Local News: ಕೈವಾರ ತಾತಯ್ಯ ದೇವಾಲಯದ ನಿರ್ಮಾಣಕ್ಕೆ ಭೂಮಿ ಪೂಜೆ….!

ಗುರುವಿನ ಅನುಗ್ರಹದಿಂದ ಮಾತ್ರ ಮಾನವ ಜನ್ಮ ಸಾರ್ಥಕವಾಗಲು ಸಾಧ್ಯ, ಮಾನವ ಜನ್ಮ ವ್ಯರ್ಥ ಮಾಡಿಕೊಳ್ಳದೆ ಸದುಪಯೋಗ ಮಾಡಿಕೊಳ್ಳಿ ಎಂದು  ಶ್ರೀ ಕೈವಾರ ತಾತಯ್ಯ ಸೇವಾ ಟ್ರಸ್ಟ್‍ನ ಧರ್ಮಾಧಿಕಾರಿಗಳಾದ ಎಂ.ಆರ್.ಜಯರಾಂ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪರಗೋಡು ಗ್ರಾ.ಪಂ ವ್ಯಾಪ್ತಿಯ ಕೊತ್ತಕೋಟೆ ಗ್ರಾಮದಲ್ಲಿ ಯೋಗಿ ನಾರೇಯಣ ಸೇವಾ ಟ್ರಸ್ಟ್‍ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಕೈವಾರ ತಾತಯ್ಯ ನವರ (Local News) ದೇವಾಲಯ ನಿರ್ಮಾಣಕ್ಕೆ ಶ್ರೀ ಕೈವಾರ ತಾತಯ್ಯ ದೇವಾಲಯದ  ಧರ್ಮಾಧಿಕಾರಿ ಎಂ.ಆರ್.ಜಯರಾಂ ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭೂಮಿ ಪೂಜೆ ನೆರವೇರಿಸಿದರು.

Kaiwara tataiah Temple 0

ಮಾನವ ಜನ್ಮ ವ್ಯರ್ಥವಾಗದೆ ಸದುಪಯೋಗಮಾಡಿಕೊಳ್ಳಬೇಕಾದರೆ ಗುರುವಿನ ಅನುಗ್ರಹ ಬೇಕು. ನಮ್ಮಲ್ಲಿರುವ ಅಜ್ಞಾನವನ್ನು ತೊಲಗಿಸಿ ಜ್ಞಾನವನ್ನು ದಯಪಾಲಿಸುವ ಶಕ್ತಿ ಗುರುವಿಗೆ ಮಾತ್ರವಿದೆ. ಮನುಷ್ಯನ ಬದುಕಿನಲ್ಲಿ ಮಾಯೆ ಬಹು ಮಹತ್ವದ ಪಾತ್ರವಹಿಸುತ್ತೆ. ಮಾಯೆಯ ಪೊರೆ ಕಳಚಿದರೆ ಮಾತ್ರ ನಿಜ ಬದುಕಿನ ಮರ್ಮ ತಿಳಿಯುತ್ತದೆ ಇದರಿಂದ  ಗುರುಗಳಲ್ಲಿ ಅನನ್ಯ ಭಕ್ತಿಯಿಂದ ಶರಣಾಗಿತಿಯಾದರೆ ನಮ್ಮ ಮುಂದಿನ  ಬದುಕಿನ ದಾರಿ ಅವರೇ ತೋರಿಸುತ್ತಾರೆ ಎಂದ ಅವರು  ಇಲ್ಲಿ ನಿರ್ಮಾಣವಾಗುತ್ತಿರುವ ತಾತಯ್ಯನವರ ದೇವಾಲಯಕ್ಕೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ ಕೈವಾರ ತಾತಯ್ಯನವರು ತಮ್ಮ ಕಾಲಜ್ಞಾನದಲ್ಲಿ ತಿಳಿಸಿದ ಬಹುತೇಕ ಅಂಶಗಳು ನಿಜವಾಗಿವೆ ಇಂತಹ ಮಹನೀಯರನ್ನು ಯಾವುದೇ ಕಾರಣಕ್ಕೂ ಒಂದು ಜಾತಿ ಧರ್ಮಕ್ಕೆ ಸೀಮಿತಗೊಳಸದೆ ಅವರು ನೀಡಿರುವ ಸಂದೇಶಗಳು, ತತ್ವ ಸಿದ್ದಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದ ಅವರು ಕೈವಾರ ತಾತಯ್ಯನವರ ದೇವಾಲಯದ ಧರ್ಮಧಿಕಾರಿ ಎಂಎಆರ್ ಜಯರಾಂ ರವರ ಸೇವಾ ಕಾರ್ಯದಲ್ಲಿ ಹಾಗೂ ದೇವಾಲಯ ನಿರ್ಮಾಣದಲ್ಲಿ ನಾನೂ ಸಹ ಕೈಜೋಡಿಸುವುದಾಗಿ ತಿಳಿಸಿದರು.

