ವಿಮಾನ ನಿಲ್ದಾಣದಲ್ಲಿ ಅಭಿಮಾನಿಯನ್ನು ತಳ್ಳಿದ ನಾಗಾರ್ಜುನ್ ಬಾಡಿಗಾರ್ಡ್, ವೈರಲ್ ಆದ ವಿಡಿಯೋ, ಕ್ಷಮೆ ಕೇಳಿದ ನಾಗ್….!

ತೆಲುಗು ಸಿನಿರಂಗದ ಸ್ಟಾರ್‍ ನಟ ಅಕ್ಕಿನೇನಿ ನಾಗಾರ್ಜುನ ರವರಿಗೆ ಸಂಬಂಧಪಟ್ಟ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ವಿಮಾನ ನಿಲ್ದಾಣದಲ್ಲಿ ಅಭಿಮಾನಿಯೋರ್ವ ಪೊಟೋ ತೆಗೆಸಿಕೊಳ್ಳಲು ಅಭಿಮಾನಿ ಬರುತ್ತಿದ್ದು, ಅದನ್ನು ನೋಡಿದ ನಾಗಾರ್ಜುನ್ ಬಾಡಿಗಾರ್ಡ್ ಪಕ್ಕಕ್ಕೆ ತಳ್ಳಿದ್ದಾರೆ. ಈ ವೇಳೆ ಆ ವ್ಯಕ್ತಿ ಜಾರಿ ಬಿದಿದ್ದಾನೆ. ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಈ ವಿಡಿಯೋ ನಾಗಾರ್ಜುನ್ ರವರೆಗೂ ತಲುಪಿದ್ದು, ವಿಡಿಯೋ ನೋಡಿದ ನಾಗಾರ್ಜುನ್ ಕ್ಷಮೆ ಕೇಳಿದ್ದಾರೆ.

Akkineni nagarjuna viral video in airport 1

ಸಾಮಾನ್ಯವಾಗಿ ಸಿನೆಮಾ ಸೆಲೆಬ್ರೆಟಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅವರ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿಬೀಳುತ್ತಾರೆ. ಕೆಲ ನಟರು ಸೆಲ್ಫಿಗಳಿಗೆ ಪೋಸ್ ಕೊಟ್ಟರೇ ಮತ್ತೆ ಕೆಲವರು ಸಮಯದ ಅಭಾವದಿಂದ ಹೋಗಿಬಿಡುತ್ತಾರೆ. ಜೊತೆಗೆ ಸೆಲೆಬ್ರೆಟಿಗಳ ಹತ್ತಿರ ಬರದಂತೆ ಅವರ ಬಾಡಿಗಾರ್ಡ್ ಗಳು ನೋಡಿಕೊಳ್ಳುತ್ತಿರುತ್ತಾರೆ. ಕೆಲವೊಮ್ಮೆ ಅಭಿಮಾನಿಗಳು ಅತಿರೇಕದ ವರ್ತನೆ ಸಹ ಮಾಡುತ್ತಿರುತ್ತಾರೆ. ಕೆಲವೊಮ್ಮೆ ಸೆಲೆಬ್ರೆಟಿಗಳು ಸಹ ಆಕ್ರೋಷ ಹೊರಹಾಕುತ್ತಿರುತ್ತಾರೆ. ಅಂತಹುದೇ ಘಟನೆ ನಟ ನಾಗಾರ್ಜುನ್ ರವರಿಗೂ ನಡೆದಿದೆ. ವಿಮಾನ ನಿಲ್ದಾಣದಿಂದ ಬರುತ್ತಿರುವಾಗ ಅಭಿಮಾನಿಯೋರ್ವ ಸೆಲ್ಫಿ ತೆಗೆಸಿಕೊಳ್ಳಲು ಮುಂದಾಗಿದ್ದು, ಈ ವೇಳೆ ನಾಗಾರ್ಜುನ್ ರವರ ಬಾಡಿಗಾರ್ಡ್ ತಳ್ಳಿದ್ದಾನೆ, ಈ ವೇಳೆ ಆ ವ್ಯಕ್ತಿ ಕೆಳಗೆ ಬಿದ್ದಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದ್ದು, ವಿಡಿಯೋಗೆ ವಿವಿಧ ರೀತಿಯ ಕಾಮೆಂಟ್ ಗಳು ಹರಿದು ಬರುತ್ತಿವೆ.

https://x.com/viralbhayani77/status/1804893182326685722

ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಆಕ್ರೋಷ ಹೊರಹಾಕುತ್ತಿದ್ದಾರೆ ನಿಮ್ಮ ಮಾನವೀಯತೆ ಎಲ್ಲಿ ಹೋಯ್ತು ನಾಗಾರ್ಜುನ್ ರವರೇ ಎಂಬ ಕ್ಯಾಪ್ಷನ್ ನಡಿ ವಿಡಿಯೋ ಹಂಚಿಕೊಳ್ಳಲಾಗಿದೆ. ಸ್ಟಾರ್‍ ನಟರನ್ನು ಆರಾಧನೆ ಮಾಡುವುದನ್ನು ಮೊದಲು ಬಿಡಿ ಎಂದು ಅನೇಕರು ಕಾಮೆಂಟ್ ಗಳನ್ನು ಹೊರಹಾಕುತ್ತಿದ್ದಾರೆ.  ಇನ್ನೂ ಈ ವಿಡಿಯೋ ನಾಗಾರ್ಜುನ್ ರವರ ವರೆಗೂ ತಲುಪಿದೆ. ಈ ಬಗ್ಗೆ ನಾಗಾರ್ಜುನ್ ರವರು ಪ್ರತಿಕ್ರಿಯೆ ನೀಡಿದ್ದು, ಈ ಘಟನೆ ನನ್ನ ಅವಗಾಹನೆಗೆ ಬಂದಿದೆ. ಅಂತಹ ಘಟನೆ ನಡೆಯಬಾರದಾಗಿತ್ತು ಆ ವ್ಯಕ್ತಿಯ ಬಳಿ ನಾನು ಕ್ಷಮೆ ಕೋರುತ್ತಿದ್ದೇನೆ. ಅಂತಹ ಘಟನೆ ಮರುಕಳಿಸದಂತೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Leave a Comment

Your email address will not be published. Required fields are marked *

Scroll to Top