Viral Video: ನೂರು ಬಡ ಕುಟುಂಬಗಳಿಗೆ ಮನೆ ನಿರ್ಮಿಸಿಕೊಟ್ಟ ಫೇಮಸ್ ಯೂಟ್ಯೂಬರ್, ವೈರಲ್ ಆದ ವಿಡಿಯೋ….!

ಸೋಷಿಯಲ್ ಮಿಡಿಯಾ ಮೂಲಕ ಅನೇಕರು ಕೋಟ್ಯಂತರ ರೂಪಾಯಿಗಳನ್ನು ಸಂಪಾದಿಸುತ್ತಿರುತ್ತಾರೆ. ಅವರು ಸಂಪಾದಿಸಿದ ಹಣದಲ್ಲಿ ಕೆಲವರು ಸಾಮಾಜಿಕ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳುತ್ತಿರುತ್ತಾರೆ. ಇದೀಗ ವಿಶ್ವ ಮಟ್ಟದಲ್ಲಿ ಖ್ಯಾತ ಪಡೆದುಕೊಂಡ ಖ್ಯಾತ ಯೂಟ್ಯೂಬರ್‍ ಒಬ್ಬರು ನೂರು ಬಡ ಕುಟುಂಬಗಳಿಗೆ ಮನೆ ನಿರ್ಮಿಸಿಕೊಟ್ಟಿದ್ದಾರೆ. ಸದ್ಯ ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ (Viral Video) ಆಗುತ್ತಿದ್ದು, ಆತನ ಈ ಕೆಲಸಕ್ಕೆ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Mr Beaste build homes for homeless 1

ಇಂದಿನ ಕಾಲದಲ್ಲಿ ಪರೋಪಕಾರ, ಮನುಷ್ಯತ್ವ, ಮಾನವೀಯ ಗುಣಗಳು ಕಾಣುವುದು ಅಪರೂಪ ಎಂದೇ ಹೇಳಬಹುದು. ಆದರೆ ಆಗಾಗ ಕೆಲವರು ತಮ್ಮಲ್ಲಿನ ಮಾನವೀಯ ಗುಣಗಳನ್ನು ತೋರಿಸುತ್ತಿರುತ್ತಾರೆ. ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತಮ್ಮಲ್ಲಿನ ಮನುಷ್ಯತ್ವವನ್ನು ಸಾರುತ್ತಿರುತ್ತಾರೆ. ಇದೀಗ ಖ್ಯಾತ ಯುಟ್ಯೂಬರ್‍ ಜೇಮ್ಸ್ ಡೋನಾಲ್ಡ್ ಸನ್ (MrBeats) ರವರು ಪರೋಪಕಾರಿ ಗುಣಗಳಿಂದ ಜನರಿಗೆ ಹತ್ತಿರವಾಗಿದ್ದಾರೆ. ಸದ್ಯ ಅವರು ನೂರು ಬಡ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿಕೊಟ್ಟು, ಬಡ ಕುಟುಂಬಗಳಿಗೆ ಆಸರೆಯಾಗಿದ್ದಾರೆ. ಸದ್ಯ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ (Viral Video) ಭಾರಿ ಸದ್ದು  ಮಾಡುತ್ತಿದೆ.

Mr Beaste build homes for homeless 0

ಖ್ಯಾತ ಯುಟ್ಯೂಬರ್‍ ಜೇಮ್ಸ್ ಡೋನಾಲ್ಡ್ ಸನ್ (MrBeats) ರವರು ಮಿಸ್ಟರ್‍ ಬೀಸ್ಟ್ ಎಂದೇ ಫೇಮಸ್ ಆದವರು. ತಮ್ಮ ಯುಟ್ಯೂಬ್ ಚಾನಲ್ ನಲ್ಲಿ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಕೋಟ್ಯಂತರ ರೂಪಾಯಿಗಳನ್ನು ಗಳಿಸಿದ್ದಾರೆ. ಭಾರತ ಸೇರಿದಂತೆ ವಿಶ್ವದ ಮೂಲೆ ಮೂಲೆಯಲ್ಲೂ ಅವರು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ತಾವು ಸಂಪಾದನೆ ಮಾಡಿದ ಹಣದಲ್ಲಿ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ, ಪರೋಪಕಾರಿ ಗುಣಗಳಿಂದ ಜನರಿಗೆ ಹತ್ತಿರವಾಗಿದ್ದಾರೆ. ಈ ಹಿಂದೆ ನೂರು ಜನರಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಹಣ ಸಹಾಯ ಮಾಡುವ ಮೂಲಕ ಸುದ್ದಿಯಲ್ಲಿದ್ದ ಮಿಸ್ಟರ್‍ ಬೀಸ್ಟ್ ಇದೀಗ ನೂರು ಬಡ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿಕೊಡುವ ಮೂಲಕ ಸುದ್ದಿಯಾಗಿದ್ದಾರೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ: https://www.youtube.com/watch?v=KkCXLABwHP0&t=1s

