Local News : ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕು ವಕೀಲರ ಸಂಘದ ಅಧ್ಯಕ್ಷರಾಗಿ ಟಿ.ಸಿ.ಅಶ್ವತ್ಥರೆಡ್ಡಿ ಹಾಗೂ ಕಾರ್ಯದರ್ಶಿಯಾಗಿ ಸಿ.ವಿ.ಮಂಜುನಾಥ್ ಚುನಾವಣೆಯ ಮೂಲಕ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ರಾಮಮೂರ್ತಿ ಘೋಷಣೆ ಮಾಡಿದರು. ಇನ್ನೂ ಈ ವೇಳೆ ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೆ ಹಿರಿಯ ಹಾಗೂ ಕಿರಿಯ ವಕೀಲರು ಅಭಿನಂದನೆ ತಿಳಿಸಿದರು.
ತಾಲೂಕು ವಕೀಲರ ಸಂಘದ ಮುಂದಿನ 2 ವರ್ಷಗಳ ಆಡಳಿತ ಅವಧಿಗೆ ಚುನಾವಣೆ ನಿಗಧಿಯಾಗಿದ್ದು, ಅದರಂತೆ ನಡೆದ ಜ.27 ರಂದು ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಆಯ್ಕೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಟಿ.ಸಿ.ಅಶ್ವತ್ಥರೆಡ್ಡಿ, ಎ.ಗಂಗಾಧರಪ್ಪ, ಪಿ.ಶಿವಪ್ಪ, ಎ ಗಂಗಾಧರಪ್ಪ, ಪಿ.ವಿ.ಲಕ್ಷ್ಮೀನಾರಾಯಣಪ್ಪ ನಾಮಪತ್ರ ಸಲ್ಲಿಸಿದ್ದರು ಹಾಗೂ ಕಾರ್ಯದರ್ಶಿ ಸ್ಥಾನಕ್ಕೆ ಸಿ.ವಿ.ಮಂಜುನಾಥ ಹಾಗೂ ಎ.ಗಿರೀಶ್ ನಾಮಪತ್ರ ಸಲ್ಲಿಸಿದ್ದರು. ಈ ಕಾರಣದಿಂದ ಚುನಾವನೆ ನಡೆಯಿತು. ಒಟ್ಟು 31 ಮತದಾರರಿದ್ದು, ಈ ಪೈಕಿ 17 ಮತಗಳನ್ನು ಪಡೆದು ಟಿ.ಸಿ.ಅಶ್ವತ್ಥರೆಡ್ಡಿ ಅಧ್ಯಕ್ಷರಾಗಿ ಹಾಗೂ ಸಿ.ವಿ.ಮಂಜುನಾಥ್ 17 ಮತಗಳನ್ನು ಪಡೆದು ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಉಪಾಧ್ಯಕ್ಷರಾಗಿ ಕೆ.ಆರ್.ಮಂಜುನಾಥ್, ಖಜಾಂಚಿಯಾಗಿ ಬಾಬು, ಜಂಟಿ ಕಾರ್ಯದರ್ಶಿಯಾಗಿ ಬಿ.ಆರ್.ಮಹೇಶ್ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ವೇಳೆ ವಕೀಲರ ಸಂಘದ ನೂತನ ಅಧ್ಯಕ್ಷ ಟಿ.ಸಿ.ಅಶ್ವತ್ಥರೆಡ್ಡಿ ಮಾತನಾಡಿ, ನನ್ನ ಮೇಲಿನ ನಂಬಿಕೆಯಿಂದ ನನಗೆ ಮತ ಚಲಾಯಿಸಿದ ಎಲ್ಲಾ ಹಿರಿಯ ಹಾಗೂ ಕಿರಿಯ ವಕೀಲರಿಗೆ ಧನ್ಯವಾದಗಳನ್ನು ತಿಳಿಸಿ, ಯಾವುದೇ ರಾಜಕೀಯ ಮಾಡದೇ ಎಲ್ಲ ಹಿರಿಯ ವಕೀಲರ ಸಲಹೆ ಸೂಚನೆಗಳನ್ನು ಪಾಲಿಸುತ್ತಾ, ಕಿರಿಯ ವಕೀಲರನ್ನು ಜೊತೆಗೂಡಿಸಿಕೊಂಡು ಸಂಘದ ಅಭಿವೃದ್ದಿಗೆ ಶ್ರಮಿಸುತ್ತೇನೆ. ಅಭಿವೃದ್ದಿ ಕೆಲಸಗಳಿಗೆ ಎಲ್ಲಾರೂ ಒಂದಾಗಿ ಶ್ರಮಿಸೋಣ ಎಂದರು.
ಈ ಸಮಯದಲ್ಲಿ ಹಿರಿಯ ವಕೀಲರಾದ ರಾಮನಾಥರೆಡ್ಡಿ, ಶಿವಾನಂದರೆಡ್ಡಿ, ನಾರಾಯಣಸ್ವಾಮಿ, ನಂದೀಶ್ವರರೆಡ್ಡಿ, ಶಿವಪ್ಪ, ಅಭಿಷೇಕ್, ಗಿರೀಶ್, ಚೇತನ್, ಸುರೇಶ್, ಮಂಜುನಾಥ್, ನರೇಂದ್ರ, ವಕ್ಕಲಿಗರ ಸಂಘದ ಅಧ್ಯಕ್ಷ ಮಂಜುನಾಥರೆಡ್ಡಿ ರವರುಗಳು ಹಾಜರಿದ್ದರು.