Local News – ಶಿಕ್ಷಣದ ಜೊತೆಗೆ ದೇಶ ಭಕ್ತಿ, ನಾವು ಜನಿಸಿರುವ ಭೂತಾಯಿ ಭಾರತಾಂಭೆಯ ಸೇವೆಯಲ್ಲಿ ತೊಡಗಿಸಿಕೊಳ್ಳುವುದನ್ನು ವಿದ್ಯಾರ್ಥಿಧೆಸೆಯಿಂದಲ್ಲೇ ರೂಢಿಸಿಕೊಳ್ಳುವಂತೆ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶರಾದ ಡಿ.ಕೆ.ಮಂಜುನಾಥಚಾರಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಯಂಗ್ ಇಂಡಿಯಾ ಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ ಯಂಗ್ ಇಂಡಿಯಾ ಶಾಲೆಯ 31ನೇ ವಾರ್ಷಿಕೋತ್ಸವ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಾಲೆಯಲ್ಲಿ ಕಲಿತ ವಿದ್ಯೆ ಸಮಾಜದ ಏಳಿಗೆಗಾಗಿ ಶ್ರಮಿಸುವುದರಲ್ಲಿ ತೊಡಗಿಸಿಕೊಳ್ಳಬೇಕು. ಹೆತ್ತ ತಂದೆ ತಾಯಿ ಕಷ್ಟಪಟ್ಟು ಸಾಲಸೋಲ ಮಾಡಿ ನಮ್ಮ ಮಕ್ಕಳು ಒಳ್ಳೆ ವಿದ್ಯಾವಂತರಾಗಬೇಕು, ನಮ್ಮ ರೀತಿಯಲ್ಲಿ ಕೂಲಿನಾಲಿ ಮಾಡಬಾರದು, ಕಷ್ಟಗಳನ್ನು ಅನುಭವಿಸಬಾರದು ಎನ್ನುವ ಕನಸು ಕಾಣುತ್ತಾರೆ. ನಮ್ಮ ಹೆತ್ತವರ ಕನಸು ನೆನಸು ಮಾಡುವುದು ನಮ್ಮ ಕರ್ತವ್ಯವಾಗಿದೆ ಆದರೆ ಕೇವಲ ನಮ್ಮ ಕುಟುಂಬ, ಹೊಟ್ಟೆಪಾಡಿಗೆ ಜೀವನಕ್ಕೆ ಸೀಮಿತಗೊಳಿಸದೆ ದೇಶದ ಯಾವುದೇ ಮೂಲೆಯಲ್ಲಿದ್ದರು ದೇಶದ ಅಭಿವೃದ್ದಿಗಾಗಿ ದುಡಿಯುವಂತಹ ಮನೋಭಾವವನ್ನು ಬಾಲ್ಯದಿಂದಲ್ಲೇ ಮೈಗೂಡಿಸಿಕೊಳ್ಳಬೇಕೆಂದರು.

ಒಬ್ಬ ವ್ಯಕ್ತಿಯ ಬದುಕಿನಲ್ಲಿ ಶಿಕ್ಷಣ ಎಷ್ಟು ಮುಖ್ಯವೂ ಜನ್ಮಭೂಮಿಯ ಸೇವೆ ಮಾಡುವುದು ಸಹ ಸಹ ಅಷ್ಟೇ ಮುಖ್ಯ. ಐಎಎಸ್, ಐಪಿಎಸ್ ಸೇರಿದಂತೆ ಯಾವುದೇ ಉನ್ನತ ಹುದ್ದೆ ಮಾತ್ರವಲ್ಲದೆ ರೈತ, ಉದ್ದಮಿ,ಕೂಲಿ ಕಾರ್ಮಿಕ, ವ್ಯಾಪಾರಿ ಸೇರಿದಂತೆ ಯಾವುದೇ ಸಣ್ಣ ಕೆಲಸ ಆದರೂ ಸಹ ಅದರಲ್ಲಿ ಏಳಿಗೆ,ಪ್ರಾಭಲ್ಯಗೊಳಿಸಲು ನಿಷ್ಠೆ ಪ್ರಮಾಣಿಕತೆಯಿಂದ ಇರಬೇಕು ಆಗ ಮಾತ್ರ ಕುಟುಂಬ ಮಾತ್ರವಲ್ಲದೆ ದೇಶದ ಅಭಿವೃದ್ದಿ ಹೊಂದಲು ಸಾದ್ಯವಾಗುತ್ತೆ. ಬಾಲ್ಯದಿಂದಲ್ಲೇ ಶಿಸ್ತು, ಸಂಯಮ, ಬಡವ ಶ್ರೀಮಂತ ಸೇರಿದಂತೆ ಯಾವುದೇ ವಿಚಾರದಲ್ಲಿ ಬೇಧಭಾವ ತೋರಬಾರದು, ಅಹಃ ಇರಬಾರದು, ಇತರರನ್ನು ಟೀಕೆ ಮಾಡುವಂತಹ ಗುಣ ಬೆಳಸಿಕೊಳ್ಳಬಾರದು, ಶಿಕ್ಷಕರು