Tuesday, July 1, 2025
HomeStateLocal News: ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು: ನ್ಯಾ.ಮಂಜುನಾಥಚಾರಿ

Local News: ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು: ನ್ಯಾ.ಮಂಜುನಾಥಚಾರಿ

Local News  – ನಮ್ಮ ಸುತ್ತಮುತ್ತ ಸ್ವಚ್ಚಗೊಳಿಸಿ ಪರಿಸರವನ್ನು ಕಾಪಾಡುವ ಮೂಲಕ ಸ್ವಚ್ಚಭಾರತದ ಕನಸು ಕಂಡಿದ್ದ ರಾಷ್ಟ್ರಪಿತ ಮಹಾತ್ಮಗಾಂಧಿಜೀರವರ ಕನಸು ನೆನಸು ಮಾಡುವ ಹಾಗೂ ರೋಗಮುಕ್ತ ಭಾರತದ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈಜೋಡಿಸುವಂತೆ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಮಂಜುನಾಥಚಾರಿ ರವರು ಕರೆ ನೀಡಿದರು.

swachata abhiyana scaled

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ, ಪುರಸಭೆ, ಪೊಲೀಸ್ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ರಾಷ್ಟ್ರೀಯ ಹುತಾತ್ಮರ ದಿನಾಚರಣೆ ಹಾಗೂ ರಾಷ್ಟ್ರೀಯ ಸ್ವಚ್ಚತಾ ದಿನಾಚರಣೆ ಅಂಗವಾಗಿ  ಸ್ವಚ್ಚತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜಾಥ ಕಾರ್ಯಕ್ರಮಕ್ಕೆ ಸ್ವಚ್ಚತೆಗೊಳಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು  ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಶಾಂತಿ ಮತ್ತು ಅಹಿಂಸೆ ಮಾರ್ಗದಲ್ಲಿ ಹೋರಾಟ ನಡೆಸಿ ಸ್ವಾತಂತ್ರ್ಯತಂದುಕೊಟ್ಟ ರಾಷ್ಟ್ರಪಿತ ಮಹಾತ್ಮಗಾಂಧಿಜೀ ರವರು ಸ್ವಚ್ಚಭಾರತದ ಕನಸು ಕಂಡಿದ್ದರು.

ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿಧಾನ ಮಾಡಿರುವ ಸ್ವಾತಂತ್ರ ಹೋರಾಟಗಾರರು ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಸ್ವೇಚ್ಚ ಜೀವನ ಮಾಡಲಿಕ್ಕಲ್ಲ, ಯಾವುದೇ ವ್ಯಕ್ತಿ ಪ್ರಾಣಿ ಪಕ್ಷಿಗಳ ರೀತಿಯಲ್ಲಿ ಎಲ್ಲೋತಿಂದು ಬದುಕು ಸಾಗಿಸುವುದಕ್ಕೆಲ್ಲ,  ಸಂವಿಧಾನದ ಅಡಿಯಲ್ಲಿ  ದೇಶದ ಜನತೆಗೆ ವ್ಯಕ್ತಿ ಸ್ವಾತಂತ್ರ್ಯ ಕಲ್ಪಿಸಿದೆ. ಮನುಷ್ಯ ವಿಚಾರ ಶಕ್ತಿವುಳ್ಳವನಾಗಿರುತ್ತಾನೆ. ನಮ್ಮ ದೇಶದಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳುವುದು, ದೇಶದ ಕಾನೂನುಗಳನ್ನು ಗೌರವಿಸಿ ಜೀವನ ಮಾಡುವುದಕ್ಕಾಗಿ ಎಂಬುದನ್ನು ನಾವು ಅರಿಯಬೇಕಾಗಿದೆ ಎಂದರು. ಮನಸು, ದೇಹ ಮತ್ತು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿ ಇಟ್ಟಿಕೊಂಡಾಗ ಮಾತ್ರ ನಮ್ಮ ದೇಶ ಸುಭದ್ರವಾಗಿ ಹಾಗೂ ಸ್ವಚ್ಚವಾಗಿರುತ್ತೆ. ಎಲ್ಲಿ ಸ್ವಚ್ಚವಾಗಿರುತ್ತೋ ಅಲ್ಲಿ ದೇವರು ನೆಲಸುತ್ತಾರೆ. ಈ ನಿಟ್ಟಿನಲ್ಲಿ ಗಾಂಧಿಜೀ ರವರ ಕನಸು ಕನಸಾಗಿ ಉಳಿಸದೆ ನಮ್ಮಲ್ಲಿರುವ ಶಕ್ತಿ ಯುಕ್ತಿ ಬಳಕೆ ಮಾಡಿ ಸ್ವಚ್ಚಗೊಳಿಸಿ ಪರಿಸರವನ್ನು ಕಾಪಾಡುವ ಮೂಲಕ ಗಾಂಧಿಜೀ ರವರ ಕನಸು ನೆನಸು ಮಾಡಬೇಕಾಗಿರುವುದು ದೇಶದ ಪ್ರತಿಯೊಬ್ಬ ಕರ್ತವ್ಯ ಎಂದರು.

