Papaya Leaves – ಪಪ್ಪಾಯಿ ಅಥವಾ ಪರಂಗಿಯು ಪ್ರಪಂಚದಲ್ಲಿ ವ್ಯಾಪಕವಾಗಿ ಬೆಳೆಯುವ ಬೆಳೆಗಳಲ್ಲಿ ಒಂದಾಗಿದೆ. ಇದರ ಹಣ್ಣುಗಳು, ಬೀಜಗಳು ಮತ್ತು ಎಲೆಗಳನ್ನು ವಿವಿಧ ಪಾಕಶಾಲೆಯ ಮತ್ತು ಆರ್ಯುವೇದ ಔಷಧ ಪದ್ಧತಿಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಪಪ್ಪಾಯಿ ಹಣ್ಣು ಕೇವಲ ರುಚಿಗೆ ಮಾತ್ರವಲ್ಲ ಅದರ ಔಷಧೀಯ ಗುಣಗಳಿಂದಲೂ ಮೊದಲ ಆಯ್ಕೆಯಾಗಿದೆ ಎನ್ನಲಾಗುತ್ತದೆ. ಈ ಪರಂಗಿ ಗಿಡದ ಎಲೆಗಳ ರಸವನ್ನು ಕುಡಿಯುವುದರಿಂದ ಆರೋಗ್ಯಕ್ಕೆ (Papaya Leaves) ಸಾಕಷ್ಟು ಅನುಕೂಲಗಳಿವೆ. ಇದೀಗ ಪರಂಗಿ ಎಲೆಗಳ ರಸದಿಂದ ಏನೆಲ್ಲಾ ಅನುಕೂಲಗಳಿವೆ ಎಂಬ ಮಾಹಿತಿಯನ್ನು ಸಂಗ್ರಹಿಸಿ ಈ ಸುದ್ದಿಯ ಮೂಲಕ ಹಂಚಿಕೊಳ್ಳಲಾಗಿದೆ.

ಪಪ್ಪಾಯಿ ಗಿಡದ ಎಲೆಗಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಎಲೆಯ ರಸವನ್ನು ಸೇವಿಸುವುದರಿಂದ ಯಾವುದೇ ಆರೋಗ್ಯ ಸಮಸ್ಯೆಗಳು ನಮಗೆ (Papaya Leaves) ಬಾಧಿಸುವುದಿಲ್ಲ ಎನ್ನುತ್ತಾರೆ ತಜ್ಞರು. ಹೀಗಾಗಿ ಪಪ್ಪಾಯಿ ಎಲೆಗಳಿಂದಾಗುವ ಆರೋಗ್ಯಕರ ಲಾಭಗಳೇನು ಎಂಬುದನ್ನು ಈ ಸುದ್ದಿಯ ಮೂಲಕ ತಿಳಿಸಲಾಗಿದೆ.
- ಪಪ್ಪಾಯಿ ಎಲೆಗಳ ರಸವನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
- ಜ್ವರದಿಂದ ನಮ್ಮ ಕಾಪಾಡುತ್ತದೆ ಮತ್ತು ಜ್ವರ ಬರದಂತೆ ನೋಡಿಕೊಳ್ಳುತ್ತದೆ.
- ಡೆಂಘೆ ಜ್ವರದಿಂದ ಬಳಲುತ್ತಿರುವವರ ಪಪ್ಪಾಯಿ ಎಲೆಗಳ ರಸವನ್ನು ತಪ್ಪದೇ ಸೇವಿಸಬೇಕು ಎನ್ನುತ್ತಾರೆ ತಜ್ಞರು
- ಗ್ಯಾಸ್, ಉಬ್ಬುವಿಕೆ ಮತ್ತು ಇತರೆ ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿರುವವರು ಪಪ್ಪಾಯಿ ಎಲೆ ಜ್ಯೂಸ್ ಕುಡಿಯುವುದರಿಂದ ಪ್ರಯೋಜನ ಪಡೆಯಬಹುದು.
