Viral Video – ಮೌಂಟ್ ಅಬೂ ಡೆಲ್ವಾಡ ಜೈನ ದೇವಸ್ಥಾನದ ಬಳಿ ನಡೆದ ಒಂದು ಆಘಾತಕಾರಿ ಘಟನೆ ಇಡೀ ದೇಶದ ಗಮನವನ್ನು ಸೆಳೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 50 ವರ್ಷಕ್ಕೂ ಹೆಚ್ಚು ವಯಸ್ಸಿನಂತೆ ಕಾಣುವ ಒಬ್ಬ ವ್ಯಕ್ತಿಯೊಬ್ಬ, ಪವಿತ್ರ ದೇವಾಲಯದಂತಹ ಸ್ಥಳದಲ್ಲಿ ಸಭ್ಯತೆ ಮತ್ತು ಸಂಸ್ಕಾರವನ್ನು ಸಂಪೂರ್ಣವಾಗಿ ಮರೆತಂತೆ ವರ್ತಿಸಿದ್ದಾನೆ. ಈ ಮುದಿಯ ಅಲ್ಲಿದ್ದ ಯುವತಿಯೊಬ್ಬಳ ಕಾಲುಗಳ ಫೋಟೋಗಳನ್ನು ಅಸಭ್ಯವಾಗಿ ತೆಗೆದಿದ್ದಾನೆ. ಇದನ್ನು ಪತ್ತೆ ಮಾಡಿದ ಯುವತಿ ಧೈರ್ಯ ಮಾಡಿ ಆ ಮುದಿಯನ ಪೋನ್ ನಿಂದ ಆ ಪೊಟೋಗಳನ್ನು ಡಿಲೀಟ್ ಮಾಡಿಸಿದ್ದಾಳೆ.
Viral Video – ಘಟನೆಯ ವಿವರ
ದೇವಾಲಯಕ್ಕೆ ಭೇಟಿ ನೀಡಿದ್ದ ಯುವತಿಯೊಬ್ಬಳು, ತನ್ನ ಧಾರ್ಮಿಕ ಕಾರ್ಯದಲ್ಲಿ ತೊಡಗಿದ್ದಾಗ, ಈ ಮುದಿಯನ ಕಣ್ಣು ಆಕೆಯ ಮೇಲೆ ಬಿತ್ತು. ಆತ ಆಕೆಯ ಕಾಲುಗಳ ಫೋಟೋಗಳನ್ನು ತನ್ನ ಮೊಬೈಲ್‌ನಲ್ಲಿ ತೆಗೆದಿದ್ದಾನೆ. ಇದು ಮಾತ್ರವಲ್ಲ, ಆಕೆಯನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾ, ಅಸಭ್ಯಕರವಾಗಿ ವರ್ತಿಸಿದ್ದಾನೆ. ಆರಂಭದಲ್ಲಿ ಈ ವರ್ತನೆಯನ್ನು ಗಮನಿಸಿದ ಯುವತಿ, ಕೆಲವು ಕ್ಷಣ ತಾಳ್ಮೆಯಿಂದ ಸಹಿಸಿದಳು. ಆದರೆ, ಆತನ ಧೋರಣೆ ಮಿತಿಮೀರಿದಾಗ, ಆಕೆ ಆತನ ಕೃತ್ಯವನ್ನು ಬಯಲಿಗೆಳೆಯುವ ಕೆಲಸ ಮಾಡಿದ್ದಾಳೆ.

ಯುವತಿ ಧೈರ್ಯ ಚಪಲ ಮುದಿಯನ ಬಳಿಗೆ ನೇರವಾಗಿ ಹೋದಳು. “ನೀವು ಏಕೆ ನನ್ನ ಫೋಟೋ ತೆಗೆದಿರಿ?” ಎಂದು ಜನರೆದುರೇ ಆತನನ್ನು ಪ್ರಶ್ನಿಸಿದಳು. ಆಕೆ ಆತನ ಫೋನ್ ತೆರೆಯಿಸಿ, ಗ್ಯಾಲರಿಯಲ್ಲಿ ತನ್ನ ಕಾಲುಗಳ ಫೋಟೋಗಳನ್ನು ತೋರಿಸಿದಾಗ, ಆತನಿಗೆ ಉತ್ತರವೇ ಇಲ್ಲದಾಯಿತು. ಎಲ್ಲರ ಮುಂದೆ ಆಕೆಯ ಧೈರ್ಯದ ಪ್ರಶ್ನೆಗಳಿಗೆ ಆತ ಕಕ್ಕಾಬಿಕ್ಕಿಯಾದ. ಕೊನೆಗೆ, ಆತ ತನ್ನ ಫೋನ್‌ನಿಂದ ಆ ಫೋಟೋಗಳನ್ನು ಡಿಲೀಟ್ ಮಾಡಿದ. ಆದರೆ, ಈ ಘಟನೆಯಲ್ಲಿ ಒಂದು ದುಃಖಕರ ವಿಷಯವೆಂದರೆ, ಯುವತಿ ಆತನನ್ನು ಪ್ರಶ್ನಿಸುತ್ತಿರುವಾಗ, ಸುತ್ತಲಿದ್ದ ಜನರಲ್ಲಿ ಯಾರೂ ಆಕೆಗೆ ಬೆಂಬಲವಾಗಿ ನಿಲ್ಲಲಿಲ್ಲ.
