ಕಾಲಿವುಡ್ ಸ್ಟಾರ್ ಕಾರ್ತಿ ಜೊತೆಗೆ ನಟಿಸಲಿದ್ದಾರಂತೆ ಕಿಸ್ ಬೆಡಗಿ ಶ್ರೀಲೀಲಾ, ವೈರಲ್ ಆದ ರೂಮರ್…..!

ಸ್ಯಾಂಡಲ್ ವುಡ್ ನಟಿ ಶ್ರೀಲೀಲಾ ಕಡಿಮೆ ಸಮಯದಲ್ಲೇ ತೆಲುಗು ಸಿನಿರಂಗದಲ್ಲಿ ಸ್ಟಾರ್‍ ನಟಿಯಾಗಿ ಫೇಂ ಪಡೆದುಕೊಂಡರು. ದೊಡ್ಡ ದೊಡ್ಡ ಸ್ಟಾರ್‍ ಗಳ ಸಿನೆಮಾಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ಪೆಳ್ಳಿ ಸಂದಡಿ ಎಂಬ ಸಿನೆಮಾದ ಮೂಲಕ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ರವಿತೇಜ ರವರ ಧಮಾಕಾ ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಂಡರು. ಬಳಿಕ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಸದ್ದು ಮಾಡಿದ್ದರು. ಆದರೆ ಇತ್ತೀಚಿಗೆ ತೆರೆಕಂಡ ಆಕೆಯ ಸಿನೆಮಾಗಳು ಫ್ಲಾಪ್ ಆದವು. ಆದರೂ ಸಹ ಆಕೆಯ ಕ್ರೇಜ್ ಕಡಿಮೆಯಾಗಿಲ್ಲ ಎನ್ನಬಹುದಾಗಿದೆ. ಇದೀಗ ಕಾಲಿವುಡ್ ಸ್ಟಾರ್‍ ನಟ ಕಾರ್ತಿ ಜೊತೆಗೆ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

Sreeleela will act in kollywood karthi movie 1

ಯಂಗ್ ಬ್ಯೂಟಿ ಶ್ರೀಲೀಲಾ ತನ್ನ ಭರ್ಜರಿ ಡ್ಯಾನ್ಸ್ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡರು. ಆಕೆಯ ಡ್ಯಾನ್ಸ್ ಅನ್ನು ಸ್ಟಾರ್‍ ನಟ ಮಹೇಶ್ ಬಾಬು ರವರೇ ಕೊಂಡಾಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಆಕೆ ಪುಲ್ ಬ್ಯುಸಿಯಾದರು. ಐದಾರು ಸಿನೆಮಾಗಳಿಗೆ ಆಕೆಯ ಕ್ರೇಜ್ ಸೀಮಿತವಾಯ್ತಾ ಎಂದು ಹೇಳಲಾಗುತ್ತಿದೆ. ಸಾಲು ಸಾಲು ಸೋಲುಗಳನ್ನು ಕಂಡ ಶ್ರೀಲೀಲಾ ಗೆ ಆಫರ್‍ ಗಳು ಕಡಿಮೆಯಾಗಿದೆ. ಈ ನಡುವೆ ಆಕೆ ಕಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಕೆಲವು ದಿನಗಳ ಹಿಂದೆ ಶ್ರೀಲೀಲಾ ಕಾಲಿವುಡ್ ಸ್ಟಾರ್‍ ನಟ ದಳಪತಿ ವಿಜಯ್ ಗ್ರೇಟೆಸ್ಟ್ ಆಫ್ ಆಲ್ ಟೈಮ್ ಎಂಬ ಸಿನೆಮಾದಲ್ಲಿನ ಐಟಂ ಸಾಂಗ್ ಗಾಗಿ ಶ್ರೀಲೀಲಾ ರವರನ್ನು ಸಂಪರ್ಕ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದೀಗ ಮತ್ತೊಂದು ರೂಮರ್‍ ಕಾಲಿವುಡ್ ಅಂಗಳದಲ್ಲಿ ವೈರಲ್ ಆಗಿದೆ.

Sreeleela will act in kollywood karthi movie 2

ಕೊನೆಯದಾಗಿ ಶ್ರೀಲೀಲಾ ಪ್ರಿನ್ಸ್ ಮಹೇಶ್ ಬಾಬು ಗುಂಟೂರು ಖಾರಂ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾ ಅಂದುಕೊಂಡಷ್ಟು ಸಕ್ಸಸ್ ಆಗಲಿಲ್ಲ. ಆದರೂ ಸಹ ಈ ಸಿನೆಮಾದಲ್ಲಿ ಶ್ರೀಲೀಲಾ ನೃತ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಸದ್ಯ ತೆಲುಗಿನಲ್ಲಿ ಆಫರ್‍ ಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಆಕೆ ಕಾಲಿವುಡ್ ನತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ. ಕಾಲಿವುಡ್ ಸ್ಟಾರ್‍ ನಟ ಕಾರ್ತಿ ಜೊತೆಗೆ ಶ್ರೀಲೀಲಾ ಡ್ಯುಯೆಟ್  ಹಾಡಲಿದ್ದಾರಂತೆ. ನಟ ಕಾರ್ತಿ ವಿಭಿನ್ನ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ. ಅವರ ಮುಂದಿನ ಸಿನೆಮಾಗಾಗಿ ಯಂಗ್ ಬ್ಯೂಟಿ ಶ್ರೀಲೀಲಾರನ್ನು ಸಂಪರ್ಕ ಮಾಡಿದ್ದು, ಆಕೆ ಈ ಸಿನೆಮಾ ಸೂಕ್ತ ಎಂದು ಚಿತ್ರತಂಡ ಭಾವಿಸಿದೆ. ಇನ್ನೂ ಚಿತ್ರತಂಡ ಕಥೆಯನ್ನು ಸಹ ಶ್ರೀಲೀಲಾಗೆ ಹೇಳಿದ್ದಾರೆ ಎನ್ನಲಾಗಿದೆ. ಆದರೆ ಆಕೆ ಒಪ್ಪಿಗೆ ನೀಡಿದ್ದಾರಾ ಅಥವಾ ರಿಜೆಕ್ಟ್ ಮಾಡಿದ್ರಾ ಎಂಬುದು ಇನ್ನಷ್ಟೆ ತಿಳಿದುಬರಬೇಕಿದೆ.

Leave a Comment

Your email address will not be published. Required fields are marked *

Scroll to Top