Love Dhoka – ಲವ್, ಸೆಕ್ಸ್, ದೋಖಾ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗಿ ಕೇಳಿಬರುತ್ತಿವೆ. ಪ್ರೀತಿ ಪ್ರೇಮಾ ಅಂತೆಲ್ಲಾ ನಾಟಕವಾಡಿ ಮೋಸ ಮಾಡುವಂತಹವರ ಸಂಖ್ಯೆ ಸಹ ಏರುತ್ತಿದೆ. ಇದೀಗ ಅಂತಹುದೇ ಘಟನೆಯೊಂದು ಚಾಮರಾಜನಗರದಲ್ಲಿ ನಡೆದಿದೆ ಎನ್ನಲಾಗಿದೆ. ಪ್ರೀತಿ ಪ್ರೇಮಾ ಎಂದು ನಾಟಕವಾಡಿ, ಆಕೆಯೊಂದಿಗೆ ಕಾಮದಾಹ ತೀರಿಸಿಕೊಂಡು, ಮೂರು ಬಾರಿ ಆಕೆಗೆ ಗರ್ಭಪಾತ ಮಾಡಿಸಿ, ಇದೀಗ ಆಕೆಗೆ ಕೈಕೊಟ್ಟು ಪರಾರಿಯಾಗಿದ್ದಾನೆ. ಇಲ್ಲೋಂದು ವಿಚಿತ್ರ ಇದೆ, ಈಗಾಗಲೇ ಮದುವೆಯಾದ ಯುವತಿಯನ್ನು ಪ್ರೀತಿಸಿದ ಆರೋಪಿ, ಆಕೆಯ ಗಂಡನಿಗೆ ಡಿವೋರ್ಸ್ ಕೊಡಿಸಿದ್ದಾನೆ. ಬಳಿಕ ಆಕೆಯೊಂದಿಗೆ 10 ತಿಂಗಳ ಸಂಸಾರ ಸಹ ಮಾಡಿದ್ದ, ಇದೀಗ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ.

ಚಾಮರಾಜನಗರ ಜಿಲ್ಲೆಯ ಜನೂರು ತಾಲೂಕಿನ ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕಳೆದ 2021ರಲ್ಲಿ ನರ್ಸಿಂಗ್ ಮಾಡುವ ಸಮಯದಲ್ಲಿ ಜಾನ್ ಪ್ರೆಸಿಲ್ಲಾ ಎಂಬ ಯುವತಿಗೆ ಕ್ಲಿಂಟನ್ ಎಂಬ ಯುವಕನ ಪರಿಚಯವಾಗಿದೆ. ಇಬ್ಬರೂ ಪ್ರೇಮ ಪಕ್ಷಿಗಳಂತೆ ಸುತ್ತಾಟ ಮಾಡಿದ್ದರು. ಈ ನಡುವೆ ಅವರಿಬ್ಬರ ಪ್ರೇಮ ವಿಚಾರ ಅವರ ಕುಟುಂಬಸ್ಥರಿಗೆ ತಿಳಿದಿದೆ. ನಂತರ ಪ್ರೆಸಿಲ್ಲಾ ಕುಟುಂಬಸ್ಥರು, ಕ್ಲಿಂಟನ್ ಮನೆಯವರಿಗೆ ವಿಚಾರ ತಿಳಿಸಿದ್ದರು. ಆದರೆ ಕ್ಲಿಂಟನ್ ಗೆ ಸಹೋದರಿಯಿದ್ದ ಕಾರಣ ಆಕೆಯ ಮದುವೆ ಆಗುವ ತನಕ ಕ್ಲಿಂಟನ್ ಮದುವೆ ಮಾಡಲು ಅವರ ಕುಟುಂಬಸ್ಥರು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು 2022 ರಲ್ಲಿ ತಮಿಳುನಾಡು ಮೂಲದ ಸ್ಟೀಫನ್ ರಾಝ್ ಎಂಬಾತನೊಂದಿಗೆ ಮದುವೆ ಮಾಡಿಸಿದ್ದರಂತೆ.
ಆದರೆ ಪ್ರೆಸಿಲ್ಲಾ ಳ ಮಾಜಿ ಪ್ರಿಯಕರ ಕ್ಲಿಂಟನ್ ತನ್ನ ದುರ್ಬುದ್ದಿ ತೋರಿಸಿದ್ದು, ಆಕೆಗೆ ಮದುವೆಯಾದ ಬಳಿಕವೂ ಪ್ರೆಸಿಲ್ಲಾಳ ಖಾಸಗಿ ಪೊಟೋಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಲು ಶುರುಮಾಡಿದ್ದನಂತೆ. ಪ್ರೆಸಿಲ್ಲಾ ಪತಿ ಸ್ಪೀಫನ್ ರಾಜ್ ಗೂ ಈ ಖಾಸಗಿ ಪೊಟೋಗಳನ್ನು ಕಳುಹಿಸಿ ಟಾರ್ಚರ್ ಕೊಡಲು ಶುರು ಮಾಡಿದ್ದಾನೆ. ಪತ್ನಿ ಹಾಗೂ ತನ್ನ ನಡುವಿಣ ಪ್ರೀತಿಯ ವಿಚಾರ ಗೊತ್ತಾದ ಬಳಿಕ ಸ್ಟೀಫನ್ ರಾಜ್ ಆಕೆಯನ್ನು ಮನೆಯಿಂದ ಹೊರಹಾಕಿದ್ದ. ಇದನ್ನು ಬಂಡವಾಳ ಮಾಡಿಕೊಂಡ ಕ್ಲಿಂಟನ್ ನೀನು ಸ್ಟೀಫನ್ ಗೆ ವಿಚ್ಚೇದನ ನೀಡಿ ಬಾ ನಾನು ಮದುವೆ ಆಗುತ್ತೇನೆ ಎಂದು ಪ್ರೆಸಿಲ್ಲಾಗೆ ಹೇಳಿದ್ದಾನೆ. ಅದರಂತೆ ಸ್ಟೀಫನ್ ಹಾಗೂ ಪ್ರೆಸಿಲ್ಲಾ ಡಿವೋರ್ಸ್ ಪಡೆದುಕೊಂಡಿದ್ದಾರೆ.