Viral Video – ನೆಟಿಜನ್‌ಗಳ ಆಕ್ರೋಶ
ಈ ಘಟನೆಯ ವಿಡಿಯೋ (https://www.instagram.com/reel/DIZDMcrThqz/) ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. “ತಂದೆಯ ವಯಸ್ಸಿನ ವ್ಯಕ್ತಿಯೊಬ್ಬ ಇಂತಹ ಕೀಳು ಕೃತ್ಯಕ್ಕೆ ಒಡಗುವುದೇ?” ಎಂದು ನೆಟಿಜನ್‌ಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ದೇವಾಲಯದಂತಹ ಪವಿತ್ರ ಸ್ಥಳದಲ್ಲಿಯೂ ಮಹಿಳೆಯರಿಗೆ ಸುರಕ್ಷತೆ ಇಲ್ಲವೇ? ಸಮಾಜ ಎಲ್ಲಿಗೆ ಹೋಗುತ್ತಿದೆ?” ಎಂದು ಕಾಮೆಂಟ್‌ಗಳ ಮೂಲಕ ತಮ್ಮ ಕಳವಳವನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಈ ಘಟನೆಯನ್ನು ಖಂಡಿಸಿ, ಇಂತಹ ವರ್ತನೆಗೆ ಕಠಿಣ ಶಿಕ್ಷೆಯ ಆಗ್ರಹವನ್ನು ವ್ಯಕ್ತಪಡಿಸಿದ್ದಾರೆ.
Viral Video – ಸಮಾಜದಲ್ಲಿ ಹೆಚ್ಚುತ್ತಿರುವ ಅನೈತಿಕತೆ
ಈ ಘಟನೆ ಸಮಾಜದಲ್ಲಿ ಅನೈತಿಕ ವರ್ತನೆಗಳು ಹೆಚ್ಚುತ್ತಿರುವುದಕ್ಕೆ ಒಂದು ಜ್ವಲಂತ ಉದಾಹರಣೆ. ದೇವಾಲಯದಂತಹ ಸ್ಥಳಗಳು ಶಾಂತಿ, ಭಕ್ತಿ ಮತ್ತು ಗೌರವದಿಂದ ಕೂಡಿರಬೇಕಾದವು. ಆದರೆ, ಇಂತಹ ಘಟನೆಗಳು ಆ ಸ್ಥಳಗಳ ಪಾವಿತ್ರ್ಯಕ್ಕೂ ಕಳಂಕ ತರುತ್ತವೆ. ಈ ಘಟನೆಯ ಬಗ್ಗೆ ಆತನ ವಿರುದ್ಧ ಕಾನೂನು ಕ್ರಮ ಕೈಗೊಂಡಿದೆಯೇ ಎಂಬ ಮಾಹಿತಿ ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ.
Read this also : Viral – ಪತ್ನಿಯಿಂದ ಪತಿಗೆ ಹಿಂಸೆ: ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾದ ಆಘಾತಕಾರಿ ವಿಡಿಯೋ ವೈರಲ್…!
Viral Video – ಯುವತಿಯ ಧೈರ್ಯಕ್ಕೆ ಮೆಚ್ಚುಗೆ
ಈ ಘಟನೆಯಲ್ಲಿ ಯುವತಿಯ ಧೈರ್ಯವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಒಂಟಿಯಾಗಿ ಎದುರಿಸಿ, ತನ್ನ ಹಕ್ಕಿಗಾಗಿ ಧ್ವನಿಯೆತ್ತಿದ ಆಕೆ, ಇತರ ಮಹಿಳೆಯರಿಗೂ ಪ್ರೇರಣೆಯಾಗಿದ್ದಾಳೆ. “ತಪ್ಪು ಮಾಡುವವರಿಗೆ ಎದುರಾಗಿ ನಿಲ್ಲುವ ಧೈರ್ಯ ಇದ್ದರೆ, ಸಮಾಜದಲ್ಲಿ ಬದಲಾವಣೆ ಸಾಧ್ಯ,” ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.