ತಂತ್ರಜ್ಞಾನ ಹೆಚ್ಚಾಗುತ್ತಿದ್ದಂತೆ ಸೈಬರ್ ಕ್ರೈಂ ಸಹ ಹೆಚ್ಚಾಗುತ್ತಿದೆ. ಮೋಸ, ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಮೊಬೈಲ್ ಹ್ಯಾಕ್, ಮೊಬೈಲ್ ನಂಬರ್ ಹ್ಯಾಕ್ ಮಾಡುತ್ತಾರೆ. ಕೆಲವರಂತೂ ನಿಮಗೆ ಆಫರ್ ಬಂದಿದೆ ಎಂದು ಬ್ಯಾಂಕ್ ಖಾತೆಗೆ ಕನ್ನಾ ಹಾಕುತ್ತಾರೆ. ಇದರ ಜೊತೆಗೆ ಸೋಷಿಯಲ್ ಮಿಡಿಯಾ ಮೂಲಕ ವಂಚನೆ ಸಹ ಹೆಚ್ಚಾಗಿದೆ ಇದೀಗ ಮಕ್ಕಳಿಲ್ಲ ಮಹಿಳೆಯರನ್ನು ಗರ್ಭಿಣಿ ಮಾಡಿ ಭರ್ಜರಿ ಹಣ ಗಳಿಸಿ ಎಂಬ ಜಾಹಿರಾತೊಂದು (Viral Fake Advertisement) ಸಖತ್ ವೈರಲ್ ಆಗುತ್ತಿದೆ.
ಇತ್ತೀಚಿಗೆ ಸೋಷಿಯಲ್ ಮಿಡಿಯಾ ಹವಾ ತುಂಬಾನೆ ಇದೆ ಎನ್ನಲಾಗುತ್ತಿದೆ. ಸೋಷಿಯಲ್ ಮಿಡಿಯಾದಲ್ಲಿ ಫೇಜ್ ಜಾಬ್ ನೊಟಿಫಿಕೇಷನ್ ಗಳೂ ಸಹ ಹೆಚ್ಚಾಗಿ ಹರಿದಾಡುತ್ತಿವೆ. ಅಂತಹುದೇ ಜಾಹಿರಾತೊಂದು (Viral Fake Advertisement) ಭಾರಿ ವೈರಲ್ ಆಗುತ್ತಿದೆ. ವಂಚಕರಿಬ್ಬರು ಸೋಷಿಯಲ್ ಮಿಡಿಯಾದಲ್ಲಿ ಮಕ್ಕಳಿಲ್ಲದ ಮಹಿಳೆಯರನ್ನು ಗರ್ಭಿಣಿಯರನ್ನಾಗಿಸಿ, ಲಕ್ಷಗಟ್ಟಲೇ ಹಣ ಸಂಪಾದಿಸಿ ಎಂಬ ನಕಲಿ ಜಾಹಿರಾತುಗಳನ್ನು ನೀಡಿದ್ದಾರೆ. ಆ ಮೂಲಕ ಜನರ ಬಳಿ ಹಣ ದೋಚಲು ಮುಂದಾಗಿದ್ದಾರೆ. ಇಂತಹ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ (Viral) ಆಗುತ್ತಿದೆ.
ಇನ್ನೂ ಈ ಘಟನೆ ಹರಿಯಾಣದ ಸುಹ್ ಜಿಲ್ಲೆಯಲ್ಲಿ ನಡೆದಿದೆ. ವಂಚಕರಿಬ್ಬರು ಸೋಷಿಯಲ್ ಮಿಡಿಯಾದಲ್ಲಿ “ಮಕ್ಕಳಿಲ್ಲದ ಮಹಿಳೆಯರನ್ನು ಗರ್ಭಿಣಿಯನ್ನಾಗಿಸಿ, ಭರ್ಜರಿ ಹಣ ಗಳಿಸಿ” ಎಂಬ ಜಾಹಿರಾತನ್ನು ಹರಿಬಿಟ್ಟಿದ್ದಾರೆ. ಈ ಫೇಕ್ ಜಾಹಿರಾತಿನ (Viral Fake Advertisement) ಮೂಲಕ ಜನರಿಂದ ಹಣ ದೋಚುವ ಕೆಲಸಕ್ಕೆ ಇಳಿದಿದ್ದಾರೆ. ವಂಚಕರು ಈ ರೀತಿಯ ನಕಲಿ ಪೋಸ್ಟ್ ಗಳನ್ನು ಪೋಸ್ಟ್ ಮಾಡುತ್ತಾ ಜನರನ್ನು ಖೆಡ್ಡಾಗೆ ಬೀಳಿಸುತ್ತಿದ್ದರು. ಕೆಲವು ಮಹಿಳೆಯರು ನಕಲಿ ಪೊಟೋಗಳನ್ನು ಸೆಂಡ್ ಮಾಡಿ ಅವರಿಗೆ ಮಕ್ಕಳಿಲ್ಲ, ಅವರನ್ನು ಗರ್ಭಿಣಿಯಾಗಿಸಿದರೇ ಲಕ್ಷಗಟ್ಟಲೇ ಹಣ ನೀಡುತ್ತಾರೆ, ಅದಕ್ಕಾಗಿ ನೊಂದಣಿ ಹಾಗೂ ಫೈಲಿಂಗ್ ಶುಲ್ಕ ಪಾವತಿ ಮಾಡಬೇಕೆಂದು ಹೇಳಿ ಅಮಾಯಕರಿಂದ ಹಣ ದೋಚುತ್ತಿದ್ದರು.
ಮಳೆಗಾಲದ ರೈನ್ ಕೋಟ್ ಗಳನ್ನು ಖರೀದಿಸಲು ಲಿಂಕ್ ಕ್ಲಿಕ್ ಮಾಡಿ:
ಇನ್ನೂ ಈ ಸುದ್ದಿ ಪೊಲೀಸರ ಗಮನಕ್ಕೂ ಬಂದಿದ್ದು, ಈ ಜಾಹಿರಾತನ್ನು ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಬಳಿಕ ಈ ಜಾಹಿರಾತಿಗೆ (Viral Fake Advertisement) ಸಂಬಂಧೀಸಿದಂತೆ ತನಿಖೆ ಕೈಗೊಂಡ ಪೊಲೀಸರಿಗೆ ನಾಲ್ಕು ನಕಲಿ ಫೇಸ್ ಬುಕ್ ಖಾತೆಗಳು ಹಾಗೂ ಜಾಹಿರಾತುಗಳು ಪತ್ತೆಯಾಗಿದೆ. ಈ ಸಂಬಂಧ ಭಾರತೀಯ ದಂಡ ಸಂಹಿತೆಯ ಐದು ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿ ಎಜಾಜ್ ಹಾಗೂ ಇರ್ಷಾದ್ ಎಂಬ ಇಬ್ಬರನ್ನು ಬಂಧನ ಮಾಡಿದ್ದು, ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.