Viral Video : ಇನ್ಸ್ಟಾಗ್ರಾಂ ಪ್ರಿಯಕರಿನಿಗಾಗಿ 15 ತಿಂಗಳ ಮಗುವನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಹೋದ ಮಹಾನ್ ತಾಯಿ, ವೈರಲ್ ಆದ ವಿಡಿಯೋ…!

Viral Video – ತೆಲಂಗಾಣದ ನಲಗೊಂಡದಲ್ಲಿ ನಡೆದ ಹೃದಯವಿದ್ರಾವಕ ಘಟನೆಯೊಂದು ಎಲ್ಲೆಡೆ ಚರ್ಚೆಯಾಗುತ್ತಿದೆ. ಕೇವಲ 15 ತಿಂಗಳ ತನ್ನ ಪುಟ್ಟ ಕಂದನನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು, ತಾಯಿಯೊಬ್ಬಳು ತನ್ನ ಇನ್‌ಸ್ಟಾಗ್ರಾಮ್ ಪ್ರೇಮಿಯೊಂದಿಗೆ ಓಡಿಹೋಗಿದ್ದಾಳೆ. ಈ ಅಮಾನವೀಯ ಘಟನೆಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ.

Telangana Mother Abandons Baby at Bus Stand for Instagram Lover – Viral Video

Viral Video – ಘಟನೆಯ ವಿವರಗಳು

ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಘಟನೆ ನಡೆದಾಗ ಬಸ್ ನಿಲ್ದಾಣದಲ್ಲಿ ಜನರು ಓಡಾಡುತ್ತಿದ್ದರು. ಮಹಿಳೆಯೊಬ್ಬಳು ತನ್ನ ಪುಟ್ಟ ಮಗುವಿನ ಅಳು ಕೇಳಿಸದಂತೆ ವರ್ತಿಸಿ, ಬಸ್ ನಿಲ್ದಾಣದಲ್ಲೇ ಬಿಟ್ಟು ಹೋಗಿರುವುದು ಸ್ಪಷ್ಟವಾಗಿ ದಾಖಲಾಗಿದೆ. ಮಗುವಿನ ಅಳು ಕೇಳಿದ ಸಾರ್ವಜನಿಕರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೈದರಾಬಾದ್ ಮೂಲದ ವಿವಾಹಿತ ಮಹಿಳೆ ನವೀನಾ, ತನ್ನ 15 ತಿಂಗಳ ಮಗು ಧನುಷ್‌ನನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು, ನಲಗೊಂಡ ಓಲ್ಡ್ ಸಿಟಿಯ ಯುವಕನೊಂದಿಗೆ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

Viral Video – ಇನ್‌ ಸ್ಟಾಗ್ರಾಮ್ ಪ್ರೀತಿಯೇ ಘಟನೆಗೆ ಕಾರಣ?

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ನವೀನಾ ಮತ್ತು ಆಕೆಯ ಪ್ರೇಮಿಯ ನಡುವೆ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿ ಪ್ರೀತಿ ಬೆಳೆದಿದ್ದು, ಆತನ ಸಲುವಾಗಿಯೇ ಆಕೆ ತನ್ನ ಕಂದ ಮತ್ತು ಪತಿಯನ್ನು ತೊರೆಯಲು ನಿರ್ಧರಿಸಿದ್ದಾಳೆ ಎಂದು ತಿಳಿದುಬಂದಿದೆ. ಆಕೆ ಮಗುವನ್ನು ಬಿಟ್ಟು ತನ್ನ ಪ್ರೇಮಿಯೊಂದಿಗೆ ಬೈಕ್‌ನಲ್ಲಿ ಹೋಗುತ್ತಿರುವ ದೃಶ್ಯವೂ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಮಗು ತನ್ನ ತಾಯಿಯನ್ನು “ಮಮ್ಮಿ” ಎಂದು ಕರೆಯುತ್ತಾ ಅಳುತ್ತಿರುವ ದೃಶ್ಯವೂ ದಾಖಲಾಗಿದೆ.

Telangana Mother Abandons Baby at Bus Stand for Instagram Lover – Viral Video

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here

ಪೊಲೀಸ್ ಕಾರ್ಯಾಚರಣೆ ಮತ್ತು ಕೌನ್ಸೆಲಿಂಗ್

ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಬೈಕ್ ಮಾಲೀಕರನ್ನು ಪತ್ತೆ ಹಚ್ಚಿದ್ದಾರೆ. ತನಿಖೆ ಮುಂದುವರಿದಾಗ, ಮಹಿಳೆ ಮತ್ತು ಆಕೆಯ ಗೆಳೆಯನ ನಡುವಿನ ಇನ್‌ಸ್ಟಾಗ್ರಾಮ್ ಸಂಬಂಧ ಬಯಲಾಗಿದೆ. ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, ಮಹಿಳೆ, ಆಕೆಯ ಪ್ರೇಮಿ ಮತ್ತು ಪತಿಯನ್ನು ಪೊಲೀಸ್ ಠಾಣೆಗೆ ಕರೆತಂದು ಕೌನ್ಸೆಲಿಂಗ್ ನಡೆಸಿದ್ದಾರೆ. ನಂತರ ಮಗುವನ್ನು ಅದರ ತಂದೆಯ ಸುಪರ್ದಿಗೆ ನೀಡಲಾಗಿದೆ. Read this also : ಪ್ರಪೋಸ್ ಮಾಡಲು ಹೋಗಿ ಪ್ರಾಣಾಪಾಯಕ್ಕೆ ಸಿಲುಕಿದ ಪ್ರೇಮಿ: ವೈರಲ್ ಆದ ವಿಡಿಯೋ….!

ಮಕ್ಕಳಿಗಾಗಿ ಹಾತೊರೆಯುವ ಅನೇಕ ದಂಪತಿಗಳು ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಆಸ್ಪತ್ರೆ ಮತ್ತು ದೇಗುಲಗಳಿಗೆ ಅಲೆಯುತ್ತಿರುವಾಗ, ತಾನೇ ಹೆತ್ತ ಪುಟ್ಟ ಮಗುವನ್ನು ನಡುಬೀದಿಯಲ್ಲಿ ಬಿಟ್ಟು ಹೋಗಿರುವ ಈ ಘಟನೆ ಸಮಾಜದಲ್ಲಿ ತೀವ್ರ ಆಘಾತ ಮತ್ತು ಚರ್ಚೆಗೆ ಕಾರಣವಾಗಿದೆ.

Leave a Comment

Your email address will not be published. Required fields are marked *

Scroll to Top