ಹೇಳಿಕೊಡುವ ಪಾಠ್ಯದ ಕಡೆ ಗಮನಹರಿಸಬೇಕು, ಅಂಕಗಳಿಕೆಯಿಂದಲ್ಲೇ ನಾವು ಉದ್ದಾರ ಆಗುತ್ತೇವೆ ಎಂದುಕೊಳ್ಳುವುದು ಮೂರ್ಖತನ. ಶಿಕ್ಷಣ ಕೇವಲ ನಮ್ಮ ಅಭಿವೃದ್ದಿಗೆ ಮಾತ್ರವಲ್ಲ ನಮ್ಮನ್ನು ನಾವು ತಿದ್ದುಕೊಳ್ಳುವುದಕ್ಕೆ, ಸಮಾಜದಲ್ಲಿ ನಡೆಯುವ ತಪ್ಪುಗಳನ್ನು ಸರಿಪಡಿಸುವುದಕ್ಕೆ ಎಂದ ಅವರು ದೇಶಕ್ಕೆ ನಮ್ಮದೇ ಆಗಿರುವ ಕೊಡೆಗೆಯನ್ನು ನೀಡುವಂತಹ ಪ್ರಾಮಾಣಿಕ ಪ್ರಯತ್ನಕ್ಕೆ ಮುಂದಾಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಯಂಗ್ ಇಂಡಿಯಾ ಶಾಲೆ ಸಂಸ್ಥಾಪಕರಾದ ಪ್ರೋ. ಡಿ.ಶಿವಣ್ಣ ಮಾತನಾಡಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದೇ ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದ ಅವರು ಕಳೆದ 30 ವರ್ಷಗಳಿಂದಲ್ಲೂ ನಮ್ಮ ಶಾಲೆಯಲ್ಲಿ 10ನೇ ತರಗತಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ನೀಡುತ್ತಾ ಬಂದಿದೆ ಇದಕ್ಕೆ ಕಾರಣರಾದ ಶಾಲೆಯ ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಅಭಿನಂಧಿನೆಗಳನ್ನು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ ಮಾತನಾಡಿ, ಮಕ್ಕಳು ಮೊಬೈಲ್ ಬಿಟ್ಟು ಪುಸ್ತಕಗಳನ್ನು ಓದುವುದನ್ನು ಅಭ್ಯಾಸ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಅವರು ಪೋಷಕರು ತಮ್ಮ ಮಕ್ಕಳ ಚಟುವಟಿಕೆ, ನಡುವಳಿಕೆ ಇತ್ಯಾಧಿಗಳ ಕಡೆ ಗಮನಹರಿಸಬೇಕು, ಮಕ್ಕಳಿಗೆ ಕಷ್ಟ, ನೋವು, ಭಯ ಭೀತಿ ಇತ್ಯಾಧಿಗಳನ್ನು ಪರಿಚಯಿಸಬೇಕು ಹಾಗೂ ಸಮಾಜದಲ್ಲಿ ಬದುಕುವ ದಾರಿಯನ್ನು ತೋರಿಸಬೇಕು ಎಂದು ಪೋಷಕರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಹಾಗೂ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎ.ನಂಜುಂಡಪ್ಪ, ಬೆಂಗಳೂರಿನ ಕಲ್ಪವೃಕ್ಷ ಕಟ್ಟಡ ಪುನಃಸ್ಥಾಪನ ಗುತ್ತಿಗೆದಾರರುಹಾಗೂ ಇಂಜಿನಿಯರ್ ಆಗಿರುವ ಟಿ. ತುಳಸಿ ಪ್ರಸಾದ್, ವಕೀಲರಾದ ಬಾಲು ನಾಯಕ್, ಶಾಲೆಯ ಮುಖ್ಯ ಶಿಕ್ಷಕಿ ಆರ್. ಕಲ್ಪನಾ ಪ್ರಸಾದ್ ಮತ್ತಿತರರು ಇದ್ದರು.