Marriage – ಮದುವೆ ಎಂದರೆ ಎರಡು ಕುಟುಂಬಗಳಲ್ಲಿ ದೊಡ್ಡ ಹಬ್ಬದ ಸಂಭ್ರಮ ಎಂದೇ ಹೇಳಬಹುದು. ಮದುವೆಯಲ್ಲಿ ಇತ್ತಿಚಿಗೆ ಡ್ಯಾನ್ಸ್ ಗಳು, ಮೆಹಂದಿ ಫಂಕ್ಷನ್ ಗಳು ಸೇರಿದಂತೆ ಹಲವು ರೀತಿಯ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಜೊತೆಗೆ ಮದುವೆಗಳಲ್ಲಿಯೇ ಕೆಲವೊಂದು ಗಲಾಟೆಗಳು ನಡೆದು ಮದುವೆಗಳು ಮುರಿದುಬಿದ್ದಿರುವ ಘಟನೆಗಳು ಸಹ ನಡೆದಿದೆ. ಇದೀಗ ಅಂತಹುದೇ ಘಟನೆಯೊಂದು ನವದೆಹಲಿಯಲ್ಲಿ ನಡೆದಿದೆ. ಮದುವೆಯಲ್ಲಿ ವರ ಡ್ಯಾನ್ಸ್ ಮಾಡಿದಕ್ಕೆ ವಧುವಿನ ತಂದೆ ಮದುವೆಯನ್ನು ನಿಲ್ಲಿಸಿದ ಘಟನೆ ನಡೆದಿದೆ.
ಸಾಮಾನ್ಯವಾಗಿ ಮದುವೆಗಳಲ್ಲಿ ಡ್ಯಾನ್ಸ್ ಗಳು, ಸಂಗೀತ್ ಕಾರ್ಯಕ್ರಮಗಳು ಮಾಡುವುದ ಸಹಜ. ಆದರೆ ಮದುವೆಯಲ್ಲಿ ನೃತ್ಯ ಮಾಡಿದ್ದಕ್ಕೆ ಮದುವೆಯೇ ಕ್ಯಾನ್ಸಲ್ ಆಗಿದೆ. ಮದುವೆಯ ಮೆರವಣಿಗೆಯ ವೇಳೆ ವರನ ಸ್ನೇಹಿತರು ಒತ್ತಾಯ ಮಾಡಿದ್ದಕ್ಕೆ ವರ ಡ್ಯಾನ್ಸ್ ಮಾಡಿದ್ದಕ್ಕೆ ಮದುವೆ ನಿಂತು ಹೋಗಿದೆ. ವರನ ಸ್ನೇಹಿತರು ಬಾಲಿವುಡ್ ನ ಕಳನಾಯಕ್ ಎಂಬ ಸಿನೆಮಾದ ಚೋಲಿ ಕೆ ಪೀಚೆ ಕ್ಯಾ ಹೈ ಎಂಬ ಹಾಡಿಗೆ ನೃತ್ಯ ಮಾಡಿದ್ದಾನೆ. ಈ ಸಮಯದಲ್ಲಿ ಅಲ್ಲಿದ್ದವರು ಆತನನ್ನು ಹುರಿದುಂಬಿಸಿದ್ದಾರೆ. ಆದರೆ ವಧುವಿನ ತಂದೆ ಮಾತ್ರ ಅದನ್ನು ನೋಡಿ ಕೋಪಗೊಂಡಿದ್ದಾರೆ. ಮೆರವಣಿಗೆಯನ್ನು ನಿಲ್ಲಿಸಿ ಮದುವೆ ನಿಲ್ಲಿಸಿದ್ದಾರೆ.
ಕೂಡಲೇ ವರ, ವಧುವಿನ ತಂದೆಯ ಬಳಿ ಹೋಗಿ ಇದೆಲ್ಲವೂ ತಮಾಷೆ ಹಾಗೂ ಖುಷಿಗಾಗಿ ಮಾಡಿದ್ದು ಎಂದು ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ಅವರು ಸಂಪೂರ್ಣವಾಗಿ ವರನ ಮನೆಯವರೊಂದಿಗೆ ಸಂಪರ್ಕವನ್ನು ಕಡಿದುಕೊಂಡಿದ್ದಾರೆ ಎಂದು ಕೆಲವೊಂದು ಮೂಲಗಳಿಂದ ತಿಳಿದುಬಂದಿದೆ. ಇನ್ನೂ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿದೆ. ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದುಬರುತ್ತಿವೆ. ಅತಿಥಿಗಳನ್ನು ರಂಜಿಸಲು ಅಥವಾ ಮದುವೆಯ ಖುಷಿಯಿಂದ ವರ ನೃತ್ಯ ಮಾಡಿರಬಹುದು. ಮದುವೆಗಳಲ್ಲಿ ಈ ರೀತಿಯಲ್ಲಿ ನೃತ್ಯ ಮಾಡುವುದು ಸಹಜ ಅದರಲ್ಲಿ ತಪ್ಪೇನಿದೆ ಎಂದು ಅನೇಕರು ತಮ್ಮ ಅಭಿಪ್ರಾಯಗಳನ್ನು ಹರಿಬಿಡುತ್ತಿದ್ದಾರೆ.