Local News – ದಲಿತರ ಸಮಸ್ಯೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದಲಿತ ಕುಂದು ಕೊರತೆಗಳ ಸಭೆಯನ್ನು ಏರ್ಪಡಿಸಿದ್ದು, ಈ ಸಭೆಗೆ ತಹಸೀಲ್ದಾರ್, ತಾ.ಪಂ ಇ.ಒ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು (Local News) ಗೈರಾಗಿದ್ದು, ಈ ಸಂಬಂಧ ತಾಲೂಕು ದಲಿತ ಮುಖಂಡರು ಆಕ್ರೋಷ ಹೊರಹಾಕಿದ ಘಟನೆ ನಡೆಯಿತು.
ಈ ಸಂಬಂಧ (Local News) ದಸಂಸ ಮುಖಂಡ ಜಿ.ವಿ.ಗಂಗಪ್ಪ ಮಾತನಾಡಿ, ತಾಲೂಕಿನಲ್ಲಿನ ದಲಿತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪೊಲೀಸ್ ಠಾಣೆಯಲ್ಲಿ ದಲಿತರ ಕುಂದು ಕೊರತೆಗಳ ಸಭೆಯನ್ನು ಆಯೋಜಿಸಲಾಗಿದೆ. (Local News) ಆದರೆ ಈ ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳೇ ಬಂದಿಲ್ಲ. ಈ ಹಿಂದೆ ಇದೇ ವಿಚಾರವಾಗಿ ತಾಲೂಕು ಆಡಳಿತಕ್ಕೆ ಮನವಿ ನೀಡಲಾಗಿದೆ. ದಲಿತರ ಕುಂದು ಕೊರತೆಗಳ ಸಭೆಗೆ ತಾಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಭಾಗವಹಿಸಬೇಕೆಂದು ಮನವಿ ನೀಡಿದ್ದೇವೆ. ಆದರೆ ನಮ್ಮ ಮನವಿ ಕಸದ ಬುಟ್ಟಿಗೆ ಸೇರಿದೆ. ಸರ್ಕಾರಕ್ಕೆ ದಲಿತರನ್ನು ಉದ್ದಾರ ಮಾಡುವ ಉದ್ದೇಶವೇನೋ ಇದೆ, (Local News) ಆದರೆ ಇಲ್ಲಿನ ಅಧಿಕಾರಿಗಳಿಗೆ ಈ ಸಂಬಂಧ ಕಾಳಜಿಯೇ ಇಲ್ಲ. ತಾಲೂಕು ಮಟ್ಟದ ಅಧಿಕಾರಿಗಳು ಇಲ್ಲದೇ ಇದ್ದಾಗ ನಮ್ಮ ಸಮಸ್ಯೆಗಳು ಯಾವ ರೀತಿ ಬಗೆಹರಿಯುತ್ತದೆ. ಪೊಲೀಸ್ ಇಲಾಖೆಯವರು ತಮ್ಮ ವ್ಯಾಪ್ತಿಯಲ್ಲಿ ಸಭೆ ನಡೆಸುತ್ತಾರೆ. (Local News) ಅವರು ಕಾನೂನು ಸುವ್ಯವಸ್ಥೆಯ ಸಮಸ್ಯೆಗಳನ್ನು ಬಗೆಹರಿಸಬಹುದು. ಬೇರೆ ಇಲಾಖೆಗಳಲ್ಲಿನ ಸಮಸ್ಯೆಗಳನ್ನು ಹೇಗೆ ಬಗೆಹರಿಸಲು ಸಾಧ್ಯ. ಸಮಸ್ಯೆಗಳು ಬಗೆಹರಿಯದೇ ಇದ್ದಾಗ ಇಂತಹ ಸಭೆಗಳು ನಡೆದರೇ ಏನು, ನಡೆಯದಿದ್ದರೇ ಏನು ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನೂ ಮತ್ತೋರ್ವ ಮುಖಂಡ ಆದಿನಾರಾಯಣಪ್ಪ ಮಾತನಾಡಿ, ಈ ಹಿಂದೆ ಸಹ ಅನೇಕ ಭಾರಿ ದಲಿತ ಕುಂದು ಕೊರತೆಗಳ ಸಭೆಯನ್ನು ನಡೆಸಲಾಗಿತ್ತು. ಸಭೆಯಲ್ಲಿ ತಿಳಿಸಲಾದ ಸಮಸ್ಯೆಗಳು ಎಷ್ಟು ತೀರ್ಮಾನವಾಗಿದೆ. (Local News) ದಲಿತರ ಸಮಸ್ಯೆಗಳಿಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೇ ಸಭೆಯಲ್ಲಿ ಇಲ್ಲ ಅಂದ ಮೇಲೆ ಸಭೆ ನಡೆಸುವ ಉದ್ದೇಶವಾದರೂ ಏನು. ಪೊಲೀಸ್ ಇಲಾಖೆಯ ಅಧಿಕಾರಿಗಳು ತಮ್ಮ ಆದೇಶದಂತೆ ಸಭೆ ನಡೆಸುತ್ತಿದ್ದಾರೆ. (Local News) ದಲಿತ ಸಂಘಟನೆಗಳ ವತಿಯಿಂದ ಈ ಹಿಂದೆ ನೀಡಿದಂತಹ ಮನವಿಯಂತೆ ಮುಂದಿನ ಸಭೆಯಲ್ಲಿ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸಬೇಕು. ಇಲ್ಲವಾದಲ್ಲಿ ನಾವು ಸಭೆಗಳಿಗೆ ಹಾಜರಾಗುವುದಿಲ್ಲ ಎಂದರು.
ಈ (Local News) ವೇಳೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಣೇಶ್, ಪೊಲೀಸ್ ಸಿಬ್ಬಂದಿ, ದಲಿತಪರ ಸಂಘಟನೆಗಳ ಮುಖಂಡರಾದ ಚೆನ್ನರಾಯಪ್ಪ, ಇಸ್ಕೂಲಪ್ಪ, ರಮಣಪ್ಪ, ರಾಮಾಂಜಿನಪ್ಪ, ನಾರಾಯಣಸ್ವಾಮಿ ಸೇರಿದಂತೆ ಹಲವರು ಇದ್ದರು.