NHPC – National Hydroelectric Power Corporation (ನ್ಯಾಷನಲ್ ಹೈಡ್ರೋಎಲೆಕ್ಟ್ರಿಕ್ ಪವರ್ ಕಾರ್ಪೋರೇಷನ್) ನಲ್ಲಿ ಖಾಲಿಯಿರುವ 118 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. NHPC ಯಲ್ಲಿ ಖಾಲಿಯಿರುವ ಟ್ರೈನಿ ಆಫೀಸರ್, ಸೀನಿಯರ್ ಮೆಡಿಕಲ್ ಆಫೀಸರ್ ಸೇರಿದಂತೆ ಒಟ್ಟು 118 ಹುದ್ದೆಗಳು ಖಾಲಿಯಿದ್ದು, ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಪದವಿ, ಸ್ನಾತಕೋತ್ತರ ಪದವಿ ಹೊಂದಿದ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಡಿ.30 ಕೊನೆಯ ದಿನಾಂಕವಾಗಿದೆ. ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.
NHPC – ಹುದ್ದೆಗಳ ವಿವರ : 118 ಹುದ್ದೆಗಳು:
ಹುದ್ದೆ ಹೆಸರು | ಹುದ್ದೆಗಳ ಸಂಖ್ಯೆ |
ಟ್ರೈನಿ ಆಫೀಸರ್ – ಮಾನವ ಸಂಪನ್ಮೂಲ | 71 |
ಟ್ರೈನಿ ಆಫೀಸರ್ – ಸಾರ್ವಜನಿಕ ಸಂಪರ್ಕ | 10 |
ಟ್ರೈನಿ ಆಫೀಸರ್ – ಕಾನೂನು | 12 |
ಸೀನಿಯರ್ ಮೆಡಿಕಲ್ ಆಫೀಸರ್ | 25 |
NHPC – ವಿದ್ಯಾರ್ಹತೆ ವಿವರ:
- ಟ್ರೈನಿ ಆಫೀಸರ್ – ಮಾನವ ಸಂಪನ್ಮೂಲ: ಪಿಜಿ ಡಿಗ್ರಿ, ಪಿಜಿ ಡಿಪ್ಲೊಮವನ್ನು ಹುದ್ದೆಗೆ ಸಂಬಂಧಿಸಿದ ವಿಷಯಗಳಲ್ಲಿ ಪಾಸ್ ಮಾಡಿರಬೇಕು.
- ಟ್ರೈನಿ ಆಫೀಸರ್ – ಸಾರ್ವಜನಿಕ ಸಂಪರ್ಕ: ಸಂವಹನ, ಪತ್ರಿಕೋದ್ಯಮ, ಸಾರ್ವಜನಿಕ ಸಂಪರ್ಕ ವಿಷಯಗಳಲ್ಲಿ ಪಿಜಿ ಡಿಗ್ರಿ, ಡಿಪ್ಲೊಮ ಪಾಸ್ ಮಾಡಿರಬೇಕು.
- ಟ್ರೈನಿ ಆಫೀಸರ್ – ಕಾನೂನು : ಕಾನೂನು ಪದವಿ, ಸ್ನಾತಕೋತ್ತರ ಪದವಿ ಪಾಸ್.
- ಸೀನಿಯರ್ ಮೆಡಿಕಲ್ ಆಫೀಸರ್ : ಎಂಬಿಬಿಎಸ್ ಪಾಸ್ ಮಾಡಿರಬೇಕು.
ವಯೋಮಿತಿ ವಿವರ: ಎಲ್ಲ ವಿಭಾಗದ ಟ್ರೈನಿ ಆಫೀಸರ್ ಹುದ್ದೆಗಳಿಗೆ ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು. ಸೀನಿಯರ್ ಮೆಡಿಕಲ್ ಆಫೀಸರ್ ಹುದ್ದೆಗಳಿಗೆ 35 ವರ್ಷ ವಯಸ್ಸು ಮೀರಿರಬಾರದು. ವಯಸ್ಸಿನ ಸಡಿಲಿಕೆ ನಿಯಮಗಳು ವರ್ಗಾವಾರು ಮೀಸಲಿವೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಬಿಡಿ (ಸಾಮಾನ್ಯ) ಅಭ್ಯರ್ಥಿಗಳಿಗೆ 10 ವರ್ಷ, ಪಿಡಬ್ಲ್ಯುಬಿಡಿ (ಒಬಿಸಿ-ಎನ್‌ಸಿಎಲ್) ಅಭ್ಯರ್ಥಿಗಳಿಗೆ 13 ವರ್ಷ ಮತ್ತು ಪಿಡಬ್ಲ್ಯುಬಿಡಿ (ಎಸ್‌ಸಿ/ಎಸ್‌ಟಿ) ಅಭ್ಯರ್ಥಿಗಳಿಗೆ 15 ವರ್ಷಗಳ ರಿಯಾಯಿತಿ ಇದೆ.
ಅರ್ಜಿ ಶುಲ್ಕ : ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಬಿಡಿ/ಮಹಿಳೆ/ಮಾಜಿ ಯೋಧರು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಯುಆರ್/ಇಡಬ್ಲ್ಯುಎಸ್/ಒಬಿಸಿ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 708 ರೂ. ಪಾವತಿಸಬೇಕು. ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು.
ವೇತನ ವಿವರ: ಆಯ್ಕೆಯಾದ ಟ್ರೈನಿ ಆಫೀಸರ್ ಹುದ್ದೆಗಳಿಗೆ 50,000 ರೂ.-1,60,000 ರೂ. ಮತ್ತು ಸೀನಿಯರ್ ಮೆಡಿಕಲ್ ಆಫೀಸರ್ ಹುದ್ದೆಗಳಿಗೆ 60,000 ರೂ. – 1,80,000 ರೂ. ಮಾಸಿಕ ವೇತನ ದೊರೆಯಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
NHPC – ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ : Click Here
ಪ್ರಮುಖ ದಿನಾಂಕಗಳು:
- ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ: 09-12-2024
- ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ: 30-12-2024 ರ ಸಂಜೆ 05 ಗಂಟೆ.
Follow these steps to apply for NHPC Recruitment 2024:
- Visit NHPC’s Website: Go to www.nhpcindia.com.
- Register Online: Click on the “Career with Us” section and complete the online application form.
- Upload Documents: Attach scanned copies of educational certificates, ID proof, and recent photographs.
- Pay Application Fee: Make the payment through the prescribed online mode (if applicable).
- Submit the Application: Complete and submit the application form before 5:00 PM on December 30, 2024.
Important Links :
- Official Website: www.nhpcindia.com
- Apply Online: Click Here
- Download Notification PDF: Download PDF