ಇಂದಿನ ಕಾಲ ಎಷ್ಟೇ ಮುಂದುವರೆದರೂ, ನಾಗರೀಕತೆ ಬೆಳೆದರೂ ಇನ್ನೂ ಅನೇಕ ಕಡೆ ಈ ಜಾತಿ ಪದ್ದತಿ ಎಂಬುದು ಜೀವಂತವಾಗಿಯೇ ಇದೆ. ಇದಕ್ಕೆ ಅನೇಕ ಉದಾಹರಣೆಗಳೂ ಸಹ ಇದೆ. ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwar) ಜಾತಿ ಪದ್ದತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಜಾತಿ ಪದ್ದತಿ ಹೋಗಲ್ಲ ಎಂಬುದು ನನ್ನ ಅಭಿಪ್ರಾಯವಾಗಿದೆ. ನಾವು ಬದಲಾಗದೇ ಇದ್ದರೇ ಮುಂದಿನ ದಿನಗಳಲ್ಲೂ ಗ್ರಾಮಗಳ ಹೊರಗೆ ಇರಬೇಕಾಗುತ್ತದೆ ಎಂದು (G Parameshwar)ಬೇಸರ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ನಗರದಲ್ಲಿ ಛಲವಾದಿ ಮಹಾ ಸಭಾ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. (G Parameshwar) ನಾನು ಎಂ.ಎ, ಪಿ.ಹೆಚ್.ಡಿ ಮಾಡಿದ್ದೇನೆ. ಆದರೆ ನನ್ನ ಜಾತಿ ನನ್ನನ್ನು ಬಿಟ್ಟು ಹೋಗೊಲ್ಲ. ಪರಮೇಶ್ವರ್ ಬುದ್ದಿವಂತ ಆದರೆ ಎಸ್.ಸಿ ಜಾತಿಗೆ ಸೇರಿದ್ದಾನೆ, ಇಲ್ಲದಿದ್ದರೇ ಎಲ್ಲೋ ಹೋಗುತ್ತಿದ್ದ ಎಂದು ಅನೇಕರು ಹೇಳುತ್ತಾರೆ. ಇದನ್ನು ನೋಡಿದರೇ ಜಾತಿ ನಾಶ ಆಗುತ್ತದೆ ಎಂಬುದು ಅಸಾಧ್ಯವಾದುದು. ಎಡ-ಬಲ ಹೀಗೆ ಅನೇಕ ಗುಂಪುಗಳನ್ನಾಗಿ ಮಾಡಿದ್ದಾರೆ. ಈ ಜನ್ಮದಲ್ಲಿ ಒಂದಾಗದೇ ಇರುವಂತೆ ಒಡೆದು ಹಾಕಿದ್ದಾರೆ (G Parameshwar) ಎಂದರು.
ಇನ್ನೂ (G Parameshwar) ಪರಿಶಿಷ್ಟರ ಹಣ ದುರ್ಬಳಕೆ ಆಗಿದೆ ಎಂಬ ಆರೋಪದ ಬಗ್ಗೆ ಮಾತನಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಈ ಹಿಂದೆ ಸಿಎಂ ಆಗಿದ್ದಾಗ SCP-TSP ಯೋಜನೆ ಜಾರಿಗೆ ತಂದಿದ್ದು. ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಹಣ ಮೀಸಲಿಡಲಾಗಿದೆ. ಈ ಕಾನೂನಿನಲ್ಲಿ 7D ತಿದ್ದುಪಡಿ ಮಾಡಿ ಹಣ ಬೇರೆ ಕಾಮಗಾರಿಗೆ ಬಳಕೆ ಮಾಡದಂತೆ ಮಾಡಲಾಗಿದೆ. ಈ ಹಣವನ್ನು ಗ್ಯಾರಂಟಿ ಯೋಜನೆ ಬಳಸಲಾಗಿದೆ. ಗ್ಯಾರಂಟಿಯಲ್ಲಿ ಶೇಖಡವಾರು ಈ ಸಮುದಾಯದ ಜನರ ಬರುತ್ತಾರೆ. ಈ ವರ್ಷ ಬಳಕೆಯಾಗದೆ ಇರುವ ಹಣ ಮುಂದಿನ ವರ್ಷಕ್ಕೆ ವರ್ಗಾಯಿಸಲಾಗುತ್ತದೆ. ಆದರೆ ಕೆಲವರು ಈ ಬಗ್ಗೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಅದು ತಪ್ಪು ಎಂದರು.
ಇನ್ನೂ ಇದೇ ಸಮಯದಲ್ಲಿ ನಾಯಿ ಮಾಂಸ ಪ್ರಕರಣದ ಬಗ್ಗೆ ಸಹ ಮಾತನಾಡಿದ್ದು, ರಾಜಸ್ಥಾನದಿಂದ (Rajasthan) ಬೆಂಗಳೂರಿಗೆ (Bengaluru) ಬಂದ್ದದ್ದು, ನಾಯಿ ಮಾಂಸ (Dog Meat) ಅಲ್ಲ, ಮೇಕೆಯ ಮಾಂಸ ಎಂಬುದು ವರದಿಯಲ್ಲಿ ದೃಢವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಲ್ಯಾಬ್‌ನಲ್ಲಿ ಅದು ಮೇಕೆ ಮಾಂಸ ಎಂದು ವರದಿ ಬಂದಿದೆ. ಅನಾವಶ್ಯಕವಾಗಿ ದುರುದ್ದೇಶದಿಂದ ದೂರು ನೀಡಲಾಗಿದೆ ಎಂದಿದ್ದಾರೆ. ಜೊತೆಗೆ ಮುಡಾದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ವಾಲ್ಮೀಕಿ ನಿಗಮದ ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ (G Parameshwar)ಎಂದಿದ್ದಾರೆ.