New Year – ಬಾಬಾ ವಂಗಾ ಹಾಗೂ ನಾಸ್ಟ್ರಡಾಮಸ್ ರವರು 2025 ರಲ್ಲಿ ನಡೆಯಬಹುದಾದಂತಹ ಪ್ರಮುಖ ಘಟನೆಗಳ ಭವಿಷ್ಯ ನುಡಿದಿದ್ದು, ಅವರ ಭವಿಷ್ಯ ಜಗತ್ತನ್ನು ಬೆಚ್ಚಿಬೀಳುಸುವಂತಿದೆ. ಇಲ್ಲಿ ಮತ್ತೊಂದು ವಿಶೇಷ ಇದೆ, ಅದು ಏನೆಂದರೇ ಈ ಇಬ್ಬರೂ ಭವಿಷ್ಯಕಾರರು ನುಡಿದ ಭವಿಷ್ಯ ಒಂದೇ ಮಾದರಿಯಲ್ಲಿದೆ. ಈ ಇಬ್ಬರೂ ಭವಿಷ್ಯಕಾರರು ನೀಡಿರುವ ಭವಿಷ್ಯವಾಣಿಯ ಪ್ರಕಾರ ಹೊಸ ವರ್ಷ ಅಂದರೇ 2025ನೇ ವರ್ಷದಲ್ಲಿ ದೊಡ್ಡ ಮಟ್ಟದ ಆಪತ್ತುಗಳು ಬರಲಿದೆಯಾ ಎಂಬ ಆತಂಕ ಸೃಷ್ಟಿಸಿದೆ ಎನ್ನಲಾಗಿದೆ.

ಫ್ರೆಂಚ್ ಭವಿಷ್ಯಕಾರ ನಾಸ್ಟ್ರಡಾಮಸ್ 16ನೇ ಶತಮಾನದ ಭವಿಷ್ಯಕಾರ. ನಾಸ್ಟ್ರಡಾಮಸ್ ರವರು 2025ನೇ ವರ್ಷದಲ್ಲಿ ನಡೆಯುಬಹುದಾದ ಪ್ರಮುಖ ಘಟನೆಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಈ ಪೈಕಿ ಹವಾಮಾನ ಬದಲಾವಣೆಯಿಂದಾಗುವ ಪ್ರಾಕೃತಿಕ ವಿಕೋಪ, ಯುದ್ದ ಸಂಘರ್ಷ, ಆರ್ಥಿಕ ಸಂಕಷ್ಟ, ಹಣದುಬ್ಬರ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳಲಿವೆಯಂತೆ. ಜಗತ್ತಿನ ಹಲವು ಭಾಗಗಳಲ್ಲಿ ಗೋಧಿ ಬೆಲೆ ಹೆಚ್ಚಾಗಲಿದೆಯಂತೆ. ಕಿತ್ತಾಟ, ಬಡಿದಾಟಗಳು ನಡೆಯಲಿದ್ದು, ಜೀವನ ನಿರ್ವಹಣೆ ಕಷ್ಟಕರವಾಗಲಿದೆಯಂತೆ. ದುಬಾರಿ ಬೆಲೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಗಳೂ ಸಹ ಎಲ್ಲರ ಮೇಲೆ ಪರಿಣಾಮ ಬೀರಲಿದೆ ಎಂದು ಭವಿಷ್ಯಕಾರ ನಾಸ್ಟ್ರಡಾಮಸ್ ಭವಿಷ್ಯ ನುಡಿದಿದ್ದಾರೆ.
ಇನ್ನೂ 2025ರಲ್ಲಿ ಹವಾಮಾನ ಬದಲಾವಣೆಯ ಕಾರಣದಿಂದ ಮತ್ತಷ್ಟು ಸಮಸ್ಯೆಗಳು ಉದ್ಬವಿಸಬಹುದಂತೆ. ಪ್ರವಾಹ, ದೈತ್ಯ ಅಲೆಗಳಿಂದ ಕಡಲ ತೀರದಲ್ಲಿನ ನಾಶ, ಅತಿಯಾದ ಮಳೆ, ಅತಿಯಾದ ಬಿಸಿಲುಗಳಂತಹ ಹವಾಮಾನ ವೈಪರೀತ್ಯಗಳು ಸಂಭವಿಸಿ ಮನುಷ್ಯ ಹಾಗೂ ಪ್ರಾಣಿ ಸಂಕುಲದ ಮೇಲೆ ಗಂಭೀರ ಪರಿಣಾಮ ಬೀರಲಿದೆಯಂತೆ. ಅಮೇರಿಕಾ ಹಾಗೂ ಚೀನಾ ನಡುವೆ ದೊಡ್ಡಣ್ಣನ ಸ್ಥಾನಕ್ಕಾಗಿ ಹೊಡೆದಾಟ ನಡೆಯಲಿದೆ. ಹಲವು ದೇಶಗಳ ನಡುವೆ ರಾಜತಾಂತ್ರಿಕ ಸಮಸ್ಯೆಗಳು, ಸಂಘರ್ಷದ ವಾತಾವರಣ ನಿರ್ಮಾಣವಾಗಲಿದೆ ಎಂದು ನಾಸ್ಟ್ರಡಾಮಸ್ 2025 ಭವಿಷ್ಯ ನುಡಿದಿದ್ದಾರೆ.

ಇನ್ನೂ ಬಲ್ಗೇರಿಯಾದ ಬಾಬಾ ವಂಗಾ 1996 ರಲ್ಲೇ ನಿಧನರಾಗಿದ್ದಾರೆ. ಆದರೆ ಬಾಬಾ ವಂಗಾ ರವರು ನುಡಿದಿರುವಂತಹ ಭವಿಷ್ಯ ಹಾಗೂ ನಿಖರತೆ ಇಡೀ ವಿಶ್ವವನ್ನೇ ಅಚ್ಚರಿಪಡಿಸಿದೆ ಎನ್ನಲಾಗಿದೆ. ಯುರೋಪ್ ನಲ್ಲಿ ಆಂತರಿಕೆ ಯುದ್ದ ಸಂಘರ್ಷಗಳು ಹೆಚ್ಚಾಗಲಿದ್ದು, ಇದು ಜನಸಂಖ್ಯೆ ಮೇಲೂ ಪರಿಣಾಮ ಬೀರಲಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವು ಆವಿಷ್ಕಾರಗಳು ಈ ಜಗತ್ತಿನ ದಿಕ್ಕನ್ನು ಬದಲಿಸಿದೆ. ಮಾನವೀಯತೆಗಳು ಅಂತ್ಯಗೊಳ್ಳಲಿದೆ. ಪ್ರಾಕೃತಿಕ ವಿಕೋಪಗಳಾದ ಭೂಕಂಪ, ಜ್ವಾಲಾಮುಖಿಗಳಿಂದ ನಾಶ ಸಂಭವಿಸಲಿದೆ. ಜಗತ್ತಿನ ಅಂತ್ಯದ ಆರಂಭವಾಗಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.