Maha Kumbh Mela : ಸದ್ಯ ದೇಶದಲ್ಲಿ ಮಹಾಕುಂಭ ಮೇಳ 2025 ಅದ್ದೂರಿಯಾಗಿ ನಡೆಯುತ್ತಿದೆ. ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಬಿಜೆಪಿ ನಾಯಕರು ಪವಿತ್ರ ಸ್ನಾನ ಮಾಡುತ್ತಿದ್ದು, ಇದನ್ನು ಕಾಂಗ್ರೇಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕೆ ಮಾಡಿದ್ದಾರೆ. ಗಂಗಾ ಸ್ನಾನ ಮಾಡಿದರೇ ಬಡತನ ನಿರ್ಮೂಲನೆಯಾಗೊಲ್ಲ, ಹಸಿದ ಹೊಟ್ಟೆಗಳು ತುಂಬಲ್ಲ ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ. ಅದಕ್ಕೆ ಬಿಜೆಪಿ ಇಫ್ತಾರ್ ನಿಂದ ಶ್ರೀಮಂತಿಕೆ ಬರುತ್ತದೆಯೇ ಎಂದು ಕೌಂಟರ್ ಕೊಟ್ಟಿದೆ.

ಮಧ್ಯಪ್ರದೇಶದ ಮಹುವಿನಲ್ಲಿ ನಡೆದ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್ ಎಂಬ ರಾಲಿಯನ್ನು ಉದ್ದೇಶಿಸಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ರವರು, ಗಂಗೆಯಲ್ಲಿ ಸ್ನಾನ ಮಾಡುವುದರಿಂದ ದೇಶದಲ್ಲಿ ಬಡತನ ನಿರ್ಮೂಲನೆಯಾಗುತ್ತದೆಯೇ, ಹಸಿದ ಹೊಟ್ಟೆಗಳು ತುಂಬುತ್ತವೆಯೇ ಎಂದು ಪ್ರಶ್ನೆ ಮಾಡಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ರವರ ಗಂಗಾ ಸ್ನಾನದ ಕುರಿತು ಪರೋಕ್ಷವಾಗಿ ಟೀಕೆ ಮಾಡಿದ್ದಾರೆ. ಪ್ರಧಾನಿಗಳು ಒಂದು ಕಡೆ ಸಂವಿಧಾನಕ್ಕೆ ವಂದನೆ ಸಲ್ಲಿಸಿದರೇ, ಮತ್ತೊಂದು ಕಡೆ ಅದಕ್ಕೆ ವಿರುದ್ದವಾಗಿ ನಡೆದುಕೊಳ್ಳುತ್ತಾರೆ. ಮೋದಿಯವರ ಸುಳ್ಳು ಭರವಸೆಗಳಿಗೆ ದೇಶದ ಜನರು ಮರಳಾಗಬಾರದು ಎಂದಿದ್ದಾರೆ.

ಇನ್ನೂ ದೇಶದಲ್ಲಿ ಮಕ್ಕಳು ಹಸಿವಿನಿಂದ ಸಾಯುತ್ತಿದ್ದಾಗ, ಬಿಜೆಪಿ ನಾಯಕರು ಮಾತ್ರ ಗಂಗಾ ನದಿಯಲ್ಲಿ ಸ್ನಾನ ಮಾಡಲು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಈ ರೀತಿಯಿದ್ದಾಗ ಬಿಜೆಪಿ ನಾಯಕರಿಂದ ಹೇಗೆ ಒಳ್ಳೆಯದನ್ನು ನಿರೀಕ್ಷೆ ಮಾಡಲು ಸಾಧ್ಯ. ನಾವು ಯಾರ ನಂಬಿಕೆಯನ್ನೂ ಪ್ರಶ್ನೆ ಮಾಡುತ್ತಿಲ್ಲ. ಆದರೆ ಧರ್ಮದ ಹೆಸರಿನಲ್ಲಿ ಬಡವರನ್ನು ಶೋಷಣೆ ಮಾಡುವುದರ ವಿರುದ್ದ ಮಾತನಾಡುತ್ತೇವೆ. ನಂಬಿಕೆ ಅನ್ನೋದು ವ್ಯಕ್ತಿಯೊಬ್ಬರ ಖಾಸಗಿ ವಿಷಯವೇ ವಿನಃ ರಾಜಕಾರಣದಲ್ಲಿ ಅದನ್ನು ಬೆರೆಸವು ಮೂಲಕ ಬಿಜೆಪಿ ಸಮಾಜವನ್ನು ಪಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.
ಇನ್ನೂ ಕಾಂಗ್ರೇಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರ ಈ ಹೇಳಿಕೆಗೆ ಬಿಜೆಪಿ ಕೌಂಟರ್ ಕೊಟ್ಟಿದೆ. ಈ ಕುರಿತು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಮಾತನಾಡಿದ್ದು, ಕಾಂಗ್ರೇಸ್ ನ ಧರ್ಮ ದ್ವೇಷ ದೇಶದ ಕೋಟ್ಯಂತರ ಹಿಂದೂಗಳ ಮೇಳೆ ಧಾಳಿ ನಡೆಸಿದಂತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಶತಮಾನಗಳಿಂದ ಮಹಾಕುಂಭ ಮೇಳವು ಸನಾತನ ಧರ್ಮದ ಸಂಕೇತವಾಗಿದೆ. ಇಡೀ ಪ್ರಪಂಚವೇ ಈ ನಂಬಿಕೆಯನ್ನು ಗೌರವಿಸುತ್ತಿದೆ. ಆದರೆ ಕಾಂಗ್ರೇಸ್ ಮಾತ್ರ ಹಿಂದೂಗಳ ನಂಬಿಕೆಯನ್ನು ಅಪಹಾಸ್ಯ ಮಾಡುತ್ತಿದೆ. ಸೋನಿಯಾಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ್ ಖರ್ಗೆ ರವರು ಇದೇ ಮಾದರಿಯಲ್ಲಿ ಬೇರೆ ನಂಬಿಕೆಗಳನ್ನು ಮಾತನಾಡುವಂತೆ ನಾನು ಸವಾಲು ಹಾಕುತ್ತೇನೆ. ಇಫ್ತಾರ್ ಗೆ ಹೋಗುವುದರಿಂದ ಜನರಿಗೆ ಉದ್ಯೋಗಗಳು ಸಿಗುತ್ತದೆಯೇ ಅಥವಾ ಬಡನ ನಿರ್ಮೂಲನೆ ಆಗುತ್ತದೆಯೇ ಎಂಬುದನ್ನು ಕಾಂಗ್ರೇಸ್ ನಾಯಕರನ್ನು ನಾವು ಪ್ರಶ್ನೆ ಮಾಡುತ್ತೇವೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.