ಇಂದಿನ ಕಾಲದಲ್ಲಿ ಮಕ್ಕಳಿಲ್ಲವೆಂದು ಅನೇಕರು ಪರಿತಪಿಸುತ್ತಿರುತ್ತಾರೆ. ಅದರಲ್ಲಿ ಕೆಲವರು ಮಕ್ಕಳಾಗಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಘಟನೆಗಳೂ ಸಹ ನಡೆದಿದೆ. ಆದರೆ ಇಲ್ಲೋಬ್ಬಳು ಪಾಪಿ ತಾಯಿ ಮೃತ ನವಜಾತ ಗಂಡು ಶಿಶುವನ್ನು ಚರಂಡಿಗೆ ಎಸೆದು ಪರಾರಿಯಾಗಿದ್ದಾಳೆ. ಈ ಹೃದಯವಿದ್ರಾವಕ ಘಟನೆ ವಿಜಯಪುರ ಜಿಲ್ಲೆಉ ಮುದ್ದೇಬಿಹಾಳ ತಾಲೂಕಿನ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರತಿಯೊಬ್ಬ ಮಹಿಳೆಗೂ ತಾಯಿಯಾಗುವುದು ಒಂದು ದೊಡ್ಡ ಅದೃಷ್ಟ ಹಾಗೂ ಸಾರ್ಥಕತೆ ಎಂದೇ ಕರೆಯಲಾಗುತ್ತದೆ. ಆದರೆ ಅನೇಕ ಮಹಿಳೆಯರು ವಿವಿಧ ಕಾರಣಗಳಿಂದ ಮಕ್ಕಳನ್ನು ಪಡೆಯಲು ವಂಚಿತರಾಗಿರುತ್ತಾರೆ. ಅದಕ್ಕಾಗಿ ಕೆಲವರು ಲಕ್ಷಾಂತರ ರೂಪಾಯಿಗಳನ್ನು ಸಹ ವ್ಯಯಿಸುತ್ತಾರೆ. ಕೆಲವರು ಪೂಜೆ, ಪುನಸ್ಕಾರಗಳೆಂದು ದೇವರ ಮೊರೆ ಸಹ ಹೋಗುತ್ತಾರೆ. ಆದರೂ ಸಹ ಕೆಲವರಿಗೆ ಮಕ್ಕಳಾಗುವುದಿಲ್ಲ. ಇದೀಗ ಪಾಪಿ ತಾಯಿಯೊಬ್ಬಳು ನವಜಾತ ಮೃತ ಗಂಡು ಮಗುವನ್ನು ಚರಂಡಿ ಎಸೆದ ಹೃದಯವಿದ್ರಾವಕ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅಲಕೊಪ್ಪರ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಇನ್ನೂ ಪಾಪಿ ತಾಯಿ ಮೃತಪಟ್ಟ ಗಂಡು ನವಜಾತ ಶಿಶುವನ್ನು ಪ್ಲಾಸ್ಟೀಕ್ ಪೇಪರ್ ನಲ್ಲಿ ಸುತ್ತಿ ಚರಂಡಿಗೆ ಎಸೆದು ಅಲ್ಲಿಂದ ಜಾಗ ಖಾಲಿ ಮಾಡಿದ್ದಾಳೆ. ಈ ವೇಳೆ ಅಲ್ಲಿದ್ದ ಸ್ಥಳಿಯರು ಓಡಿ ಹೋಗಿ ಚರಂಡಿಯಿಂದ ಮಗುವನ್ನು ಮೇಲಕ್ಕೆತ್ತಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಾರಿಯಾದ ತಾಯಿಗಾಗಿ ಹುಡುಕಾಟ ಶುರು ಮಾಡಿದ್ದಾರೆ.