ನಂತರ ಮಾಜಿ ಪ್ರಿಯಕರ ಕ್ಲಿಂಟನ್ ತನ್ನ ದುರ್ಬುದ್ಧಿ ತೋರಿಸಿದ್ದಾನೆ. ವಿವಾಹದ ಬಳಿಕ ಕ್ಲಿಂಟನ್, ಪ್ರೆಸಿಲ್ಲಾಳ ಪ್ರೈವೇಟ್ ಫೋಟೊ ಹಿಡಿದು ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದ. ಪತಿ ಸ್ಟೀಫನ್ ರಾಜ್ ಗೂ ಪ್ರೆಸಿಲ್ಲಾಳ ಫೋಟೊ ಕಳುಹಿಸಿ ಟಾರ್ಚರ್ ಕೊಡಲು ಶುರು ಮಾಡಿದ್ದ. ಪತ್ನಿಯ ಲವ್ವಿ ಡವ್ವಿ ವಿಚಾರ ತಿಳಿದು ಸ್ಟೀಫನ್ ರಾಜ್ ಆಕೆಯನ್ನು ಮನೆಯಿಂದ ಹೊರಹಾಕಿದ್ದ. ಇದನ್ನೇ ಬಂಡವಾಳ ಮಾಡಿಕೊಂಡ ಕ್ಮಿಂಟನ್, ಪತಿ ಸ್ಟೀಫನ್ ಗೆ ವಿಚ್ಛೇದನ ನೀಡಿ ಬಾ ನಾನು ಮದ್ವೆ ಆಗುತ್ತೇನೆ ಎಂದು ಪ್ರೆಸಿಲ್ಲಾಗೆ ಹೇಳಿದ್ದಾನೆ. ಅದರಂತೆ ಸ್ಟೀಫನ್ ಹಾಗೂ ಪ್ರೆಸಿಲ್ಲಾ ನಡುವೆ ಡಿವೋರ್ಸ್ ಆಗಿದೆ.

ಇನ್ನೂ ಪ್ರೆಸಿಲ್ಲಾ ವಿಚ್ಚೇದನ ಪಡೆದುಕೊಂಡ ಬಳಿಕ ಮದುವೆಯಾಗುತ್ತೀನಿ ಎಂದಿದ್ದ ಕ್ಲಿಂಟನ್ ಮದುವೆಯಾಗದೇ ಆಕೆಯೊಂದಿಗೆ 10 ತಿಂಗಳುಗಳ ಕಾಲ ಸಂಸಾರ ನಡೆಸಿದ್ದ. ಈ ಸಮಯದಲ್ಲಿ ಪ್ರೆಸಿಲ್ಲಾ ಜೊತೆಗೆ ಲೈಂಗಿಕ ಸಂಪರ್ಕ ಬೆಳೆಸಿದ್ದ. ಈ ಕಾರಣದಿಂದ ಆಕೆ ಮೂರು ಬಾರಿ ಗರ್ಭಿಣಿಯಾಗಿದ್ದು, ಮೂರು ಬಾರಿ ಅಬಾರ್ಷನ್ ಕೂಡ ಮಾಡಿಸಿದ್ದ.. ಇನ್ನೂ ಫೆ.12 ರಂದು ಕೊಳ್ಳೆಗಾಲದಲ್ಲಿ ಕ್ಲಿಂಟನ್ ಹಾಗೂ ಪ್ರೆಸಿಲ್ಲಾಗೆ ರಿಜಿಸ್ಟರ್ ಮ್ಯಾರೇಜ್ ಫಿಕ್ಸ್ ಆಗಿತ್ತು. ಎಲ್ಲವೂ ಸರಿಯಿದೆ ಎಂದುಕೊಳ್ಳುವ ವೇಳೆಗೆ ಇತ್ತ ಕ್ಲಿಂಟನ್ ವರಸೆ ಬದಲಿಸಿದ್ದಾನೆ. ಕ್ಲಿಂಟನ್ ರಿಜಿಸ್ಟರ್ ಮ್ಯಾರೇಜ್ ಗೆ ಬರದೇ, ಪೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಇದೀಗ ಕ್ಲಿಂಟನ್ ನನ್ನು ನಂಬಿ ಮೋಸಹೋದ ಪ್ರೆಸಿಲ್ಲಾ ಆತನನ್ನು ಹುಡುಕಿಕೊಡಿ ಎಂದು ಕಣ್ಣಿರಾಕುತ್ತಿದ್ದಾಳೆ.