HomeStateತಾಯಿ ಎಂಬ ಹೆಸರಿಗೆ ಕಳಂಕ ಈ ಮಹಾತಾಯಿ, ಪುಟ್ಟ ಕಂದಮ್ಮನಿಗೆ ಸಿಗರೇಟ್ ಸೇದಿಸಿ, ಮದ್ಯ ಕುಡಿಸಿದ...

ತಾಯಿ ಎಂಬ ಹೆಸರಿಗೆ ಕಳಂಕ ಈ ಮಹಾತಾಯಿ, ಪುಟ್ಟ ಕಂದಮ್ಮನಿಗೆ ಸಿಗರೇಟ್ ಸೇದಿಸಿ, ಮದ್ಯ ಕುಡಿಸಿದ ಪಾಪಿ….!

ತಾಯಿಗಿಂತ ಮಿಗಿಲಾದದು ಏನು ಇಲ್ಲ ಎಂಬ ಮಾತಿದೆ. ತಾಯಿಗೆ ಮಕ್ಕಳೆಂದರೇ ತುಂಬಾನೆ ಪ್ರಿತಿ ಇರುತ್ತದೆ. ತಮ್ಮ ಮುದ್ದಿನ ಮಕ್ಕಳನ್ನು ಪ್ರಾಣಕ್ಕಿಂತ ಮಿಗಿಲಾಗಿ, ಪ್ರೀತಿಯಿಂದ ಸಾಕುತ್ತಾರೆ. ಆದರೆ ಇಲ್ಲೊಬ್ಬ ಪಾಪಿ ತಾಯಿ ತನ್ನ 20 ತಿಂಗಳ ಮುದ್ದಿನ ಮಗುವಿಗೆ ಸಿಗರೇಟ್ ಸೇದುವಂತೆ ಹಾಗೂ ಮದ್ಯ ಸೇವಿಸುವಂತೆ ಒತ್ತಾಯ ಮಾಡಿದ ಘಟನೆಯೊಂದು ನಡೆದಿದ್ದು, ಈ ಸಂಬಂಧ ಪೊಸ್ಟ್ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಆಕೆಯ ಈ ಕೃತ್ಯಕ್ಕೆ ಎಲ್ಲಾ  ಕಡೆಯಿಂದ ಆಕ್ರೋಷ ವ್ಯಕ್ತವಾಗುತ್ತಿದೆ.

ಅಂದಹಾಗೆ ಈ ಘಟನೆ ನಡೆದಿರೋದು ಅಸ್ಸಾಂ ರಾಜ್ಯದ ಸಿಲ್ಚಾರ್‍ ಎಂಬಲ್ಲಿ. ಮಹಿಳೆಯೊಬ್ಬಳು ತನ್ನ 20 ತಿಂಗಳ ಮಗುವಿಗೆ ಸಿಗರೇಟ್ ಸೇದುವಂತೆ ಹಾಗೂ ಮದ್ಯಪಾನ ಮಾಡುವಂತೆ ಒತ್ತಾಯಿಸಿದ್ದಾಳೆ ಎಂಬ ಗಂಭೀರ ಆರೋಪಕೇಳಿಬಂದಿದೆ. ಕಳೆದ ಬುಧವಾರ ರಾತ್ರಿ ತಾಯಿಯೊಬ್ಬಳು ತನ್ನ ಹೆತ್ತ ಕಂದಮ್ಮನಿಗೆ ಸಿಗರೇಟ್ ಸೇದಿಸಲು ಹಾಗೂ ಮದ್ಯ ಕುಡಿಸಲು ಒತ್ತಾಯಿಸಿದ್ದಾಳೆ. ಈ ಸಂಬಂಧ ಮಕ್ಕಳ ಕಲ್ಯಾಣ ಸಮಿತಿಯ ಸಹಾಯವಾಣಿಯ ಮೂಲಕ ದೂರು ಸಲ್ಲಿಸಲಾಗಿದೆ. ತಾಯಿಯನ್ನು ವಶಕ್ಕೆ ಪಡೆದು ಮಗುವನ್ನು ರಕ್ಷಣೆ ಮಾಡಲಾಗಿದೆ ಎನ್ನಲಾಗಿದೆ. ಸದ್ಯ ತಾಯಿ ಹಾಗೂ ಮಗು ಇಬ್ಬರು ಮಕ್ಕಳ ಕಲ್ಯಾಣ ಸಮಿತಿಯ ವಶದಲ್ಲಿದ್ದಾರೆ ಎನ್ನಲಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಸಿ ಆಕೆಯ ವಿರುದ್ದ ಕಾನೂನಿನಂತೆ ಕ್ರಮ ತೆಗೆದುಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.

https://x.com/ForMenIndia_/status/1802020406133723247

ಇನ್ನೂ ಈ ಸಂಬಂಧ ForMenIndia_ ಪೋಸ್ಟ್ ಒಂದನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಮಹಿಳೆಯೊಬ್ಬಳು ತನ್ನ 20 ತಿಂಗಳ ಮಗುವಿಗೆ ಸಿಗರೇಟ್ ಸೇದಲು ಹಾಗೂ ಮದ್ಯಪಾನ ಮಾಡಲು ಒತ್ತಾಯಿಸಿದ್ದಾರೆ ಎಂದು ಪೋಸ್ಟ್ ಮಾಡಲಾಗಿದೆ. ದೂರಿನ ಆಧಾರದ ಮೇಲೆ ಮಕ್ಕಳ ಸಹಾಯವಾಣಿ ಸೆಲ್ ಮಗುವನ್ನು ರಕ್ಷಣೆ ಮಾಡಿ ತಾಯಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದೆ ಎಂದು ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್ ನಲ್ಲಿ ಪೊಟೋ ಒಂದನ್ನು ಹಂಚಿಕೊಂಡಿದ್ದು, ಪೊಟೋದಲ್ಲಿ ತಾಯಿಯೊಬ್ಬಳು ತನ್ನ ಕಂದಮ್ಮನಿಗೆ ಸಿಗರೇಟ್ ಸೇದಲು ಒತ್ತಾಯಿಸುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ. ಕಳೆದ ಜೂ.15 ರಂದು ಈ ಪೋಸ್ಟ್ ಹಂಚಿಕೊಂಡಿದ್ದು, 1 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಈ ಘಟನೆ ತುಂಬಾ ಅಘಾತಕಾರಿ ಘಟನೆಯಾಗಿದ್ದು, ಆಕೆಯ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ನೆಟ್ಟಿಗರು ಆಕ್ರೋಷ ಹೊರಹಾಕುತ್ತಿದ್ದಾರೆ.

by Balajihttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

John Doe on TieLabs White T-shirt