Nostradamus : 2026ರಲ್ಲಿ ಜಗತ್ತಿಗೆ ಗಂಡಾಂತರ? ನಡುಕ ಹುಟ್ಟಿಸುತ್ತಿವೆ ನೋಸ್ಟ್ರಾಡಮಸ್ ನುಡಿದ ಈ ಭಯಾನಕ ಭವಿಷ್ಯವಾಣಿಗಳು!

2025ರ ವರ್ಷ ಮುಗಿಯುತ್ತಾ ಬಂದಿದೆ, ಇನ್ನೇನು 2026ರ ಹೊಸ ವರ್ಷಕ್ಕೆ ನಾವೆಲ್ಲಾ ಕಾಲಿಡುತ್ತಿದ್ದೇವೆ. ಹೊಸ ವರ್ಷ ಅಂದಮೇಲೆ ಎಲ್ಲರಿಗೂ ಒಂದು ಕುತೂಹಲ ಇದ್ದೇ ಇರುತ್ತೆ – “ಮುಂದಿನ ವರ್ಷ ಹೇಗಿರುತ್ತೆ? ನಮಗೆ ಒಳ್ಳೆದಾಗುತ್ತಾ?” ಅಂತ. ಆದರೆ, ಸುಮಾರು 500 ವರ್ಷಗಳ ಹಿಂದೆಯೇ ಫ್ರೆಂಚ್ ಭವಿಷ್ಯವಾಣಿ ನುಡಿದಿದ್ದ ಖ್ಯಾತ ದಾರ್ಶನಿಕ ನೋಸ್ಟ್ರಾಡಾಮಸ್ (Nostradamus), 2026ರ ಬಗ್ಗೆ ಹೇಳಿರುವ ಕೆಲವು ಮಾತುಗಳು ಈಗ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸುತ್ತಿವೆ.

Nostradamus predictions for 2026 showing global crisis, war fears, economic collapse, climate disasters, and rise of artificial intelligence

Nostradamus 2026 – ಅಷ್ಟಕ್ಕೂ 2026ರಲ್ಲಿ ಏನಾಗುತ್ತೆ?

  1. ಮೂರನೇ ಮಹಾಯುದ್ಧದ ಭೀತಿ!

ನೋಸ್ಟ್ರಾಡಾಮಸ್ ಭವಿಷ್ಯದ ಪ್ರಕಾರ, 2026ರಲ್ಲಿ ಮೂರನೇ ಮಹಾಯುದ್ಧದ (World War 3) ಮುನ್ಸೂಚನೆ ಕಂಡುಬರಲಿದೆಯಂತೆ. ಇದು ಅತ್ಯಂತ ವಿನಾಶಕಾರಿ ಯುದ್ಧವಾಗಲಿದ್ದು, ಧರ್ಮ, ಜಾತಿ ಮತ್ತು ರಾಷ್ಟ್ರೀಯತೆಯ ಹೆಸರಿನಲ್ಲಿ ಜನರು ಒಬ್ಬರನ್ನೊಬ್ಬರು ಕೊಲ್ಲುವ ಪರಿಸ್ಥಿತಿ ಬರಬಹುದು ಎಂದು ಅವರು ಎಚ್ಚರಿಸಿದ್ದಾರೆ. ಅದರಲ್ಲೂ ಪೂರ್ವ ದೇಶಗಳಲ್ಲಿ (Eastern Countries) ಈ ಪರಿಸ್ಥಿತಿ ಈಗಲೇ ಗಂಭೀರವಾಗುತ್ತಿರುವುದು ಆತಂಕದ ವಿಷಯ.

  1. ಸಮುದ್ರದಲ್ಲಿ ಸಂಭವಿಸಲಿದೆ ದೊಡ್ಡ ದುರಂತ

ಸಮುದ್ರದ ಮೇಲೆ ನಡೆಯುವ ಒಂದು ದೊಡ್ಡ ಘಟನೆ ಇಡೀ ವಿಶ್ವದ ರಾಜಕೀಯವನ್ನೇ ಬುಡಮೇಲು ಮಾಡಲಿದೆ. ಯಾವುದೋ ಒಂದು ದೇಶದ ಅಚಾತುರ್ಯದ ನಿರ್ಧಾರದಿಂದ ಸಮುದ್ರದಲ್ಲಿ ಉದ್ವಿಗ್ನತೆ ಹೆಚ್ಚಾಗಲಿದ್ದು, ಒಂದು ದೊಡ್ಡ ಹಡಗು ಮುಳುಗುವ ಮೂಲಕ ದೊಡ್ಡ ಮಟ್ಟದ ಯುದ್ಧಕ್ಕೆ ಅಡಿಪಾಯ ಬೀಳಬಹುದು ಎಂದು (Nostradamus) ಭವಿಷ್ಯ ನುಡಿಯಲಾಗಿದೆ.