- ಪಪ್ಪಾಯಿ ಎಲೆಗಳ ಜ್ಯೂಸ್ನಲ್ಲಿ ವಿಟಮಿನ್ ಎ, ಇ, ಸಿ, ಕೆ ಮತ್ತು ಬಿ ಇದೆ.
- ಪಪ್ಪಾಯಿ ಎಲೆಗಳ ರಸ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣಕ್ಕೆ ತರಬಹುದು.
- ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರು ಈ ಪಪ್ಪಾಯಿ ಎಲೆಯ ರಸವನ್ನು ಸೇವಿಸುವುದರಿಂದ ಸಮಸ್ಯೆ ಕಡಿಮೆಯಾಗುತ್ತದೆ.
- ಕೀಲು ನೋವಿನಿಂದ ಬಳಲುತ್ತಿರುವವರು ಪಪ್ಪಾಯಿ ಎಲೆಗಳ ರಸ ಕುಡಿಯುವುದರಿಂದ ನೋವಿನ ಮುಕ್ತರಾಗಬಹುದು.

ಇನ್ನೂ ಈ ಪರಂಗಿ ಎಲೆಯ ರಸ ಸೇವನೆಯಿಂದ ಕೆಲವೊಂದು ಅಡ್ಡಪರಿಣಾಮಗಳೂ ಸಹ ಇದೆಯೆಂದು ಕೆಲ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಾಮಾನ್ಯವಾಗಿ ಕೆಲವೊಂದು ಆಹಾರ ಪದಾರ್ಥಗಳು ಕೆಲವರಿಗೆ ಆಗಿಬರೊಲ್ಲ. ಅದೇ ಮಾದರಿಯಲ್ಲಿ ಈ ರಸ ಸೇವನೆ ಮಾಡುವವರಿಗೆ ಅಲರ್ಜಿ ಸಮಸ್ಯೆ ಹೊಂದಿದ್ದರೇ, ಯಾವುದೇ ಕಾರಣಕ್ಕೂ ಅದನ್ನು ಸೇವಿಸಬೇಡಿ. ಜೊತೆಗೆ ಗರ್ಭಿಣಿಯಾಗಿದ್ದರೇ ಅಥವಾ ಸ್ತನ್ಯಪಾನ ಮಾಡುತ್ತಿದ್ದರೇ ಅಂತಹವರು ವೈದ್ಯರನ್ನು ಸಂಪರ್ಕ ಮಾಡಿ ಅವರ ಸಲಹೆ ಮೇರೆಗೆ ಪಪ್ಪಾಯಿ ಎಲೆ ರಸ ಸೇವಿಸುವುದು ಸೂಕ್ತ. ಪರಂಗಿ ಎಲೆಯ ರಸವನ್ನು ಮಿತವಾಗಿ ಸೇವಿಸಿದಾಗ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಇದರಿಂದ ಚರ್ಮದ ದದ್ದುಗಳು, ಹೊಟ್ಟೆ ಕಿರಿಕಿರಿ, ವಾಂತಿ, ಉಸಿರಾಟದ ತೊಂದರೆ, ಮೂಗು ಕಟ್ಟುವುದು ಮೊದಲಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಈ ರಸವನ್ನು ಮಿತವಾಗಿ ಸೇವನೆ ಮಾಡಬೇಕು.
* ವಿಶೇಷ ಸೂಚನೆ: ಈ ಎಲ್ಲಾ ಮಾಹಿತಿ ಸಂಗ್ರಹಿಸಿದ ಮಾಹಿತಿಯಾಗಿದ್ದು, ಆರೋಗ್ಯ ಸಮಸ್ಯೆಗಳಿಗೆ ವೈದ್ಯರನ್ನು ಸಂಪರ್ಕ ಮಾಡಿ ಅವರ ಸಲಹೆ ಸೂಚನೆಗಳನ್ನು ಪಡೆಯುವುದು ಸೂಕ್ತ