಪಾಯ ಆಗಬಹುದು” ಎಂದು ಆತಂಕ ವ್ಯಕ್ತಪಡಿಸಿದ್ದನು. ಸದ್ಯ ಪ್ರಕರಣವನ್ನು ಭೇದಿಸಿರುವ (Moradabad Murder Case) ಮೊರಾದಾಬಾದ್ ಪೊಲೀಸರು, ಪತ್ನಿ ಆಂಚಲ್, ಪ್ರಿಯಕರ ಅಂಕಿತ್, ತಂಗಿ ಶಿಖಾ ಮತ್ತು ಆಕೆಯ ಗೆಳೆಯ ಅಜಯ್ ನಾಲ್ವರನ್ನೂ ಬಂಧಿಸಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದೆ.

Leave a Comment

Your email address will not be published. Required fields are marked *

Scroll to Top