Local News – ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವತ್ತಾ ಮುಂದಾಗಬೇಕು, ಪ್ರತಿನಿತ್ಯ ದಿನಪತ್ರಿಕೆ ಹಾಗೂ ಪುಸ್ತಕಗಳನ್ನು ಓದುವ ಮೂಲಕ ಕನ್ನಡ ಜ್ಞಾನ ಬೆಳೆಸಿಕೊಳ್ಳಬೇಕೆಂದು (Local News) ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷ ಕೋಡಿ ರಂಗಪ್ಪ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ (Local News) ಪಟ್ಟಣದ ಗಾಯತ್ರಿ ಪ್ರಸಾದ ಭವನದಲ್ಲಿ ನಡೆದ ಕಸಾಪ ನೂತನ ತಾಲೂಕು ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗುಡಿಬಂಡೆ ಗಡಿ ಭಾಗವಾದರೂ ಸಹ (Local News) ಅನೇಕ ಸಾಹಿತಿಗಳು, ಕವಿಗಳು ತಮ್ಮದೇ ಆದ ಕೊಡುಗೆಯನ್ನು ಕನ್ನಡಕ್ಕೆ ಸೇವೆ ಸಲ್ಲಿಸಿದ್ದಾರೆ. ಪ್ರತಿಯೊಬ್ಬರೂ ಪ್ರತಿನಿತ್ಯ ದಿನಪತ್ರಿಕೆ, ಪುಸ್ತಕಗಳನ್ನು ಓದುವ ಮೂಲಕ ಕನ್ನಡ ಜ್ಞಾನ ಬೆಳೆಸಿಕೊಳ್ಳಬೇಕು. (Local News) ಈ ಹಿಂದೆ ಗುಡಿಬಂಡೆ ಕಸಾಪ ತಾಲೂಕು (Local News) ಅಧ್ಯಕ್ಷರ ಆಯ್ಕೆಯ ಸಮಯದಲ್ಲಿ ಪ್ರೆಸ್ ಸುಬ್ಬರಾಯಪ್ಪನವರು ಅಧ್ಯಕ್ಷರಾಗಿದ್ದರು. ಇದೀಗ ಅವರು ತಮ್ಮ ಜವಾಬ್ದಾರಿಯನ್ನು ಬಿ.ಮಂಜುನಾಥ್ ರವರಿಗೆ ವಹಿಸಿಕೊಡುತ್ತಿದ್ದಾರೆ. (Local News) ಇಬ್ಬರೂ ಕನ್ನಡಾಂಭೆಯ ಸೇವೆ ಮಾಡಲಿ ಎಂದು ಶುಭ ಹಾರೈಸಿದರು.
ಬಳಿಕ ಕಸಾಪ ನಿಕಟಪೂರ್ವ ಅಧ್ಯಕ್ಷ ಪ್ರೆಸ್ ಸುಬ್ಬರಾಯಪ್ಪ (Local News) ಮಾತನಾಡಿ, ಕಸಾಪ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಸಮಯದಲ್ಲೇ ನಾನು ಇದೊಂದು ಹುದ್ದೆಯಲ್ಲ ಜವಾಬ್ದಾರಿ ಎಂದು ಹೇಳಿದ್ದೆ. (Local News) ಅದರಂತೆ ತಾವು ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ನಾನು ಅಧ್ಯಕ್ಷನಾಗುವ ಸಮಯದಲ್ಲಿ ಎರಡೂವರೆ ವರ್ಷದ ಬಳಿಕ ಬೇರೊಬ್ಬರಿಗೆ ಅಧ್ಯಕ್ಷ ಬಿಟ್ಟುಕೊಡುವುದಾಗಿ ತಿಳಿಸಿದ್ದೆ. (Local News) ನಾನು ಕೊಟ್ಟ ಮಾತಿನಂತೆ ಇದೀಗ ಮುಂದಿನ ಅವಧಿಗೆ ಬಿ.ಮಂಜುನಾಥ್ ರವರಿಗೆ ಜವಾಬ್ದಾರಿಯನ್ನು ಬಿಟ್ಟುಕೊಡುತ್ತಿದ್ದೇನೆ. ಕನ್ನಡ ಸೇವೆಗೆ ಮುಂದಾಗುವವರೆಲ್ಲರೂ (Local News) ಅಧ್ಯಕ್ಷರೇ ಆಗಿರುತ್ತಾರೆ. ಯಾರೂ ಸಹ ಅಧ್ಯಕ್ಷ ಗಾದಿ ಒಂದು ಹುದ್ದೆ ಎಂದು ಭಾವಿಸಿಕೊಳ್ಳಬಾರದು. (Local News) ಪ್ರತಿಯೊಬ್ಬರು ಮನಃಪೂರ್ವಕವಾಗಿ ಕನ್ನಡಾಂಭೆಯ ಸೇವೆ ಮಾಡಬೇಕು ಎಂದರು.