ದಕ್ಷಿಣ ಅಮೇರಿಕಾ, ಮೆಕ್ಸಿಕೊ, ಅಜೆಂಟೇನಾ, ಜಮೈಕಾ ಸೇರಿದಂತೆ ಹಲವು ದೇಶಗಳ ನೂರು ಬಡ ಕುಟುಂಬಗಳಿಗೆ ಹಾಗೂ ಪ್ರಾಕೃತಿಕ ವಿಕೋಪಗಳಿಂದ ಮನೆಯನ್ನು ಕಳೆದುಕೊಂಡ ಕುಟುಂಬಗಳಿಗೆ ಸುಸಜ್ಜಿತವಾದ ಮನೆಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ. ಈ ಸಂಬಂಧ ವಿಡಿಯೋ ಒಂದನ್ನು ಅವರು ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. Mr Beast ಯುಟ್ಯೂಬ್ ಚಾನಲ್ ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವೈರಲ್‌ ವಿಡಿಯೋದಲ್ಲಿ (Viral Video) ಮಿಸ್ಟರ್‌ ಬೀಸ್ಟ್‌ ಸುಸಜ್ಜಿತವಾದ ಮನೆಗಳನ್ನು ನಿರ್ಮಿಸಿ ಅಗತ್ಯವಿರುವ ಜನರಿಗೆ ಅದನ್ನು ಹಸ್ತಾಂತರಿಸುವುದನ್ನು ಕಾಣಬಹುದು. ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ಸೂಚಿಸುತತ್‌ಇದ್ದು, ನಿಮ್ಮಂತೆ ಎಲ್ಲಾ ಶ್ರೀಮಂತರು ಬಡವರಿಗೆ ಸಹಾಯ ಮಾಡಿದರೇ ಪ್ರಪಂಚ ಸುಂದರವಾಗಿರುತ್ತಿತ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

Next Post

Viral Fake Advertisement: ಮಕ್ಕಳಿಲ್ಲದ ಮಹಿಳೆಯರನ್ನು ಗರ್ಭಿಣಿ ಮಾಡಿ, ಭರ್ಜರಿ ಹಣ ಗಳಿಸಿ, ವೈರಲ್ ಆದ ಜಾಹಿರಾತು….!

Mon Jul 8 , 2024
ತಂತ್ರಜ್ಞಾನ ಹೆಚ್ಚಾಗುತ್ತಿದ್ದಂತೆ ಸೈಬರ್‍ ಕ್ರೈಂ ಸಹ ಹೆಚ್ಚಾಗುತ್ತಿದೆ. ಮೋಸ, ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಮೊಬೈಲ್ ಹ್ಯಾಕ್, ಮೊಬೈಲ್ ನಂಬರ್‍ ಹ್ಯಾಕ್ ಮಾಡುತ್ತಾರೆ. ಕೆಲವರಂತೂ ನಿಮಗೆ ಆಫರ್‍ ಬಂದಿದೆ ಎಂದು ಬ್ಯಾಂಕ್ ಖಾತೆಗೆ ಕನ್ನಾ ಹಾಕುತ್ತಾರೆ. ಇದರ ಜೊತೆಗೆ ಸೋಷಿಯಲ್ ಮಿಡಿಯಾ ಮೂಲಕ ವಂಚನೆ ಸಹ ಹೆಚ್ಚಾಗಿದೆ ಇದೀಗ ಮಕ್ಕಳಿಲ್ಲ ಮಹಿಳೆಯರನ್ನು ಗರ್ಭಿಣಿ ಮಾಡಿ ಭರ್ಜರಿ ಹಣ ಗಳಿಸಿ ಎಂಬ ಜಾಹಿರಾತೊಂದು (Viral Fake Advertisement) ಸಖತ್ ವೈರಲ್ ಆಗುತ್ತಿದೆ. ಇತ್ತೀಚಿಗೆ […]
Fake advertising prgnent
error: Content is protected !!