Saturday, July 5, 2025
HomeStateCrime News: ಮಂಗಳಮುಖಿಯನ್ನು ಪ್ರೀತಿಸಿದ ಯುವಕ, ಪ್ರೀತಿ ನಿರಾಕರಿಸಿದ್ದಕ್ಕೆ ಮಂಗಳಮುಖಿಗೆ ಚಾಕುವಿನಿಂದ ಇರಿದ ಯುವಕ…!

Crime News: ಮಂಗಳಮುಖಿಯನ್ನು ಪ್ರೀತಿಸಿದ ಯುವಕ, ಪ್ರೀತಿ ನಿರಾಕರಿಸಿದ್ದಕ್ಕೆ ಮಂಗಳಮುಖಿಗೆ ಚಾಕುವಿನಿಂದ ಇರಿದ ಯುವಕ…!

Crime News – ಪ್ರೀತಿ ಕುರುಡು ಎಂದು ಕರೆಯಲಾಗುತ್ತದೆ. ಅನೇಕ ಪ್ರೇಮಕಥೆಗಳ ಬಗ್ಗೆ ಕೇಳಿರುತ್ತೇವೆ. ಇಲ್ಲೊಂದು ಪ್ರೇಮಕಥೆಯಲ್ಲಿ ಯುವಕನೋರ್ವ ಮಂಗಳಮುಖಿಯನ್ನು ಪ್ರೀತಿಸುತ್ತಿರುತ್ತಾನೆ. ಕೆಲವೊಂದು ಕಾರಣಗಳಿಂದ ಇಬ್ಬರ ನಡುವೆ ಜಗಳವಾಗಿದ್ದು, (Crime News) ಆತನ ಪ್ರೀತಿಯನ್ನು ನಿರಾಕರಿಸಿದ ಕಾರಣಕ್ಕಾಗಿ ಮಂಗಳಮುಖಿಗೆ ಚಾಕುವಿನಿಂದ ಇರಿದಿದ್ದಾನೆ. ಬಳಿಕ ಪರಾರಿಯಾಗಲು ಪ್ರಯತ್ನಿಸಿದಾಗ ಸ್ಥಳೀಯರು ಆತನನ್ನು ಹಿಡಿದು (Crime News) ಪೊಲೀಸರಿಗೆ ಒಪ್ಪಿಸಿದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

Crime News – ಪ್ರೀತಿ ನಿರಾಕರಿಸಿದ್ದಕ್ಕೆ ಹಲ್ಲೆಗೆ ಯತ್ನ:

ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ ಕೋಟೆ ಪ್ರದೇಶದಲ್ಲಿ ಈ ಘಟನೆ (Crime News) ನಡೆದಿದೆ. ಹನೀಷಾ (21) ಎಂಬ ಮಂಗಳಮುಖಿಯನ್ನು ಮಂಡ್ಯ ಮೂಲದ ಆದಿಲ್ (23) ಎಂಬಾತ (Crime News) ಪ್ರೀತಿಸುತ್ತಿದ್ದನಂತೆ. ಕಳೆದ ಆರು ತಿಂಗಳಿಂದ ಇಬ್ಬರೂ ಪ್ರೀತಿಸಿಕೊಳ್ಳುತ್ತಿದ್ದಂರಂತೆ. ಇನ್ನೂ ಹನೀಷಾ ಆಗಾಗ ಅಲ್ಪಸಂಖ್ಯಾತರ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಬೇರೆ ಊರುಗಳಿಗೆ ಹೋಗುತ್ತಿದ್ದರು ಎನ್ನಲಾಗಿದೆ. ಆದರೆ ಇದು ಆದಿಲ್ ಗೆ (Crime News) ಇಷ್ಟವಿರಲಿಲ್ಲವಂತೆ. ಸಾಲದು ಎಂಬಂತೆ ಹನಿಷಾ ಮೇಲೆ ಹಲ್ಲೆ ಸಹ ಮಾಡುತ್ತಿದ್ದ ಎನ್ನಲಾಗಿದೆ.

Crime News – ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹನೀಷಾ

ಇನ್ನೂ ಈ ಕಾರಣದಿಂದ ಬೇಸತ್ತ ಹನೀಷಾ, ಆದಿಲ್ (Crime News) ಪ್ರೀತಿಯನ್ನು ನಿರಾಕರಿಸಿದ್ದಾಳೆ. ಈ ಕಾರಣದಿಂದ ಕಳೆದ ಬುಧವಾರ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಅವರಿಬ್ಬರ ಜಗಳ ವಿಕೋಪಕ್ಕೆ ತಿರುಗಿದ್ದು, (Crime News) ಕೋಪದಲ್ಲಿ ಆದಿಲ್ ಚಾಕುವಿನಿಂದ ಹನೀಷಾಗೆ ಇರಿದಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. (Crime News) ಆದರೆ ಅಲ್ಲಿದ್ದ ಸ್ಥಳೀಯರು ಆದಿಲ್ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. (Crime News) ಸದ್ಯ ಗಾಯಾಳು ಹನೀಷಾಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular