Love Failure – ಪ್ರೀತಿಸಿದ ಹುಡುಗಿಯು ಕೈಕೊಟ್ಟ ನೋವಿಗೆ ಯುವಕನೊಬ್ಬ ತನ್ನ ಪ್ರಾಣವನ್ನೇ ತ್ಯಜಿಸಿದ ದಾರುಣ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ನಡೆದಿದೆ. ಯುವಕ ಶಶೀಧರ್ (25) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಸುಮಾರು ವರ್ಷಗಳಿಂದ ಮೃತ ಯುವಕ ಬ್ಯಾಡಗಿಯ ನಿವಾಸಿ ಚಂದ್ರಕಲಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಇಬ್ಬರೂ ಪರಸ್ಪರ ಪ್ರೀತಿಸಿಕೊಳ್ಳುತ್ತಾ, ಪಾರ್ಕ್, ದೇವಸ್ಥಾನ ಸೇರಿದಂತೆ ಅನೇಕ ಕಡೆ ಸುತ್ತಾಡಿದ್ದಾರೆ. ಇದೀಗ ಜಾತಿ ಕಾರಣದಿಂದ ಯುವತಿ ಆತನನ್ನು ದೂರ ಇಟ್ಟಿದ್ದಕ್ಕಾಗಿ ಮನನೊಂದ ಯುವಕ ನೇಣಿಗೆ ಶರಣಾಗಿದ್ದಾನೆ ಎಂದು ಹೇಳಲಾಗಿದೆ.

Love Failure – ಘಟನೆಯ ಹಿನ್ನೆಲೆ:
ಮೃತ ಶಶಿಧರ್ ಮತ್ತು ಚಂದ್ರಕಲಾ ಇಬ್ಬರೂ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ನಿವಾಸಿಗಳು. ಇವರು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪಾರ್ಕ್, ದೇವಸ್ಥಾನಗಳಲ್ಲಿ ಸೇರಿ ಸುತ್ತಾಡುತ್ತಿದ್ದರು. ಆದರೆ ಅದೇನಾಯ್ತೋ ಏನೋ ಇದ್ದಕ್ಕಿಂದ್ದಂತೆ ಶಶಿಧರ್ ಜೊತೆಗೆ ಬ್ರೇಕಪ್ ಮಾಡಿಕೊಳ್ಳಲು ಚಂದ್ರಕಲಾ ಮುಂದಾಗಿದ್ದಾಳೆ. ಇದರಿಂದ ಮನನೊಂದ ಶಶಿಧರ್ ಕಳೆದ ಜನವರಿ 26ರಂದು ಮನೆ ಬಿಟ್ಟು ಹೋಗಿ, ಮಾರನೇ ದಿನ ಬ್ಯಾಡಗಿ ಬಳಿಯ ಕದರಮಂಡಲಿ ರಸ್ತೆಯ ಹತ್ತಿರ ಮರದ ಕೊಂಬೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನೂ ಶಶಿಧರ್ ಆತ್ಮಹತ್ಯೆಗೆ ಚಂದ್ರಕಲಾ ನೇ ಕಾರಣ ಎಂದು ಶಶಿಧರ್ ಪೋಷಕರು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
Love Failure – ಪೋಷಕರ ಆರೋಪ:
ಇನ್ನೂ ತನ್ನ ಮಗನ ಸಾವಿಗೆ ಚಂದ್ರಕಲಾ ಕಾರಣ ಎಂದು ಶಶಿಧರ್ ತಾಯಿ ಹುಲಿಗೆಮ್ಮ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೊದಲಿಗೆ ಶಶಿಧರ್ ಸಾವಿನಲ್ಲಿ ಯಾವುದೇ ಅನುಮಾನ ಇಲ್ಲ ಎಂದುಕೊಂಡಿದ್ದರು. ಆದರೆ ಮೃತ ಶಶಿಧರ್ ಮೊಬೈಲ್ ಪರಿಶೀಲನೆ ನಡೆಸಿದಾಗ ಪೋಷಕರಿಗೆ ಶಾಕ್ ಆಗಿತ್ತು. ಮೊಬೈಲ್ ನಲ್ಲಿ ಶಶಿಧರ್ ಯುವತಿಯೊಬ್ಬಳ ಜೊತೆಗೆ ಸಮಯ ಕಳೆದಂತಹ ಪೊಟೋಗಳು, ಕಾಲ್ ರೆಕಾರ್ಡ್‌ಗಳು, ಕೆಲವೊಂದು ವಿಡಿಯೋಗಳು ಪತ್ತೆಯಾಗಿದ್ದವು. ನಂತ ಶಶಿಧರ್ ಸ್ನೇಹಿತರ ಬಳಿ ವಿಚಾರಿಸಿದಾಗ ಶಶಿಧರ್ ಹಾಗೂ ಚಂದ್ರಕಲಾ ಪ್ರೀತಿಯ ವಿಚಾರ ಗೊತ್ತಾಗಿದೆ. ಬಳಿಕ ಶಶಿಧರ್ ಪೋಷಕರು ಯುವತಿಯ ವಿರುದ್ದ ದೂರು ದಾಖಲಿಸಿದ್ದಾರೆ.
Love Failure – ನ್ಯಾಯಕ್ಕಾಗಿ ಹೋರಾಟ
ಇನ್ನೂ ಮೃತ ಶಶಿಧರ್ ತಾಯಿ ಹುಲಿಗೆಮ್ಮಾ ಚಂದ್ರಕಲಾ ವಿರುದ್ದ ಅಟ್ರಾಸಿಟಿ ಕೇಸ್ ದಾಖಲು ಮಾಡಿದ್ದಾರೆ. ತಮ್ಮ ಪುತ್ರ ಶಶಿಧರ್ ಕೆಳಜಾತಿಯವನು ಎಂದು ಹೇಳಿ ಆತನ ಆತ್ಮಹತ್ಯೆಗೆ ಕಾರಣವಾಗಿದ್ದಾಳೆ. ಶಶಿಧರ್ ಆತ್ಮಹತ್ಯೆಗೆ ಚಂದ್ರಕಲಾ ಕಾರಣವಾಗಿದ್ದಾಲೆ. ಈಗಾಗಲೇ ಈ ಕುರಿತು ದೂರು ನೀಡಲಾಗಿದೆ. ಆದರೆ ಇಲ್ಲಿಯವರೆಗೂ ಆರೋಪಿ ಚಂದ್ರಕಲಾ ವಿರುದ್ದ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ನೋವು ತೋಡಿಕೊಂಡಿದ್ದಾರೆ.