ಬಳಕೆಯಾಗುವ ಅಗತ್ಯ ವಸ್ತುಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಕಸವನ್ನು ಮಾತ್ರ ಎಲ್ಲೆಂದರಲ್ಲಿ ಬಿಸಾಡುವುದರಿಂದ ದೇಶ ಉದ್ದಾರವಾಗಲ್ಲ ಎಂದರು. ಕಸವನ್ನು ನಮ್ಮಲ್ಲಿ ಲಕ್ಷ್ಮೀ ಎಂಬುದಾಗಿ ಪೂಜೆ ಸಲ್ಲಿಸುತ್ತಾರೆ. ದೇಶದ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ತಿಪ್ಪೆಗೆ ಪೂಜೆ ಸಲ್ಲಿಸುವ ಪದ್ದತಿ ಸಂಸ್ಕøತಿ ಇದೆ.  ಕಸವನ್ನು ಆಚೆಗೆ ಎಸೆದಾಗ ಲಕ್ಷ್ಮೀಯನ್ನಯ ಹೊರಗಡೆಗೆ ಹಾಗಿದ್ದಂತೆ. ಹಣ ಸಂಪತ್ತು ಇತ್ಯಾಧಿ ಲಾಭ ತರುವ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವ ರೀತಿ ಕಸವನ್ನು ಸಹ ವ್ಯವಸ್ಥಿತವಾಗಿ ವಿಲೇವರಿ ಮಾಡಬೇಕಾಗುತ್ತೆ ಎಂದ ಅವರು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚತೆಯಿಂದ ಇಟ್ಟುಕೊಂಡಾಗ ಮಾತ್ರ   ಉತ್ತಮ ಆರೋಗ್ಯವನ್ನು ಹೊಂದಲು ಸಾಧ್ಯವಾಗುತ್ತೆ ಎಂದರು.

ನಂತರ ವಿವಿಧ ಇಲಾಖೆ ಅಧಿಕಾರಿಗಳು ಸೇರಿದಂತೆ ಶಾಲಾ ಮಕ್ಕಳು ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಸ್ವಚ್ಚತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ  ವಕೀಲರ ಸಂಘದ ಅಧ್ಯಕ್ಷ ಎ.ನಂಜುಂಡಪ್ಪ, ಹಿರಿಯ ವಕೀಲರಾದ ಜೆ.ಎನ್.ನಂಜಪ್ಪ, ಕರುಣಾಸಾಗರರೆಡ್ಡಿ, ಅಲ್ಲಾಭಕಾಷ್, ಅಪ್ಪಿಸ್ವಾಮಿರೆಡ್ಡಿ, ನರಸಿಂಹರೆಡ್ಡಿ, ಸಹಾಯ ಅಭಿಯೋಜಕರಾದ ಚಿನ್ನಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು ಇದ್ದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

1 COMMENT

LEAVE A REPLY

Please enter your comment!
Please enter your name here

- Advertisment -

Most Popular