Sunday, October 26, 2025
HomeStateಬೆಂಗಳೂರಿನ ಮೆಟ್ರೋದಲ್ಲಿ ಚುಂಬಿಸಿಕೊಂಡ ಪ್ರೇಮಿಗಳು? ಜೋಡಿಯ ವರ್ತನೆಯ ವಿರುದ್ದ ತೀವ್ರ ಆಕ್ರೋಷ…..!

ಬೆಂಗಳೂರಿನ ಮೆಟ್ರೋದಲ್ಲಿ ಚುಂಬಿಸಿಕೊಂಡ ಪ್ರೇಮಿಗಳು? ಜೋಡಿಯ ವರ್ತನೆಯ ವಿರುದ್ದ ತೀವ್ರ ಆಕ್ರೋಷ…..!

ಸಾರ್ವಜನಿಕ ಪ್ರದೇಶಗಳಲ್ಲಿ ಕೆಲವೊಮ್ಮೆ ಪ್ರೇಮಿಗಳು ಮಾಡುವ ಕೆಲಸದಿಂದಾಗಿ ಇತರರಿಗೆ ಇರಿಸು ಮುರಿಸಾಗುತ್ತಿರುತ್ತದೆ. ಅದರಲ್ಲೂ ದೆಹಲಿಯ ಮೆಟ್ರೋದಲ್ಲಿ ಪ್ರೇಮಿಗಳ ಅಸಭ್ಯ ವರ್ತನೆಯ ವಿಡಿಯೋಗಳು, ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಹರಿದಾಡಿದೆ. ಇದೀಗ ಇದು ಬೆಂಗಳೂರಿನ ನಮ್ಮ ಮೆಟ್ರೋಗೂ ವ್ಯಾಪಿಸಿದೆ. ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರೇಮಿಗಳ ವರ್ತನೆಯ ಕಾರಣದಿಂದ ಇತರ ಪ್ರಯಾಣಿಕರಿಗೂ ಇರಿಸು ಮುರಿಸು ಉಂಟಾಗಿದೆ. ಅವರ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

lovers romance in bangalore metro 1

ಸೋಷಿಯಲ್ ಮಿಡಿಯಾದಲ್ಲಿ ದೇಶದ ರಾಜಧಾನಿ ದೆಹಲಿಯ ಮೆಟ್ರೋದಲ್ಲಿ ಕೆಲವರ ಅಸಭ್ಯ ವರ್ತನೆಯಂತ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹುದೇ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ನಮ್ಮ ಮೆಟ್ರೊದಲ್ಲಿ ಪ್ರಯಾಣಿಸುತ್ತಿರುವ ಯುವಕ ಹಾಗೂ ಯುವತಿ ಪರಸ್ಪರ ತಬ್ಬಿಕೊಂಡು ನಿಂತಿರುತ್ತಾರೆ. ಜೊತೆಗೆ ತಬ್ಬಿಕೊಂಡು ಯುವತಿಯನ್ನು ಯುವಕ ಸಂತೈಸುತ್ತಾನೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಆದರೆ ಇಬ್ಬರ ಮುಖವೂ ಕಾಣಿಸುವುದಿಲ್ಲ. ಈ ವಿಡಿಯೋ ಹಂಚಿಕೊಂಡ ವ್ಯಕ್ತಿ ತನ್ನ ಪೋಸ್ಟ್ ನಲ್ಲಿ ಯುವತಿ ಯುವಕನ್ನು ಚುಂಬಿಸಿದ್ದಾಳೆ ಎಂದು ಪೋಸ್ಟ್ ಮಾಡಿದ್ದಾರೆ.

https://twitter.com/Sam459om/status/1787134569872855179

ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. @Sam459om ಎಂಬ ಹ್ಯಾಂಡಲ್ ನ ವ್ಯಕ್ತಿಯೊಬ್ಬರು ತಮ್ಮ x ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಬೆಂಗಳೂರು ನಗರ ಪೊಲೀಸ್ ವಿಡಿಯೋ ಹಂಚಿಕೊಂಡ ವ್ಯಕ್ತಿಯ ಮಾಹಿತಿ ನೀಡುವಂತೆ ಕಾಮೆಂಟ್ ಮಾಡಿದೆ. ಜೊತೆಗೆ ಅನೇಕ ನೆಟ್ಟಿಗರು ಈ ವಿಡಿಯೋ ಬಗ್ಗೆ ಆಕ್ರೋಷ ಹೊರಹಾಕಿದ್ದಾರೆ. ಬರಬರುತ್ತಾ ಬೆಂಗಳೂರು ಮೆಟ್ರೋ ದೆಹಲಿ ಮೆಟ್ರೋ ಆಗಿ ಬದಲಾಗುತ್ತಿದೆ ಎಂದು ಟೀಕೆ ಮಾಡುತ್ತಿದ್ದಾರೆ.  ಕೆಲವು ದಿನಗಳ ಹಿಂದೆಯಷ್ಟೆ ದೆಹಲಿ ಮೆಟ್ರೋದಲ್ಲಿ ಸಾರ್ವಜನಿಕರ ಮುಂದೆ ಪ್ರೇಮಿಗಳು ಲಿಕ್ ಲಾಕ್ ಮಾಡಿಕೊಂಡಿದ್ದರು. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಬಳಿಕ ಯುವಕನೊಬ್ಬ ಮೆಟ್ರೋದಲ್ಲಿನ ಪ್ರಯಾಣಿಕರ ಮುಂದೆ ಹಸ್ತಮೈಥುನ ಮಾಡಿಕೊಂಡಿದ್ದ. ಅದೇ ಮಾದರಿಯಲ್ಲಿ ಇಬ್ಬರು ಯುವಕರು ಪರಸ್ಪರ ಹೊಡೆದಾಡಿಕೊಂಡ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular