HomeStateLocal News - ಚಿಕ್ಕಕುರುಬರಹಳ್ಳಿ ವಿ.ಎಸ್.ಎಸ್.ಎನ್ ಅಧ್ಯಕ್ಷರಾಗಿ ನಾಗರಾಜರೆಡ್ಡಿ ಅವಿರೋಧ ಆಯ್ಕೆ….!

Local News – ಚಿಕ್ಕಕುರುಬರಹಳ್ಳಿ ವಿ.ಎಸ್.ಎಸ್.ಎನ್ ಅಧ್ಯಕ್ಷರಾಗಿ ನಾಗರಾಜರೆಡ್ಡಿ ಅವಿರೋಧ ಆಯ್ಕೆ….!

Local News : ಗುಡಿಬಂಡೆ ತಾಲೂಕಿನ ಚಿಕ್ಕಕುರುಬರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಪಾವಜೇನಹಳ್ಳಿ ನಾಗರಾಜರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ಚಿಕ್ಕಮ್ಮ ರವರುಗಳು ಆಯ್ಕೆಯಾಗಿದ್ದಾರೆಂದು ಮಂಜುನಾಥ್ ತಿಳಿಸಿದರು. ಈ ವೇಳೆ ಬೈರಪ್ಪ, ನಂದೀಶ್, ಜೀವಿಕ ನಾರಾಯಣಸ್ವಾಮಿ, ಅಶ್ವತ್ಥಪ್ಪ, ಜಗದೀಶ್, ವೆಂಕಟೇಶಪ್ಪ, ಬಾಲೇನಹಳ್ಳಿ ರಮೇಶ್,  ಅಂಜಿನಪ್ಪ ಸೇರಿದಂತೆ ಹಲವರು ನೂತನ ಆಡಳಿತ ಮಂಡಳಿಯನ್ನು ಅಭಿನಂದಿಸಿದರು.

Chikkakurubarahalli VSNN President Election 0

ತಾಲೂಕಿನ ಚಿಕ್ಕಕುರುಬರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಯ ಚುನಾವಣೆ ನಡೆದಿದ್ದು, ಈಗಾಗಲೇ ನಿರ್ದೇಶಕರುಗಳ ಆಯ್ಕೆ ನಡೆದಿತ್ತು. ಜ.27 ರಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಈ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ಒಬ್ಬರೇ ನಾಮಪತ್ರ ಸಲ್ಲಿಸಿದ ಕಾರಣ ಅಧ್ಯಕ್ಷರನ್ನಾಗಿ ಪಾವಜೇನಹಳ್ಳಿ ನಾಗರಾಜರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ಚಿಕ್ಕಮ್ಮ ರವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿ ತಿಳಿಸಿದರು.

Chikkakurubarahalli VSNN President Election 2

ಇನ್ನೂ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಪಾವಜೇನಹಳ್ಳಿ ನಾಗರಾಜರೆಡ್ಡಿ ಮಾತನಾಡಿ, ನನ್ನನ್ನು ಎರಡನೇ ಬಾರಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಎಲ್ಲಾ ನಿರ್ದೇಶಕರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಕಳೆದ ಬಾರಿ 80 ಲಕ್ಷ ಸಾಲ ನೀಡುವ ಗುರಿಯನ್ನು ಇಟ್ಟುಕೊಂಡಿದ್ದೇವು. ಈ ಬಾರಿ ರೈತರಿಗೆ, ಮಹಿಳಾ ಸಂಘಗಳಿಗೆ, ಕುರಿ, ಕೋಳಿ ಶೆಡ್ ನಿರ್ಮಾಣ ಮಾಡಲು ಸಾಲ ವಿತರಣೆ ಮಾಡುತ್ತೇವೆ. ಇದಕ್ಕಾಗಿ 1 ಕೋಟಿ ಸಾಲ ನೀಡುವ ಉದ್ದೇಶವನ್ನು ಇಟ್ಟುಕೊಂಡಿದ್ದೇವೆ. ನಮ್ಮ ಸಹಕಾರ ಸಂಘದ ಮೂಲಕ ಸಂಘದ ವ್ಯಾಪ್ತಿಯಲ್ಲಿ ರೈತರನ್ನು ಅಭಿವೃದ್ದಿ ಮಾಡುವ ಮುಖ್ಯ ಉದ್ದೇಶವನ್ನು ನಮ್ಮ ಆಡಳಿತ ಮಂಡಳಿ ಹೊಂದಿದೆ ಎಂದು ತಿಳಿಸಿದರು.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular