ಇಂದಿನ ಸೋಷಿಯಲ್ ಮಿಡಿಯಾ ಯುಗದಲ್ಲಿ ಗಡಿ ಮಿರೀದ ಪ್ರೀತಿಯ ಕಥೆಗಳು ಹೆಚ್ಚಾಗಿ ನಡೆಯುತ್ತಿದೆ. 2019 ರಲ್ಲಿ ಫೇಸ್ ಬುಕ್ ಮೂಲಕ ಪರಿಚಯವಾದ (Facebook Love Story) ಭಾರತದ ರಾಜಾಸ್ಥಾನದ ಅಂಜು ಕೆಲವು ತಿಂಗಳುಗಳ ಹಿಂದೆ ತನ್ನ ಪ್ರಿಯಕರನನ್ನು ಹುಡುಕಿಕೊಂಡು ಪಾಕಿಸ್ತಾನಕ್ಕೆ ತೆರಳಿ ಪಾಕಿಸ್ತಾನದ ನಸ್ರುಲ್ಲಾ ಎಂಬುವವರ ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಮತ್ತೊಂದು ಘಟನೆ ನಡೆದಿದೆ. 25 ವರ್ಷದ ಪಾಕಿಸ್ತಾನಿ ಮಹಿಳೆಯೊಬ್ಬಳು ತನ್ನ ಪ್ರಿಯಕರನಿಗಾಗಿ (Facebook Love Story) ಭಾರತದ ಗಡಿಯನ್ನು ದಾಟಿ ಬಂದಿದ್ದಾಳೆ, ಫೇಸ್ ಬುಕ್ ಮೂಲಕ ಪರಿಚಯವಾದ ಅವರಿಬ್ಬರ ನಡುವೆ ಪ್ರೀತಿ ಹುಟ್ಟಿದ್ದು, ಇಬ್ಬರನ್ನು ಭೇಟಿಯಾಗುವಂತೆ ಮಾಡಿದೆ.
(Facebook Love Story) ಪ್ರೀತಿ ಎಂಬುದು ಮಾಯೆ, ಕುರುಡು ಎಂಬೆಲ್ಲಾ ಮಾತುಗಳನ್ನು ಕೇಳಿದ್ದೇವೆ. ಪ್ರೀತಿಗೆ ಜಾತಿ, ಮತ, ಗಡಿ, ಏನೂ ಇರೊಲ್ಲ. ಪ್ರೀತಿಗಾಗಿ ಏನು ಬೇಕಾದರೂ ಮಾಡೋಕೆ ರೆಡಿಯಾಗಿರುತ್ತಾರೆ. ಅದಕ್ಕೆ ಈ ಘಟನೆ ಉತ್ತಮ ಉದಾಹರಣೆ ಎಂದು ಹೇಳಬಹುದು. 25 ವರ್ಷದ ಪಾಕಿಸ್ತಾನಿ ಮಹಿಳೆ ಮೆಹ್ವಿಶ್ ಎಂಬವಳು ಫೇಸ್ಬುಕ್ನಲ್ಲಿ ಪರಿಚಯವಾದ ತನ್ನ ಪ್ರಿಯಕರ ರೆಹಮಾನ್ ನೊಂದಿಗೆ ಇರಲು ರಾಜಸ್ಥಾನದ ಬಿಕಾನೇರ್ ಜಿಲ್ಲೆ ಬಂದಿದ್ದಾಳೆ ಎಂದು ತಿಳಿದುಬಂದಿದೆ. ಲಾಹೋರ್ ಮೂಲದ ನಿವಾಸಿಯಾಗಿರುವ ಮೆಹ್ವಿಶ್ ತಮ್ಮ ಬಗ್ಗೆ ಮಾದ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಮಾದ್ಯಮಗಳೊಂದಿಗೆ ತಮ್ಮ (Facebook Love Story) ಕಥೆಯನ್ನು ಹಂಚಿಕೊಂಡಿರುವ ಮೆಹ್ವಿಶ್, ಎರಡು ವರ್ಷ ವಯಸ್ಸಿನಲ್ಲಿರುವಾಗ ತನ್ನ ತಾಯಿಯನ್ನು ಕಳೆದುಕೊಂಡಳಂತೆ. ಅದೇ ರೀತಿ 10 ವರ್ಷ ವಯಸ್ಸಿನಲ್ಲಿ ತನ್ನ ತಂದೆಯನ್ನೂ ಸಹ ಕಳೆದುಕೊಂಡಳಂತೆ. ಬಳಿಕ ತನ್ನ ಸಹೋದರಿ ಸಹಿಮಾ ಜೊತೆಗೆ ಇರಲು ಇಸ್ಲಾಮಾಬಾದ್ ಗೆ ತೆರಳಿ, ಅಲ್ಲಿ ಮೆಹ್ವಿಶ್ ಬ್ಯೂಟಿ ಪಾರ್ಲರ್ ನಲ್ಲಿ ತರಬೇತಿ ಪಡೆದು, ಕಳೆದ ಒಂದು ವರ್ಷದಿಂದ ತಮ್ಮದೇ ಆದ ಬ್ಯೂಟಿ ಪಾರ್ಲರ್ ಸಹ ನಡೆಸುತ್ತಿದ್ದರಂತೆ. ಇನ್ನೂ (Facebook Love Story) ಫೇಸ್ ಬುಕ್ ಮೂಲಕ ರಾಜಸ್ಥಾನದ ರೆಹಮಾನ್ ನನ್ನು ಪ್ರೀತಿಸಿದ್ದಾಳೆ. ಕಳೆದ ಜು.25 ರಮದು ಮೆಹ್ವಿಶ್ ತನ್ನ ಕುಟುಂಬದೊಂದಿಗೆ ಇಸ್ಲಾಮಾಬಾದ್ ನಿಂದ ವಾಘಾ ಗಡಿಗೆ ಬಂದಿದ್ದಳು. ಭಾರತ ಹಾಗೂ ಪಾಕಿಸ್ತಾನದ ಅಧಿಕಾರಿಗಳು ಆಕೆಯ ದಾಖಲೆಗಳನ್ನು ಪರಿಶೀಲನೆ ಮಾಡಿ, 45 ದಿನಗಳ ಟೂರಿಸಂ ವೀಸಾದಲ್ಲಿ ಭಾರತಕ್ಕೆ ಭೇಟಿ ನೀಡಲು ಅನುಮತಿ ಪಡೆದುಕೊಂಡಿದ್ದಾಳೆ.
ಇನ್ನೂ ಭಾರತಕ್ಕೆ ಬರುತ್ತಿದ್ದಂತೆ ರೆಹಮಾನ್ ಮನೆಯವರು ಆಕೆಯನ್ನು ತುಂಬಾ ಅದ್ದೂರಿಯಾಗಿ ಮನೆಗೆ ಸ್ವಾಗತಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ರೆಹಮಾನ್ 2011 ರಲ್ಲೇ ಫರಿಧಾ ಎಂಬಾಕೆಯನ್ನು ಮದುವೆಯಾಗಿದ್ದು, ಅವರಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಆದರೆ ದಂಪತಿಯ ನಡುವೆ ಮನಸ್ತಾಪಗಳು ಉಂಟಾಗಿ, ಫರೀದಾ ಹಾಗೂ ಇಬ್ಬರೂ ಮಕ್ಕಳು ಆತನಿಂದ ಬೇರೆಯಾಗಿ ವಾಸಿಸುತ್ತಿದ್ದಾಳೆ ಎಂದು ತಿಳಿದುಬಂದಿದೆ. (Facebook Love Story) ಇತ್ತ ಮೆಹ್ವಿಶ್ ರೆಹಮಾನ್ ನನ್ನು ಭೇಟಿಯಾಗಲು ಭಾರತಕ್ಕೆ ಬಂದ ವಿಚಾರ ತಿಳಿಯುತ್ತಿದ್ದಂತೆ ರೆಹಮಾನ್ ಮೊದಲ ಪತ್ನಿ ಫರೀದಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪಾಕಿಸ್ತಾನದಿಂದ ಬಂದ ಮೆಹ್ವಿಶ್ ಗೂಢಚಾರಿಯಾಗಿರಬಹುದು ಈ ಸಂಬಂಧ ತನಿಖೆ ನಡೆಸಿ, ನನಗೆ ರೆಹಮಾನ್ ವಿಚ್ಚೇದನ ನೀಡಿಲ್ಲ, ಆತನ ಎರಡನೇ ಮದುವೆ ಸಹ ಅನಧಿಕೃತ ಎಂದು ಆಕೆ ಆರೋಪಿಸಿದ್ದಾಳೆ.