OTT Apps – ಕೋವಿಡ್ ನಂತರ ಡಿಜಿಟಲ್ ಮನರಂಜನೆಯ ಪ್ರವಾಹವೇ ಹರಿದುಬಂದಿದೆ. ಅಮೆಜಾನ್, ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್, ಸೋನಿ ಲಿವ್, ಜೀ5, ವೂಟ್, ಆಹಾ, ಆಪಲ್ ಟಿವಿ – ಹೀಗೆ ಹಲವಾರು ಒಟಿಟಿ ವೇದಿಕೆಗಳು ಜನರ ಅಚ್ಚುಮೆಚ್ಚಿನ ಮನರಂಜನಾ ತಾಣಗಳಾಗಿವೆ. ಇವುಗಳಲ್ಲಿ ಕೆಲವು ಆರೋಗ್ಯಕರ ಮನರಂಜನೆ ನೀಡಿದರೆ, ಇನ್ನು ಕೆಲವು ಅಶ್ಲೀಲ ಮತ್ತು ಅಸಭ್ಯ ವಿಷಯಗಳನ್ನು ಪ್ರಸಾರ ಮಾಡುತ್ತಾ ಹಣ ಗಳಿಸುತ್ತಿವೆ. ಇಂತಹ ಒಟಿಟಿ ಗಳಿಗೆ ಕೇಂದ್ರ ಸರ್ಕಾರ ಇದೀಗ ಬಿಗ್ ಶಾಕ್ ನೀಡಿದೆ.
OTT Apps – ಅಶ್ಲೀಲತೆಯ ಹಾದಿ ಹಿಡಿದಿದ್ದ ವೇದಿಕೆಗಳಿಗೆ ಬ್ರೇಕ್!
ಭಾರತದಲ್ಲಿ ಅಶ್ಲೀಲ ವಿಷಯಗಳ ಪ್ರಸಾರಕ್ಕೆ ಕುಖ್ಯಾತಿ ಪಡೆದಿದ್ದ ಉಲ್ಲು (Ullu) ಮತ್ತು ಆಲ್ಟ್ ಬಾಲಾಜಿ (ALT Balaji) ಸೇರಿದಂತೆ ಒಟ್ಟು 25 ಒಟಿಟಿವೇದಿಕೆಗಳು ಹಾಗೂ ಅಪ್ಲಿಕೇಶನ್‌ಗಳನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿಷೇಧಿಸಿದೆ. ಅಚ್ಚರಿ ಎಂದರೆ, ಉಲ್ಲು ಮತ್ತು ಆಲ್ಟ್ ಬಾಲಾಜಿ ಈ ಹಿಂದೆ ಭಾರತದ ಟಾಪ್ 10 ಒಟಿಟಿ ಗಳ ಪಟ್ಟಿಯಲ್ಲಿದ್ದವು! ಸರ್ಕಾರದ ಈ ಕ್ರಮದ ಬಗ್ಗೆ ಇನ್ನಷ್ಟು ವಿವರಗಳು ಇಲ್ಲಿವೆ.
OTT Apps – ಭಾರತದ ಪ್ರಸಾರ ನೀತಿ ಉಲ್ಲಂಘನೆ: ನಿಷೇಧಕ್ಕೆ ಕಾರಣ!
ಈ OTT ಗಳು ಭಾರತದ ಪ್ರಸಾರ ನೀತಿಗಳನ್ನು (Broadcasting Laws) ಉಲ್ಲಂಘಿಸಿವೆ ಮತ್ತು ಅಶ್ಲೀಲ ವಿಷಯಗಳನ್ನು ಪ್ರಚಾರ ಮಾಡುತ್ತಿವೆ ಎಂಬ ಕಾರಣಕ್ಕಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ಕಠಿಣ ನಿರ್ಧಾರ ಕೈಗೊಂಡಿದೆ. ಸದ್ಯಕ್ಕೆ ಈ ನಿಷೇಧ ಭಾರತಕ್ಕೆ ಮಾತ್ರ ಸೀಮಿತವಾಗಿದ್ದು, ದೇಶದ ಹೊರಗೆ ಈ ಒಟಿಟಿ ಗಳು ಕಾರ್ಯನಿರ್ವಹಿಸಲಿವೆ.
OTT Apps – ಏಕ್ತಾ ಕಪೂರ್ ರ ಆಲ್ಟ್ ಬಾಲಾಜಿಗೂ ಕುತ್ತು!
ಕಿರುತೆರೆ ಮತ್ತು ಚಲನಚಿತ್ರ ಲೋಕದ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ (Ekta Kapoor) ಒಡೆತನದ ಆಲ್ಟ್ ಬಾಲಾಜಿ ಕೂಡ ನಿಷೇಧಿತ ಪಟ್ಟಿಯಲ್ಲಿದೆ. ಈ ಹಿಂದೆ ಕೂಡ ಆಲ್ಟ್ ಬಾಲಾಜಿ ಕಂಟೆಂಟ್‌ಗಳ ಬಗ್ಗೆ ಹಲವಾರು ದೂರುಗಳು ದಾಖಲಾಗಿದ್ದವು. ಆದರೆ, ಈವರೆಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈಗ ಏಕಾಏಕಿ ನಿಷೇಧ ಹೇರಿರುವುದು ಹಲವರನ್ನು ಅಚ್ಚರಿಗೊಳಿಸಿದೆ. ಸರ್ಕಾರದ ಈ ಆದೇಶದ ವಿರುದ್ಧ ಏಕ್ತಾ ಕಪೂರ್ ಮತ್ತು ಇತರ ಒಟಿಟಿ ಮಾಲೀಕರು ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇದೆ.
Read this also : ಆಂಧ್ರದಲ್ಲಿ ನಡೆದ ಘಟನೆ, ಆಮ್ಲೆಟ್ ವಿಚಾರಕ್ಕೆ ನಡೆದ ಗಲಾಟೆ, ಬಳಿಕ ಆಗಿದ್ದೇನು ಗೊತ್ತಾ?
ಯಾವೆಲ್ಲಾ OTT ಗಳಿಗೆ ನಿಷೇಧ? ಇಲ್ಲಿದೆ ಪಟ್ಟಿ!
ಅಶ್ಲೀಲ ವಿಷಯಗಳ ಪ್ರಸಾರಕ್ಕೆ ಜನಪ್ರಿಯವಾಗಿದ್ದ ಉಲ್ಲು, ಆಲ್ಟ್ ಬಾಲಾಜಿ, ಬಿಗ್ ಶಾಟ್ಸ್, ಜಲ್ವಾ ಆಪ್, ದೇಸಿ ಫ್ಲಿಕ್ಸ್, ಹಾಟ್ ಎಕ್ಸ್ ವಿಐಪಿ, ಅಡ್ಡಾ ಟಿವಿ, ನವರಸ ಲೈಟ್, ಗುಲಾಬ್ ಆಪ್, ಮೂಡ್ ಎಕ್ಸ್, ಹಲ್ಚಲ್ ಆಪ್, ಮೋಜ್ಫ್ಲಿಕ್ಸ್, ಬೂಮೆಕ್ಸ್, ಶೋ ಎಕ್ಸ್, ಬುಲ್ ಆಪ್, ಕಂಗನಾ ಆಪ್ ಸೇರಿದಂತೆ ಒಟ್ಟು 25 ಅಪ್ಲಿಕೇಶನ್‌ಗಳು ಮತ್ತು ಒಟಿಟಿ ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.