Love Dhoka: ಗಂಡನಿಗೆ ಡಿವೋರ್ಸ್ ಕೊಡಿಸಿ, ಮದುವೆಯಾದ ಪ್ರಿಯತಮ, ಮಗು ಹುಟ್ಟಿದ ಬಳಿಕ ಅವನು ಕೈ ಕೊಟ್ಟ….!

ಪ್ರೀತಿ, ಪ್ರೇಮ ಯಾರಿಗೆ ಯಾವಾಗ ಹುಟ್ಟುತ್ತದೆ ಎಂಬುದನ್ನು ಹೇಳೋಕೆ ಸಾಧ್ಯವಿಲ್ಲ. (Love Dhoka) ಪ್ರೀತಿಯ ಕಾರಣದಿಂದ ಅನೇಕ ಅಪರಾಧ ಪ್ರಕರಣಗಳು ನಡೆದಿದೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಹತ್ತು ವರ್ಷಗಳಿಂದ ಪ್ರೀತಿಸಿ ಮದುವೆಗೆ ಒಪ್ಪದ ಕಾರಣ ಯುವತಿ ಬೇರೊಬ್ಬನನ್ನು ಮದುವೆಯಾಗಿದ್ದಳು. (Love Dhoka)ಬಳಿಕ ಪ್ರಿಯಕರ ಮತ್ತೆ ಆಕೆಯಿಂದ ಗಂಡನಿಗೆ ಡೈವೊರ್ಸ್ ಕೊಡಿಸಿ ಮದುವೆಯಾಗಿದ್ದಾನೆ. ಬಳಿಕ ಹೆಣ್ಣು ಮಗು ಹುಟ್ಟಿದೆ ಎಂದು ಅವನು ಸಹ ಆಕೆಗೆ ಕೈ ಕೊಟ್ಟಿದ್ದಾನೆ. ಅಂದಹಾಗೆ ಈ ಘಟನೆ ಚಿಕ್ಕಬಳ್ಳಾಪುರದ ಪೇರೆಸಂದ್ರದಲ್ಲಿ (Love Dhoka) ನಡೆದಿದೆ ಎಂದು ತಿಳಿದುಬಂದಿದೆ.

ಚಿಕ್ಕಬಳ್ಳಾಪುರ ತಾಲೂಕಿನ ಪೇರೆಸಂದ್ರ ಗ್ರಾಮದ ರಹಮತ್ತುಲ್ಲಾ (Love Dhoka) ಎಂಬ ಯುವಕ, ಗುಡಿಬಂಡೆ ತಾಲೂಕಿನ ಚೆಂಡೂರು ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಯ ಬಲೆಗೆ ಬೀಳಿಸಿ ಸುಮಾರು ಹತ್ತು ವರ್ಷಗಳ ಕಾಲ ಪ್ರೀತಿಸಿ, ಲಿವಿನ್ ರಿಲೇಷನ್ ಶಿಪ್ ನಲ್ಲೂ ಸಹ ಸಹ ಇದ್ದ. (Love Dhoka)ಮದುವೆಗೆ ಒತ್ತಾಯಿಸಿದಾಗ ರಹಮತ್ತುಲ್ಲಾ ನಿರಾಕರಿಸಿದ್ದಾನೆ. ಈ ಹಿನ್ನೆಲೆಯ್ಲಲಿ ಆ ಯುವತಿ ಬೇರೊಬ್ಬ ವ್ಯಕ್ತಿಯೊಂದಿಗೆ ಮದುವೆಯಾಗಿದ್ದಳು. ಇದಾದರೂ ಸಹ ಬಿಡದ ಪಾಪಿ ರಹಮತ್, (Love Dhoka)ಯುವತಿಯನ್ನು ಬಿಡದೇ ಕಾಡಿದ್ದಾನೆ. ಆಕೆಯ ಗಂಡನ ಜೊತೆಗೆ ವಿಚ್ಚೇದನ ಕೊಡಿಸಿದ್ದಾನೆ. ಬಳಿಕ 5 ವರ್ಷಗಳ ಕಾಲ ಯುವತಿಯ ಜೊತೆ ಸಂಸಾರ ಮಾಡಿದ್ದಾನೆ.

ಬಳಿಕ (Love Dhoka) ಸಂತ್ರಸ್ತೆ ಹಾಗೂ ರಹಮತ್ತುಲ್ಲಾ ಗೆ ಹೆಣ್ಣು ಮಗು ಜನಿಸಿದೆ. ಇದೀಗ ಹೆಣ್ಣು ಮಗು ಜನಿಸಿದೆ ಅಂತಾ ಆಕೆಯನ್ನು ಬಿಟ್ಟು ಎಸ್ಕೇಪ್ ಆಗಿದ್ದಾನೆ. ಇದೀಗ ಸಂತ್ರಸ್ತೆಯ ಸ್ಥಿತಿ ಎಲ್ಲೂ ಇಲ್ಲದಂತಾಗಿದೆ. ಮದುವೆಯಾದ ಗಂಡನನ್ನು ಬಿಟ್ಟು ಹೋದಳೆಂಬ ಕಾರಣಕ್ಕೆ (Love Dhoka) ಆಕೆಯ ಪರವಾಗಿ ತವರು ಮನೆಯವರೂ ಸಹ ಬರುತ್ತಿಲ್ಲ. ಇತ್ತ ರಹಮತ್ತುಲ್ಲಾ ಸಹ ನಾಪತ್ತೆಯಾಗಿದ್ದಾನೆ. ಇದೀಗ ನೊಂದ ವಿವಾಹಿತೆ ದಿಕ್ಕು ತೋಚದಂತಾಗಿ ಪೇರೆಸಂದ್ರ ಪೊಲೀಸರ ಮೊರೆ ಹೋಗಿ, ನ್ಯಾಯ ಕೊಡಿಸುವಂತೆ ಅಂಗಲಾಚಿದ್ದಾಳೆ. ಯಾಕಾದರೂ ಪ್ರೀತಿಯಲ್ಲಿ ಬಿದ್ದು ಈ ನೋವು ಪಡಬೇಕಾಯ್ತು ಎಂದು, (Love Dhoka) ಪುಟ್ಟ ಕಂದಮ್ಮನನ್ನು ಹೊತ್ತುಕೊಂಡು ಕಣ್ಣಿರುಡುತ್ತಿದ್ದಾಳೆ.

Leave a Comment

Your email address will not be published. Required fields are marked *

Scroll to Top