ಇನ್ನೂ ಗುಡಿಬಂಡೆ ತಾಲೂಕು ಅಧ್ಯಕ್ಷರಾಗಿ (Local News) ಅಧಿಕಾರ ವಹಿಸಿಕೊಂಡ ಬಿ.ಮಂಜುನಾಥ್ ಮಾತನಾಡಿ, ನನ್ನ ಮೇಲೆ ನಂಬಿಕೆಯಿಟ್ಟು ಕಸಾಪ ಅಧ್ಯಕ್ಷ ಸ್ಥಾನ ಕೊಟ್ಟಿದ್ದು, ನಿಮ್ಮೆಲ್ಲರ ಭರವಸೆಯನ್ನು ಉಳಿಸಿಕೊಂಡು ಕನ್ನಡಾಂಭೆಯ (Local News) ಸೇವೆ ಮಾಡುತ್ತೇನೆ. ಹಿಂದಿನ ಅಧ್ಯಕ್ಷರು, ಕಸಾಪ ಸಮಿತಿಯ ಸದಸ್ಯರುಗಳು, (Local News) ಸೇರಿದಂತೆ ಎಲ್ಲರ ಮಾರ್ಗದರ್ಶನದಲ್ಲಿ ನಾನು ಅಧ್ಯಕ್ಷ ಸ್ಥಾನವನ್ನು ನಿಭಾಯಿಸುತ್ತೇನೆ. ಹಿರಿಯರ ಮಾರ್ಗದರ್ಶನಂದತೆ ಮುಂದಿನ ದಿನಗಳಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇನೆ. (Local News) ನಿಮ್ಮೆಲ್ಲರ ಸಹಕಾರ ನನಗೆ ಅಗತ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದೈಹಿಕ (Local News) ಶಿಕ್ಷಣ ಶಿಕ್ಷಕರನ್ನು ಸನ್ಮಾನಿಸಲಾಯಿತು. ಗುಡಿಬಂಡೆ ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಸುಬ್ಬರಾಯಪ್ಪರವರು, ಮುಂದಿನ ಅವಧಿಯ ಅಧ್ಯಕ್ಷರಾ ಬಿ.ಮಂಜುನಾಥ್ ರವರಿಗೆ ಕನ್ನಡ ಭಾವುಟ (Local News) ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಈ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. (Local News) ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಸ.ನ.ನಾಗೇಂದ್ರ, ಅನುರಾಧ ಆನಂದ್, ಬಾಗೇಪಲ್ಲಿ ಕಸಾಪ ಅಧ್ಯಕ್ಷ ಕೃಷ್ಣಾರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಾಲಾಜಿ, ತಾಲೂಕು ಪತ್ರಕರ್ತರ ಸಂಘದ ಆರ್.ಬಾಲಾಜಿ, ಕಸಪಾ ತಾಲೂಕು ಘಟಕದ ವಿ.ಶ್ರೀರಾಮಪ್ಪ, ದ್ವಾರಕನಾಥನಾಯ್ಡು, ವಾಹಿನಿ ಸುರೇಶ್, ತಿಮ್ಮಾರೆಡ್ಡಿ, ಮುಖಂಡರಾದ ರಾಮನಾಥರೆಡ್ಡಿ, ರಿಯಾಜ್ ಪಾಷ ಸೇರಿದಂತೆ ಹಲವರು ಇದ್ದರು.