  1. ಆರ್ಥಿಕ ಬಿಕ್ಕಟ್ಟು ಮತ್ತು ಬೆಲೆ ಏರಿಕೆ

2026ರಲ್ಲಿ ಜಗತ್ತಿನ ಪ್ರಬಲ ರಾಷ್ಟ್ರಗಳಾದ ಅಮೆರಿಕ ಮತ್ತು ಯುಕೆ ಕೂಡ ಆರ್ಥಿಕ ಮುಗ್ಗಟ್ಟನ್ನು ಎದುರಿಸಲಿವೆಯಂತೆ. ಹಣದುಬ್ಬರ (Inflation) ವಿಪರೀತವಾಗಿ ಹೆಚ್ಚಾಗಲಿದ್ದು, ಗೋಧಿ ಮತ್ತು ಧಾನ್ಯಗಳ ಬೆಲೆ ಗಗನಕ್ಕೇರಲಿದೆ. ಇದು (Nostradamus) ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಸಾಮಾನ್ಯ ಜನರ ಬದುಕಿನ ಮೇಲೆ ದೊಡ್ಡ ಪರಿಣಾಮ ಬೀರಲಿದೆ. Read this also : ಬಾಬಾ ವಂಗಾ (Baba Vanga) 2026ರ ಭವಿಷ್ಯವಾಣಿ: 2026ರಲ್ಲಿ ಜಗತ್ತು ತಲೆಕೆಳಗಾಗುತ್ತಾ? ಮೈ ಜುಂ ಎನಿಸುವ ಆ 7 ಭವಿಷ್ಯಗಳಿವು!

  1. ಪ್ರಕೃತಿ ವಿಕೋಪ ಮತ್ತು AI ಅಬ್ಬರ

ನೋಸ್ಟ್ರಾಡಾಮಸ್ ಪ್ರಕಾರ 2026ರಲ್ಲಿ ಹವಾಮಾನ ವೈಪರೀತ್ಯ ತೀವ್ರವಾಗಲಿದೆ. ಅತಿಯಾದ ಬಿಸಿಲಿನಿಂದ ಹಲವು ಪ್ರದೇಶಗಳು ಮರುಭೂಮಿಯಾಗಿ ಬದಲಾಗಬಹುದು. ನಂತರ ವಿಪರೀತ ಮಳೆ ಮತ್ತು ಪ್ರವಾಹ ಕೂಡ ಜನರನ್ನು (Nostradamus) ಕಾಡಲಿದೆ. ಇದೇ ಸಮಯದಲ್ಲಿ ಕೃತಕ ಬುದ್ಧಿಮತ್ತೆ (Artificial Intelligence) ಕೇವಲ ಕೆಲಸಕ್ಕೆ ಮಾತ್ರ ಸೀಮಿತವಾಗದೆ, ಸರ್ಕಾರಿ ಮಟ್ಟದ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯಾಗಿ ಬೆಳೆಯಲಿದೆ.

Nostradamus predictions for 2026 showing global crisis, war fears, economic collapse, climate disasters, and rise of artificial intelligence

ಕೊನೆಯ ಮಾತು: ನೋಸ್ಟ್ರಾಡಾಮಸ್ (Nostradamus) ಈ ಹಿಂದೆ ನುಡಿದಿದ್ದ ಹಿಟ್ಲರ್‌ನ ಉದಯ, 9/11 ದಾಳಿಯಂತಹ ಭವಿಷ್ಯಗಳು ನಿಜವಾಗಿವೆ ಎನ್ನಲಾಗುತ್ತದೆ. ಹಾಗಾಗಿ 2026ರ ಬಗ್ಗೆ ಅವರು ನೀಡಿರುವ ಈ ಎಚ್ಚರಿಕೆಗಳನ್ನು ನಿರ್ಲಕ್ಷಿಸುವಂತಿಲ್ಲ. ಆದರೂ, ಇವೆಲ್ಲವೂ ಕೇವಲ ಅಂದಾಜುಗಳು ಎಂಬುದು ನೆನಪಿರಲಿ.

Leave a Comment

Your email address will not be published. Required fields are marked *

Scroll to Top