Kaiwara tataiah Temple 1

ಈ ಸಂದರ್ಭದಲ್ಲಿ  ಶ್ರೀಯೋಗಿ ನಾರೇಯಣ ಟ್ರಸ್ಟ್‍ನ ಸದಸ್ಯ ನರಸಿಂಹಪ್ಪ, ಬಿಲಿಜ ಸಂಘದ ಅಧ್ಯಕ್ಷ ಬಿ.ಎನ್.ಶ್ರೀನಿವಾಸ್, ರಾಜ್ಯ ಸಹಕಾರಿ ಸಂಘದ ಕಾರ್ಯದರ್ಶಿ ಹೆಚ್.ವಿ.ನಾಗರಾಜ್, ಪುರಸಭೆ ಉಪಾಧ್ಯಕ್ಷ ಸುಜಾತ ನರಸಿಂಹನಾಯ್ಡು, ಪುರಸಭೆ ಮಾಜಿ ಸದಸ್ಯ ಅಪ್ಪಯ್ಯ ಬಾಬು, ವಕೀಲರಾದ ಎ.ಜಿ.ಸುಧಾಕರ್, ಸತ್ಯಸಾಯಿ ವಿದ್ಯಾಸಂಸ್ಥೆ ಅಧ್ಯಕ್ಷ ವೈ.ಶ್ರೀನಿವಾಸರೆಡ್ಡಿ ಸೇರಿದಂತೆ ಯೋಗಿನಾರಾಯಣ ಭಜನಾ ಮಂಡಳಿ ಸದಸ್ಯರು ಸೇರಿದಂತೆ ಟ್ರಸ್ಟ್‍ನ ಪದಾಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *

Next Post

Wacth : ಬಂದೂಕು ತೋರಿಸಿ ಕಳ್ಳತನ ಮಾಡಲು ಯತ್ನ, ಕಳ್ಳನಿಗೆ ಸರಿಯಾಗಿ ಪಾಠ ಕಲಿಸಿದ ಮಹಿಳೆ, ವೈರಲ್ ಆದ ವಿಡಿಯೋ…!

Thu Nov 7 , 2024
Wacth: ಸೋಷಿಯಲ್ ಮಿಡಿಯಾ ಪುಣ್ಯವಾ ಎಂಬಂತೆ, ವಿಶ್ವದ ಮೂಲೆ ಮೂಲೆಯಲ್ಲಿ ನಡೆಯುವಂತಹ ಘಟನೆಗಳು ನಡೆಯುತ್ತಿರುತ್ತವೆ. ಕೆಲವೊಂದು ಕಳ್ಳತನಕ್ಕೆ ಸಂಬಂಧಿಸಿದ ವಿಡಿಯೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹುದೇ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರಿಗೆ ಬಂದೂಕು ತೋರಿಸಿ ಬೆದರಿಸಿ ಕಳ್ಳತನ ಮಾಡಲು ವ್ಯಕ್ತಿಯೋರ್ವ ಮುಂದಾಗುತ್ತಾನೆ. ಆದರೆ ಭಯಪಡದ ಮಹಿಳೆ ಆ ಕಳ್ಳನಿಗೆ ಸರಿಯಾದ ಪಾಠ ಕಲಿಸುತ್ತಾಳೆ. ಮಹಿಳೆಯ ಈ ಧೈರ್ಯಕ್ಕೆ ನೆಟ್ಟಿಗರು ಪ್ರಶಂಸೆ ಮಾಡುತ್ತಿದ್ದಾರೆ. […]
women beaten theif 0
error: Content is protected !!